Inspiration Story: ಕೊರೊನಾ ಇರಲಿ, ಏನೇ ಬರಲಿ; ನಾನು ಗೆದ್ದೇ ಗೆಲ್ಲುವೆ! ಓದಿ ಕೊಪ್ಪಳದ ಯುವಕನ ರೋಚಕ ಕಥೆ
ಇನ್ನೊಬ್ಬರ ಅಡಿ ಆಳಾಗಿ ದುಡಿಯದೇ ತನ್ನದೇ ಒಂದು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ತಾನೇ ಹತ್ತಾರೂ ಜನರಿಗೆ ಕೆಲಸ ಕೊಡುವ ರೀತಿಯಲ್ಲಾಗಬೇಕು ಎಂಬ ಇಚ್ಛೆ ಹೊಂದಿದ್ದ ಯುವಕನೋರ್ವ ಕೊವಿಡ್ ಸಮಯದಲ್ಲೂ ಸಾಧಿಸಿದ ಯಶೋಗಾಥೆ ಇಲ್ಲಿದೆ.
ಕೊಪ್ಪಳ: ಕೊರೊನಾದಿಂದ ದೇಶಕ್ಕೆ ದೇಶವೇ ಲಾಕ್ಡೌನ್ (Covid 19 Lockdown) ಆಯಿತು. ಇದರಿಂದ ಜನರಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಕಾಲಹರಣ ಮಾಡಬೇಕಾಗ ಸ್ಥಿತಿ ಬಂದೊದಗಿತ್ತು. ಅದೆಷ್ಟೋ ಜನರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು. ಅದೇ ರೀತಿ ಖಾಸಗಿ ಕಂಪನಿಯಲ್ಲಿ ಒಂದರಲ್ಲಿ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ ಓರ್ವ ಇಂಜಿನಿಯರ್ ಸಹ ತಮ್ಮ ಹಳ್ಳಿಗೆ ಮರಳಿದರು. ಬೇರೆಯವರಂತೆ ಕೆಲಸವಿಲ್ಲವೆಂದು ಇವರು ಹತಾಶರಾಗದೇ ಸ್ವಯಂ ತಮ್ಮ ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗದ (Self Employment) ಕುರಿತು ವಿಚಾರಿಸಿ ಆನ್ಲೈನ್ನಲ್ಲಿ ಮಾಹಿತಿ ಕಲೆಹಾಕಿದರು. ದೋನಾ ಪ್ಲೇಟ್ ತಯಾರಕ ಮಶಿನ್ ಖರೀದಿಸಿ (Dona Plate Production Machine) ಇಂದು ತಿಂಗಳಿಗೆ ಒಂದು ಲಕ್ಷದವರೆಗೆ ಸಂಪಾದನೆ ಮಾಡುತ್ತಿದ್ದಾರೆ!
ಕೊರೊನಾ ಬಂದ ಸಂದರ್ಭದಲ್ಲಿ ಅನೇಕರಂತೆ ಇವರು ತಮ್ಮ ಹಳ್ಳಿಗೆ ಬಂದರು. ಬೇರೆಯವರಂತೆ ಕೆಲಸವಿಲ್ಲವೆಂದು ಹತಾಶರಾಗದೇ ತಮ್ಮ ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗದ ಕುರಿತು ವಿಚಾರಿಸಿ ಆನ್ಲೈನ್ನಲ್ಲಿ ಮಾಹಿತಿ ಕಲೆಹಾಕಿದರು. ದೆಹಲಿ ಮೂಲದ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ದೋನಾ ಪ್ಲೇಟ್ ತಯಾರಿಸುವ ಮಶಿನ್ ಖರಿದಿಸಿ ಇಂದು ತಿಂಗಳಿಗೆ ಒಂದು ಲಕ್ಷದವರೆಗೆ ಸಂಪಾದನೆ ಮಾಡುತ್ತಿದ್ದಾರೆ.
ಹತ್ತಾರೂ ಜನರಿಗೆ ಕೆಲಸ ಕೊಡಬೇಕು! ಇನ್ನೊಬ್ಬರ ಅಡಿ ಆಳಾಗಿ ದುಡಿಯದೇ ತನ್ನದೇ ಒಂದು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಅಲ್ಲದೇ ತಾನೇ ಹತ್ತಾರೂ ಜನರಿಗೆ ಕೆಲಸ ಕೊಡುವ ರೀತಿಯಲ್ಲಾಗಬೇಕು ಎಂದು ತಾನು ಮಾಡುತ್ತಿದ್ದ ಕೆಲಸ ಬಿಟ್ಟು ಆನ್‌ಲೈನ್ ಮೂಲಕ ದೋನಾ ಪ್ಲೇಟ್ ತಯಾರಿಕೆ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ದೆಹಲಿ ಮೂಲದ ಕಂಪನಿಯೊಂದಿಗೆ ಅಗ್ರಿಮೆಂಟ್ ಮಾಡಿಕೊಂಡು ತಮ್ಮ ಹಳ್ಳಿಯ ಮನೆಯಲ್ಲಿಯೇ ಈ ದೋನಾ ಪ್ಲೇಟ್ ಘಟಕ ಸ್ಥಾಪಿಸಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಾ ತಾನೇ ಹತ್ತಾರು ಜನರಿಗೆ ಕೆಲಸ ಕೊಡುತ್ತಿದ್ದಾರೆ.
ಅಗತ್ಯವಿರುವ ಕಚ್ಚಾವಸ್ತುಗಳೇನು?
ಈ ದೋನಾಪೇಟ್ ತಯಾರಿಗೆ ಪಾಲಿಕೋಟೆಡ್ ವಸ್ತುವಿನಿಂದ ತಯಾರಾದ ಕಚ್ಚ ವಸ್ತುವಿನಿಂದ ತಯಾರಿಸಲಾಗುತ್ತದೆ. ಮೇಲಿನ ಭಾಗದಲ್ಲಿ ಮುದ್ರಿತ ಸಿಲ್ವರ್ ಬಣ್ಣದ ಹಾಳೆ ಇದ್ದು, ನೋಡುಗರಿಗೆ ಬೆಳ್ಳಿಯಂತೆಯೆ ಕಂಗೊಳಿಸುತ್ತದೆ. ಇದರಲ್ಲಿ 70 ರಿಂದ 200 ಜಿಎಸ್ ಎಮ್ವರೆಗೆ ಬಳಸಬಹುದು. ಜಿಎಸ್ಎಮ್ ಮೆಲೆ ಪ್ಲೇಟ್ಗಳ ದರ ನಿಗದಿಯಾಗುತ್ತದೆ.
ಈ ಕಚ್ಚಾವಸ್ತುಗಳನ್ನು ದೆಹಲಿಯಿಂದ ಖರೀದಿಸಲಾಗುತ್ತದೆ. ಇದರ ಪ್ರತಿ ಕೆಜಿಗೆ 82 ರೂಪಾಯಿ. ಒಂದು ಕೆಜಿ ಕಚ್ಚಾವಸ್ತುವಿನಲ್ಲಿ ಸರಿಸುಮಾರು 350 ರಿಂದ 400 ಪ್ಲೇಟ್ ತಯಾರಿಸಬಹುದು. ಪ್ರತಿದಿನ ಸರಿಸುಮಾರು 20 ಸಾವಿರ ಪ್ಲೇಟ್ಗಳನ್ನು ಎರಡು ಡೈ ಇರುವ ಮಶೀನ್ನಲ್ಲಿ ತಯಾರಿಸಬಹುದು.
ಯಾವ ಪ್ಲೇಟ್ ತಯಾರಿಸುತ್ತಾರೆ? ಈ ಮಶಿನ್ನಲ್ಲಿ ಪಾನಿಪೂರಿ ತಿನ್ನಲು ಬಳಸುವ 4 ಇಂಚಿನ ಪೇಪರ್ ಪ್ಲೇಟ್ನಿಂದ ಹಿಡಿದು ಊಟಮಾಡುವ ಪೇಪರ್ ಪ್ಲೇಟ್ ಹಾಗೂ ಟಿಪಿನ್ಗೆ ಬಳಸುವ ಪ್ಲೇಟ್ಗಳನ್ನು ಸಹ ಈ ಮಶಿನ್ ನಲ್ಲಿಯೇ ಮಾಡಲಾಗುತ್ತದೆ.
ಜನರನ್ನು ಹೇಗೆ ತಲುಪುತ್ತಾರೆ? ದೋನಾ ಪ್ಲೇಟ್ಗೆ ವಿಶೇಷವಾಗಿ ಮಾರ್ಕೆಟಿಂಗ್ ಮಾಡಬೇಕು ಎನ್ನುವ ಅವಶ್ಯಕತೆಯಿಲ್ಲ. ಏಕೆಂದರೆ ತಯಾರಾದ ಪ್ಲೇಟ್ಗಳನ್ನು ಮಶಿನ್ ಖರೀದಿಸಿ ಕಂಪನಿಯವರೇ ಖರೀದಿಸುವುದರಿಂದ ಮಾರುಕಟ್ಟೆಯ ಚಿಂತೆ ಮಾಡಬೇಕಂತಿಲ್ಲ. ಮಾರುಕಟ್ಟೆಯ ಸಮಸ್ಯೆಯು ಬರುವುದಿಲ್ಲ ಅಂತಾರೆ ಕೆಲಸ ಸಿಗುತ್ತಿಲ್ಲ ಎಂದು ಚಿಂತಿಸುತ್ತಿರುವ ಅದಎಷ್ಟೊ ಯುವಕರಿಗೆ ಮಾದರಿಯಾಗಿದ್ದಾರೆ.