Koppal Trekking Place: 80 ಅಡಿ ಎತ್ತರದ ಕಲ್ಲಿನ ಮೇಲೊಂದು ಮರ! ಈ ಕಾಡಿಗೆ ಕಲ್ಲೇ ರಾಜ ರಾಣಿ ಎಲ್ಲ!

ನಾವು ನೀವು ನೆಲದ ಮೇಲೆ ಯಾವುದಾದರೂ ಗಿಡ ನೆಟ್ಟು ಅದಕ್ಕೆ ನೀರು ಹಾಕುತ್ತ ಅದರ ಪಾಲನೆ ಮಾಡುತ್ತಿದ್ದರೂ ಕೆಲವೊಮ್ಮೆ ಬಾಡಿಹೋಗುತ್ತದೆ. ಆದರೆ ಈ ಗಿಡಕ್ಕೆ 80 ಅಡಿ ಎತ್ತರದಲ್ಲಿ ಹೋಗಿ ನೀರುಣಿಸಿದವರಾರು?

80 ಅಡಿ ಎತ್ತರದ ಕಲ್ಲು

80 ಅಡಿ ಎತ್ತರದ ಕಲ್ಲು

 • Share this:
  ಕೊಪ್ಪಳ: ಕಣ್ಣಿಗೆ ಕಾಣುವಷ್ಟು ದೂರ ಮುಗಿಲು ಚುಂಬಿಸುವಂತೆ ನಿಂತ ಹಚ್ಚ ಹಸಿರಿನ ಗುಡ್ಡ. ಅದು ಸೌಂದರ್ಯ ಪ್ರಿಯರನ್ನು ಸೆಳೆಯುವ ತಾಣ. ನೋಡುಗರನ್ನು ಸ್ವಾಗತಿಸಲು ಎಂದೇ ನಿಂತಂತಿರುವ ಅಳಿಲುಗಳು, ಕಿವಿಗೆ ಸಂಗೀತ ಕೇಳಿಸುವ ಹಕ್ಕಿ ಪಕ್ಷಿಗಳು, ಕಣ್ಣಿಗೆ ಕಾಣುವ ನವಿಲುಗಳ ನಾಟ್ಯ, ವಿವಿಧ ಪ್ರಾಣಿಗಳ ಘರ್ಜನೆ, ದೇವರ ಪೂಜೆಗೆ ಸಿದ್ಧವಾಗಿ ನಿಂತ ಸುಂದರ ಹೂಗಳು, ದಾಹ ಇಂಗಿಸಲು ಪುರಾತನ ಬಾವಿಯ ನೀರು. ಈ ಎಲ್ಲದರ ನಡುವೆ ಮುಗಿಲೆತ್ತರಕ್ಕೆ ನಿಂತು ಈ ಕಾಡಿಗೆ (Koppal Forest) ನಾನೇ ರಾಜ ಎಂದು ಎನ್ನುತ್ತಿದೆ ಹದ್ದಿನ ಕಲ್ಲು ಅಥವಾ ಸ್ಥಳೀಯರ ಶೈಲಿಯಲ್ಲಿ "ಹದ್ದಿನ ಗುಂಡು"!  ಇದನ್ನೆಲ್ಲ ನೀವು ಕಣ್ಣು ತುಂಬಿಕೊಡು ಸವಿಯಬೇಕೆ? ಹಾಗಾದರೆ ಕೊಪ್ಪಳ (Koppal)  ರಾಯಚೂರು ರಸ್ತೆಯಲ್ಲಿರುವ ಬೆಣಕಲ್  ಹತ್ತಿರ ಬನ್ನಿ. ನಿಮ್ಮನ್ನು ಅಲ್ಲಿಗೇ ಕರೆದೊಯ್ಯುತ್ತೇವೆ (Koppal Trekking Place) ಬನ್ನಿ!.

  ಈ ಸ್ಥಳಕ್ಕೆ ತಲುಪುವುದು ಹೇಗೆ?
  ಕೊಪ್ಪಳ ರಾಯಚೂರು ರಸ್ತೆಯಲ್ಲಿರುವ ಬೆಣಕಲ್  ಹತ್ತಿರದ ಕಾಡಿನಲ್ಲಿ ಸುಮಾರು 10 ರಿಂದ 15 ಕಿ.ಮೀ ಕ್ರಮಿಸಿದರೆ ಒಂದು ದೊಡ್ಡ ಕಲ್ಲು ಕಾಣಸಿಗುತ್ತದೆ. ಅದರ ಸುತ್ತಮುತ್ತ ಯಾವುದೇ ಕಲ್ಲುಗಳಿಲ್ಲದೇ ಆ ಕಲ್ಲು ಮಾತ್ರ ಕಾಣಿಸುತ್ತದೆ. ಅದರ ವಿಶೇಷತೆ ಎಂದರೆ ಸುಮಾರು 70 ರಿಂದ  80 ಅಡಿಯಷ್ಟು ಎತ್ತರದ ಆ ಕಲ್ಲಿನ ಮೇಲೊಂದು ಮರ! ಎಷ್ಟು ಸುಂದರ ಅಲ್ಲವೇ? ಅಂದಹಾಗೆ ಈ ಕಲ್ಲು ಕೊಪ್ಪಳದವರಿಗೆ ಒಂದು ದಿನದ ಪಿಕ್​ನಿಕ್ ಸ್ಪಾಟ್ ಆಗಬಹುದು.

  ಇದನ್ನೂ ಓದಿ: Trekking In Koppal: ಪ್ರತಿ ತಿಂಗಳ 2ನೇ ಭಾನುವಾರ ಎಲ್ಲೂ ಹೋಗ್ಬೇಡಿ, ಇಲ್ಲಿಗೆ ಬರೋಕೆ ಮರೀಬೇಡಿ!

  ನಾವು ನೀವು ನೆಲದ ಮೇಲೆ ಯಾವುದಾದರೂ ಗಿಡ ನೆಟ್ಟು ಅದಕ್ಕೆ ನೀರು ಹಾಕುತ್ತ ಅದರ ಪಾಲನೆ ಮಾಡುತ್ತಿದ್ದರೂ ಕೆಲವೊಮ್ಮೆ ಬಾಡಿಹೋಗುತ್ತದೆ. ಆದರೆ ಈ ಗಿಡಕ್ಕೆ 80 ಅಡಿ ಎತ್ತರದಲ್ಲಿ ಹೋಗಿ ನೀರುಣಿಸಿದವರಾರು? ಅದರ ಪಾಲನೆ ಪೋಷಣೆ ಮಾಡಿದವರಾರು ಎಂಬೆಲ್ಲಾ ಪ್ರಶ್ನೆ ಕಾಡದೇ ಇರದು!

  ಹದ್ದುಗಳ ವಾಸಸ್ಥಾನ ಈ ಬೃಹತ್ ಕಲ್ಲು
  ಈ ಸುಂದರವಾದ ಕಾಡಿನಲ್ಲಿರುವ ಎಲ್ಲಾ ಹದ್ದುಗಳು ಕತ್ತಲಾಗುತ್ತಲೇ ಬಂದು ಇದೇ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದವು ಎನ್ನುವುದು ಮತ್ತೊಂದು ವಿಶೇಷ. ಈ ಸ್ಥಳಕ್ಕೆ ಹೋಗಿಬರಬೇಕು ಎಂದರೆ, ಅದು ಸಾಹಸವೇ ಸರಿ. ಅಷ್ಟು ಭರ್ಜರಿಯಾಗೇ ಇದೆ ಈ ಹದ್ದಿನ ಗುಂಡು ತಲುಪುವುದು ದಾರಿ ಸಹ!

  Benakal Stone Koppal
  ಕೊಪ್ಪಳದ ಈ ಕಲ್ಲಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಕರಡಿ, ಚಿರತೆಗಳೂ ಇವೆ, ಯಾವುದಕ್ಕೂ ಹುಷಾರು!
  ಏಕೆಂದರೆ ಈ ಸ್ಥಳದಲ್ಲಿ ಆಕಾಶದಷ್ಟು ಎತ್ತರದ ಮರಗಳು, ಜಾಲಿಗಂಟಿಗಳು, ಪೊದೆಗಳು ತುಂಬಿಕೊಂಡಿವೆ.  ಸರಿಯಾಗಿ ಕಾಲುಜಾಡು ಇರದಂತೆ ರಸ್ತೆಯನ್ನು ಮುಚ್ಚಿಕೊಂಡಿರುವ ಗಿಡಗಂಟೆಗಳಿವೆ. ಇನ್ನೂ ಈ ಸ್ಥಳದಲ್ಲಿ ಕರಡಿ, ಚಿರತೆಗಳು ಅತಿ ಹೆಚ್ಚು. ಇದರಿಂದಾಗಿ ಸ್ಥಳೀಯರು ಸಹ ಇಲ್ಲಿ ಹೋಗಲು ಹಿಂಜರಿಯುತ್ತಾರೆ. ಹೀಗಾಗಿ ಯಾರಾದರೂ ಈ ಹದ್ದಿನ ಗುಂಡು ನೋಡಲು ಹೋಗುವ ಅತ್ಯಂತ ಆಸಕ್ತರು ಇದ್ದಲ್ಲಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಕೊಂಚ ಹೆಚ್ಚೇ ಇರುವುದು ಒಳಿತು. 

  ಸಂಪರ್ಕ ಸಂಖ್ಯೆ: ರಾಘವೇಂದ್ರ ಜಂಗ್ಲಿ, ಕೊಪ್ಪಳ- 8762629727

  ಇದನ್ನೂ ಓದಿ: Anjanadri Hill: ಹನುಮ ಜನ್ಮಭೂಮಿ ಅಂಜನಾದ್ರಿ ಪರ್ವತದ ದರ್ಶನ ಮಾಡಿಬನ್ನಿ! ಬಸ್, ರೈಲು, ವಸತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ

  ಇಂತಹ ಬೆಟ್ಟದಲ್ಲಿ ಈ ಕಲ್ಲು ಮತ್ತು ಅಷ್ಟೆತ್ತರದ ಕಲ್ಲಿನ ಮೇಲೆ ಮರ ರಾಜನಂತೆ ನಿಂತು ಕಂಗೊಳಿಸುತ್ತಿರುವುದನ್ನು ನೋಡಿದರೆ  ಎಂತಹವರಿಗೂ ಅಚ್ಚರಿಯಾಗದೇ ಇರದು! ಆದರೆ ಹುಟ್ಟಿಸಿದ ದೇವ ಹುಲ್ಲು ಮೇಯಿಸದೇ ಇರುವನೇ ಎಂಬ ಹಿರಿಯರ ಮಾತಿದೆಯಲ್ಲ, ಅದೇ ರೀತಿ 80 ಅಡಿ ಕಲ್ಲಿನ ಮೇಲೆ ಇರುವ ಈ ಗಿಡವನ್ನೂ ಸಹ ಆ ದೇವರೇ ಕಾಯುತ್ತಿರಬಹುದು ಎಂದು ಹುಲು ಮನುಷ್ಯರಾದ ನಾವು ಹೇಳಬಹುದಷ್ಟೇ ಅಲ್ಲವೇ?
  Published by:guruganesh bhat
  First published: