• ಹೋಂ
 • »
 • ನ್ಯೂಸ್
 • »
 • ಕೊಪ್ಪಳ
 • »
 • Koppal Viral Birthday: ಶತಾಯುಷಿ ಅಜ್ಜಿಯ ‌ಸೆಂಚುರಿ ಸೆಲೆಬ್ರೇಷನ್, ಮರಿ ಮಕ್ಕಳೊಂದಿಗೆ ಮಸ್ತ್ ಮಜಾ!

Koppal Viral Birthday: ಶತಾಯುಷಿ ಅಜ್ಜಿಯ ‌ಸೆಂಚುರಿ ಸೆಲೆಬ್ರೇಷನ್, ಮರಿ ಮಕ್ಕಳೊಂದಿಗೆ ಮಸ್ತ್ ಮಜಾ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

100 ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡ ಗೌರಮ್ಮ ಅವರಿಗೆ 6 ಮಕ್ಕಳು, 20 ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಕಂಡಿದ್ದಾರೆ.

 • News18 Kannada
 • 2-MIN READ
 • Last Updated :
 • Koppal, India
 • Share this:

ಕೊಪ್ಪಳ: ಅಜ್ಜಿಯೊಂದಿಗೆ ಕುಳಿತುಕೊಂಡಿರುವ ಪುಟ್ಟ ಬಾಲಕಿ. ಈ ಕಾರ್ಯಕ್ರಮದಲ್ಲಿ ಅಜ್ಜಿ (Grand Mother) ಹಾಗೂ ಈ ಮರಿ ಮೊಮ್ಮಗಳು (Grand Children) ಕೇಂದ್ರ ಬಿಂದು. ಹಳೆ ಬೇರು, ಹೊಸ ಚಿಗುರು ಮಾತಿಗೆ ಸಾಕ್ಷಿಯಾಯ್ತು ವಿಶಿಷ್ಟ ಕಾರ್ಯಕ್ರಮ.


ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಹಿರೇಗೌಡರ ಕುಟುಂಬ ತಮ್ಮ ಮನೆಯ ಹಿರಿಯ ಸದಸ್ಯೆ ಗೌರಮ್ಮ ನೀಲನಗೌಡ್ರ ಹಿರೇಗೌಡ್ರ ಅವರ ನೂರನೇ ವರ್ಷದ ಬರ್ತ್​ಡೇಯನ್ನು ಅತ್ಯಂತ ಸಡಗರದಿಂದ ಆಚರಿಸಿದರು.
ತೋಟದಲ್ಲಿ ಹುಟ್ಟುಹಬ್ಬ!
ತಮ್ಮ ತೋಟದಲ್ಲಿ ಅಜ್ಜಿ ಗೌರಮ್ಮ ಅವರ 100 ನೇ ವರ್ಷದ ಬರ್ತ್​ಡೇಯ ಜೊತೆಗೆ ಗೌರಮ್ಮ ಅವರ ಮರಿಮೊಮ್ಮಗಳಾದ ಕೃಷಿಯ ನಾರಿದಟ್ಟಿ ಕಾರ್ಯಕ್ರಮವನ್ನು ಒಟ್ಟೊಟ್ಟಿಗೆ ಮಾಡುವ ಮೂಲಕ ಸಂಭ್ರಮಿಸಿದರು.


ಇದನ್ನೂ ಓದಿ: Koppal Summer: ಎಷ್ಟು ಹಣ ಕೊಟ್ರು ಸಿಗ್ತಿಲ್ಲ ಎಳನೀರು, ಮನೆಯಿಂದ ಆಚೆ ಬರುವುದೇ ಕಷ್ಟ


ಗೌರಮ್ಮ ಕುಟುಂಬ ಹೀಗಿದೆ
100 ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡ ಗೌರಮ್ಮ ಅವರಿಗೆ 6 ಮಕ್ಕಳು, 20 ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಕಂಡಿದ್ದಾರೆ. ಅವರೆಲ್ಲಾ ಸೇರಿ ಅಜ್ಜಿಯ ಬರ್ತಡೆಯನ್ನು ಬಂಧು ಆಪ್ತರೊಂದಿಗೆ ತೋಟದಲ್ಲಿ ಆಚರಿಸಿ ಸಂಭ್ರಮಿಸಿದರು.
ಕ್ರಿಯಾಶೀಲ ಅಜ್ಜಿ
ಇನ್ನು ಅಜ್ಜಿಗೆ 100 ವರ್ಷವಾದರೂ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಈಗಿನ ಕಾಲದಲ್ಲಿ 40 ವರ್ಷ ದಾಟಿದರೆ ಸಾಕು ಮುದುಕರ ರೀತಿ ಕಾಣುತ್ತಾರೆ. ಆದರೆ ಅಜ್ಜಿಯ ರೂಢಿಸಿಕೊಂಡಿರುವ ಆಹಾರ ಪದ್ದತಿಯಿಂದ ಆರೋಗ್ಯ ಕಾಯ್ದುಕೊಂಡಿದ್ದಾರೆ.


ಇದನ್ನೂ ಓದಿ: Koppal News: ಮೊದಲ ಮತದಾನ ಮಾಡಿದ 69 ವರ್ಷದ ಅಜ್ಜಿ! ಮತಗಟ್ಟೆಯ ಎದುರು ಧರಣಿ ಕುಳಿತ 85 ವರ್ಷದ ವೃದ್ಧೆ
ಹೀಗಾಗಿ ಅಜ್ಜಿ ನಮಗೆ ಮಾದರಿ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅಜ್ಜಿಯ ಮೊಮ್ಮಗ ಶಂಕರಗೌಡ. ಕಾರ್ಯಕ್ರಮಕ್ಕೆ ಬಂದವರು ಅಜ್ಜಿಯ ಆಶೀರ್ವಾದ ಪಡೆದುಕೊಂಡು ಶುಭಕೋರಿದರು. ಒಟ್ಟಿನಲ್ಲಿ ಅಜ್ಜಿಯ ಬರ್ತ್​ಡೇ ಹಿನ್ನೆಲೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಸೇರಿ ಜೇನಿನ ಗೂಡು ಹೋಲುವಂತಿತ್ತು.

First published: