• Home
  • »
  • News
  • »
  • koppala
  • »
  • Engineering College In Koppal: ಕೊಪ್ಪಳದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! ಊರಲ್ಲೇ ಇದ್ದು ಇಂಜಿನಿಯರಿಂಗ್ ಓದಬಹುದು!

Engineering College In Koppal: ಕೊಪ್ಪಳದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! ಊರಲ್ಲೇ ಇದ್ದು ಇಂಜಿನಿಯರಿಂಗ್ ಓದಬಹುದು!

ಗಂಗಾವತಿ ಎಂಜಿನಿಯರಿಂಗ್ ಕಾಲೇಜು

ಗಂಗಾವತಿ ಎಂಜಿನಿಯರಿಂಗ್ ಕಾಲೇಜು

ಇಂಜಿನಿಯರಿಂಗ್ ತರಗತಿಗೆ ಪ್ರತಿ ವರ್ಷ ಎಲ್ಲಾ ಶುಲ್ಕ ಸೇರಿ ಒಟ್ಟು 26,000 ರೂಪಾಯಿ ಆಗುತ್ತದೆ. ಇಲ್ಲಿ ಮತ್ತೊಂದು ಅವಕಾಶ ಎಂದರೆ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಗೆ ತಾವು ಕಟ್ಟಿದ ಎಲ್ಲಾ ಶುಲ್ಕಗಳನ್ನೂ ಶಿಷ್ಯವೇತನದ ಮೂಲಕ ಹಿಂಪಡೆಯಬಹುದು!

  • Share this:

    ಕೊಪ್ಪಳ: ಇಂಜಿನಿಯರಿಂಗ್ ಕಲಿಯಬೇಕು ಎಂದರೆ ಒಂದು ಕಾಲದಲ್ಲಿ ದೂರದ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಸರ್ಕಾರಿ ಕಾಲೇಜುಗಳು ಕಡಿಮೆ ಇದ್ದವು. ಬೆಂಗಳೂರಿನಂತಹ ನಗರಗಳ ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಿರುವುದರಿಂದ ಸಾಮಾನ್ಯ ವರ್ಗದವರು ಹಣ ಭರಿಸಲಾಗದೇ, ಬಡ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುತ್ತಿತ್ತು. ಆದರೇ ಕೊಪ್ಪಳದ ಮಂದಿಗೆ ಈಗ ಅದರ ಭಯ ಇಲ್ಲ. ವಿಷಯ ಏನಂದ್ರೆ, ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗಿದ್ದು ಇದರಿಂದ ಬಡ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಓದುವ ಅವಕಾಶ ಲಭಿಸಿದಂತಾಗಿದೆ.


    ಹೌದು, ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ದುರ್ಬಲ ವರ್ಗದವರಿಗೆ ತುಂಬಾ ಸುಲಭವಾಗಿ, ಕೈಗೆಟಕುವ ದರದಲ್ಲಿ ಇಂಜಿನಿಯರಿಂಗ್ ಕೋರ್ಸ್ ಕೊಪ್ಪಳದಲ್ಲೇ ಸಿಗುತ್ತಿದ್ದು, ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.


    ಎಲ್ಲಿದೆ ಕಾಲೇಜು?
    ಮಹಾವಿದ್ಯಾಲಯವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ಆನೇಗುಂದಿ ರಸ್ತೆಯಲ್ಲಿನ ಸಾಯಿನಗರದಲ್ಲಿ ಕಾಲೇಜು ಇದೆ.  ಗಂಗಾವತಿಗೆ ರೈಲು ಸಂಪರ್ಕವು ಇರುವುದರಿಂದ ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತಹ ಸ್ಥಳದಲ್ಲಿದೆ ಕಾಲೇಜು. ಬಸ್ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿ ಕಾಲೇಜು ಇದ್ದು, ಬಸ್ ನಿಲ್ದಾಣದಿಂದ ಉತ್ತಮ ಸಾರಿಗೆ ಸೌಲಭ್ಯವನ್ನೂ ಹೊಂದಿದೆ.  


    ಕೋರ್ಸ್ ವಿವರ ಇಲ್ಲಿದೆ
    ಈ ಕಾಲೇಜು ಸರ್ಕಾರಿ ಒಡೆತನದ ಕಾಲೇಜಾಗಿದ್ದು, ಇಲ್ಲಿ ಐದು ಕೋರ್ಸ್​ಗಳು ಲಭ್ಯವಿದೆ. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಗಣಕಯಂತ್ರ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್ - ಹೀಗೆ ಐದು ವಿಭಾಗಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಒದಗಿಸಲಾಗಿದೆ.


    ಪ್ರವೇಶ ಪಡೆಯುವುದು ಹೇಗೆ?
    ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸಿದ ವಿದ್ಯಾರ್ಥಿಗಳಿಗೆ ಕೆ.ಇ. ಎ ಯವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರ್ಯಾಂಕ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಕಾಲೇಜಿನ ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


    ಕಾಲೇಜಿನ ಪೋನ್ ನಂಬರ್: 08533-295152
    ಇಮೇಲ್ ವಿಳಾಸ :  ppl.gecgangavathi@gmail.com


    ಇದನ್ನೂ ಓದಿ: Inspiration Story: ಕೊರೊನಾ ಇರಲಿ, ಏನೇ ಬರಲಿ; ನಾನು ಗೆದ್ದೇ ಗೆಲ್ಲುವೆ! ಓದಿ ಕೊಪ್ಪಳದ ಯುವಕನ ರೋಚಕ ಕಥೆ


    ಎಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತೆ?
    ಈ ಕಾಲೇಜಿನಲ್ಲಿ ಒಟ್ಟು ಐದು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ 60 ರಂತೆ 300 ಸ್ಥಾನಕ್ಕೆ ಪ್ರತಿ ವರ್ಷ ಪ್ರವೇಶ ಪಡೆಯಲಾಗಿತ್ತದೆ. ಸದ್ಯ ಕಾಲೇಜು ಪ್ರಾರಂಭವಾಗಿ ಮೂರೇ ವರ್ಷವಾಗಿರುವುದರಿಂದ ಯಾವೊಂದು ಬ್ಯಾಚ್ ಸಹ ಸಂಪೂರ್ಣ ಕೋರ್ಸ್ ಮುಗಿಸಿಲ್ಲ. ಸದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಇನ್ನಷ್ಟು ಉನ್ನತ ಶಿಕ್ಷಣ ಮತ್ತು ವೃತ್ತಿ ಜೀವನ ಪ್ರವೇಶಿಸಲು ಎದುರು ನೋಡುತ್ತಿದ್ದಾರೆ.


    Government Engineering College Gangavati, Koppal ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೊಪ್ಪಳ


    ಪ್ರವೇಶ ಶುಲ್ಕ?
    ಇಂಜಿನಿಯರಿಂಗ್ ತರಗತಿಗೆ ಪ್ರತಿ ವರ್ಷ ಎಲ್ಲಾ ಶುಲ್ಕ ಸೇರಿ ಒಟ್ಟು 26,000 ರೂಪಾಯಿ ಆಗುತ್ತದೆ. ಇಲ್ಲಿ ಮತ್ತೊಂದು ಅವಕಾಶ ಎಂದರೆ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಗೆ ತಾವು ಕಟ್ಟಿದ ಎಲ್ಲಾ ಶುಲ್ಕಗಳನ್ನೂ ಶಿಷ್ಯವೇತನದ ಮೂಲಕ ಹಿಂಪಡೆಯಬಹುದು! ಹಾಗಾಗಿ ಬಡ ವಿದ್ಯಾರ್ಥಿಗಳು ಸಹ ಇಂಜಿನಿಯರಿಂಗ್ ಪದವಿಯನ್ನು ಪಡೆಯಲು ಅನುಕೂಲವಾಗುವಂತಿದೆ ಈ ಇಂಜಿನಿಯರಿಂಗ್ ಕಾಲೇಜು.


    ಇದನ್ನೂ ಓದಿ: Anjanadri Hill: ಹನುಮ ಜನ್ಮಭೂಮಿ ಅಂಜನಾದ್ರಿ ಪರ್ವತದ ದರ್ಶನ ಮಾಡಿಬನ್ನಿ! ಬಸ್, ರೈಲು, ವಸತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ


    ಈ ಕಾಲೇಜಿನಲ್ಲಿ ಕೊಪ್ಪಳ, ಗಂಗಾವತಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ವೃತ್ತಿಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಇದ್ದು, ಸ್ಥಳೀಯ ಮತ್ತು ಗ್ರಾಮೀಣ ಸಮುದಾಯಕ್ಕೆ ಇದರ ಲಾಭ ದೊರಕುತ್ತಿದೆ.


    ವರದಿ: ರಾಘವೇಂದ್ರ ಜಂಗ್ಲಿ, ಕೊಪ್ಪಳ

    Published by:guruganesh bhat
    First published: