• Home
  • »
  • News
  • »
  • koppala
  • »
  • Koppal: ಈ ಸ್ಮಶಾನ ನೋಡಲೆಂದೇ ಜನ ಪ್ರವಾಸಕ್ಕೆ ಬರ್ತಾರೆ! ಎಲ್ಲಿದೆ ಈ ರುದ್ರಭೂಮಿ?

Koppal: ಈ ಸ್ಮಶಾನ ನೋಡಲೆಂದೇ ಜನ ಪ್ರವಾಸಕ್ಕೆ ಬರ್ತಾರೆ! ಎಲ್ಲಿದೆ ಈ ರುದ್ರಭೂಮಿ?

ರುದ್ರಭೂಮಿಯ ಪಕ್ಷಿನೋಟ

ರುದ್ರಭೂಮಿಯ ಪಕ್ಷಿನೋಟ

ಸ್ಮಶಾನ ಅಂದರೆ ಹೆದರಿಕೆ, ರುದ್ರಭೂಮಿ ಅಂದರೆ ಒಂಥರಾ ಭಯ. ಸಾಮಾನ್ಯವಾಗಿ ಈ ಭಾವನೆಯೇ ಎಲ್ಲರಲ್ಲಿದೆ. ಆದರೆ ಇಲ್ಲೊಂದು ರುದ್ರಭೂಮಿಯಿದೆ. ಈ ರುದ್ರಭೂಮಿ ಪ್ರವಾಸಿ ಸ್ಥಳದಂತಿದೆ! ಓದಿ ವಿಶೇಷ ವರದಿ.

  • Share this:

    ಕೊಪ್ಪಳ: ರುದ್ರಭೂಮಿ ಎಂದರೆ ಎಲ್ಲರೂ ಅದೊಂದು ನಕಾರಾತ್ಮಕ ಸ್ಥಳ,  ಸುಖಾ ಸುಮ್ಮನೆ ಅಲ್ಲಿಗೆ ಹೋಗಬಾರದು. ರುದ್ರಭೂಮಿಯ ಕಡೆ ಹೋಗುವುದಲ್ಲ,  ಅತ್ತ ತಿರುಗಿಯೂ ಸಹ ನೋಡಬಾರದು ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚಾಗಿದೆ. ಆದರೆ ಇಲ್ಲೊಂದು ರುದ್ರಭೂಮಿ (Cemetery) ಮಾತ್ರ ಈ ಮಾತು ಸುತಾರಾಂ ಒಪ್ಪುವುದಿಲ್ಲ. ಈ ರುದ್ರಭೂಮಿಯ ವೀಕ್ಷಣೆ ಮಾಡಲು ಪ್ರವಾಸಕ್ಕೆ ಬರುವಂತಿದೆ! ಅರೇ, ಎಲ್ಲಿದೆ ಈ ರುದ್ರಭೂಮಿ? ಏನಿದರ ವಿಶೇಷತೆ?  ಇಂತಹ ಸ್ಥಳವನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿ (MGNREGA) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು (Gangavathi) ಪಂಚಾಯತಿ ವತಿಯಿಂದ ರುದ್ರಭೂಮಿಯನ್ನು ಮಾದರಿ ರುದ್ರಭೂಮಿಯನ್ನಾಗಿಸಿದೆ.


    ಹೌದು ಗಂಗಾವತಿಯ ತಾಲೂಕಿನ ಕೊಟಯ್ಯ ಕ್ಯಾಪಿ ಗ್ರಾಮದ ಸ್ಮಶಾನ ಈಗ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ಮಾದರಿ ರುದ್ರಭೂಮಿಯಾಗಿ ಪರಿವರ್ತನೆಯಾಗಿದೆ. ಹಿಂದೂ -ಮುಸ್ಲಿಂ ಭಾವೈಕ್ಯತೆ ಸಾರುವ ಮಾದರಿ ಸ್ಮಶಾನ (ಮುಕ್ತಿವನ) ನಿರ್ಮಾಣ ಮಾಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


    ಎಲ್ಲಿದೆ ಈ ಮಾದರಿ ರುದ್ರಭೂಮಿ?
    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಕೇರಾ ಗ್ರಾ.ಪಂ.ವ್ಯಾಪ್ತಿಯ ಕೋಟಯ್ಯ ಕ್ಯಾಂಪ್‌ನಲ್ಲಿ ಪಾಳು ಬಿದ್ದ 2 ಎಕರೆ ಜಮೀನಿನಲ್ಲಿ ಕೋಟಯ್ಯಾ ಕ್ಯಾಂಪಿನಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದನ್ನು ಗಮನಿಸಿ ಪಾಳು ಬಿದ್ದಿರುವ ಜಮೀನನ್ನೇ ಸ್ಮಶಾನ ಭೂಮಿಯನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿ ಮಾದರಿಯನ್ನಾಗಿಸಿದೆ. ಈ ಗ್ರಾಮದಲ್ಲಿ  ನಿರ್ಮಾಣ ಮಾಡಿರುವ ಮುಕ್ತಿವನವು ಬೇರೆ ಬೇರೆ ಊರುಗಳ ಸ್ಮಶಾನ ಅಭಿವೃದ್ಧಿಗೆ ಮಾದರಿ ಎನಿಸಿಕೊಂಡಿದೆ. ಹೊಸಕೇರಾ ಗ್ರಾ.ಪಂ.ವ್ಯಾಪ್ತಿಯ ಕೋಟಯ್ಯ ಕ್ಯಾಂಪ್‌ನಲ್ಲಿ ಮಾದರಿ ಸ್ಮಶಾನ ಭೂಮಿ ನಿರ್ಮಾಣ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.


    ಸುಂದರವಾದ ರುದ್ರಭೂಮಿ
    ಈಮುನ್ನ ಸದ್ಯ ರುದ್ರಭೂಮಿ ಅಭಿವೃದ್ಧಿ ಮಾಡಲಾಗಿರುವ ಎರಡು ಎಕರೆ ಜಮೀನು ಸಮಟ್ಟಾಗಿರಲಿಲ್ಲ. ಸಾಕಷ್ಟು ತಗ್ಗುಗಳಿಂದ  ಕೂಡಿತ್ತು. ಜಮೀನು ಸಮತಟ್ಟು ಮಾಡುವ ಕಾಮಗಾರಿಗಳನ್ನು ಮೊದಲು ಕೈಗೊಂಡು ಜಮೀನು ಸಂಪೂರ್ಣ ಸಮತಟ್ಟಾದ ಮೇಲೆ ಶವಸಂಸ್ಕಾರ ನೆರವೇರಿಸಲು ವಿಶೇಷ ಪ್ಲಾಟ್‌ ಫಾರ್ಮ್ ನಿರ್ಮಾಣ ಮಾಡಲಾಗಿದೆ.


    ಒಳಾಂಗಣದ ನೋಟ


    ಈ ಪ್ಲಾಟ್‌ ಫಾರ್ಮ್​ನಲ್ಲಿ ಶವಗಳನ್ನು ಸುಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವರು ತಮ್ಮ ಪದ್ಧತಿಯಂತೆ ಶವ ಅಂತ್ಯಸಂಸ್ಕಾರಕ್ಕಾಗಿ ಭೂಮಿಯಲ್ಲಿ ಹೂಳುವ ಪದ್ಧತಿ ನಡೆಸುತ್ತಿದ್ದಾರೆ. ತಗ್ಗು ಅಗೆಯಲು ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಸ್ಟೋರ್‌ ರೂಮ್‌ ನಿರ್ಮಾಣವನ್ನು ಸಹ ಮಾಡಲಾಗಿದೆ.


    ಇದನ್ನೂ ಓದಿ: Engineering College In Koppal: ಕೊಪ್ಪಳದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! ಊರಲ್ಲೇ ಇದ್ದು ಇಂಜಿನಿಯರಿಂಗ್ ಓದಬಹುದು!


    ರುದ್ರಭೂಮಿಯಲ್ಲಿ ಸಾವಿರ ಸಸಿಗಳು!
    ಮಾದರಿ ಸ್ಮಶಾನ ಭೂಮಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಅಲಂಕಾರಿಕ ಸಸಿಗಳು ಹಾಗೂ ಅರಣ್ಯ ಸಸಿಗಳನ್ನು ನೆಡಲಾಗಿದ್ದು, ಮುಂಬರುವ ದಿನದಲ್ಲಿ ಸ್ಮಶಾನ ಭೂಮಿ ಸುಂದರ ತಾಣವಾಗಿ ಕಂಗೊಳಿಸಲಿದೆ.


    Kotayya Camp, Karnataka ಈ ಪ್ರವಾಸ ಸ್ಥಳ ಅರ್ಥಾತ್ ರುದ್ರಭೂಮಿಗೆ ಹೋಗೋದು ಹೀಗೆ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]


    ತಾಲೂಕಿಗೊಂದು ಮುಕ್ತಿವನ
    ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ ಕೋಟಯ್ಯ ಕ್ಯಾಂಪ್‌ ರುದ್ರಭೂಮಿ ರೀತಿಯಲ್ಲೇ ಉಳಿದ ಕಡೆಗಳಲ್ಲೂ ರುದ್ರಭೂಮಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.


    ಇದನ್ನೂ ಓದಿ: Sanapur Lake: ಕೊಪ್ಪಳದಲ್ಲಿ ಸೂಪರ್ ಅನಿಸುವ ಅದ್ಭುತ ಸ್ಥಳ! ವೀಕೆಂಡ್ ಟೂರ್​ಗೆ ಹೇಳಿ ಮಾಡಿಸಿದ ತಾಣವಿದು!


    ಪ್ರತಿ ತಾಲೂಕಿಗೆ ಒಂದರಂತೆ ಅಂದರೆ ಕೊಪ್ಪಳ ಜಿಲ್ಲೆಯ 7 ತಾಲೂಕುಗಳಲ್ಲೂ ಮಾದರಿ ಮುಕ್ತಿವನ ನಿರ್ಮಾಣ ಮಾಡಲು ತಾ.ಪಂ.ಇಒಗಳಿಗೆ ಸೂಚಿಸಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವ ಗ್ರಾಮದಲ್ಲಿ ರುದ್ರಭೂಮಿ ಇಲ್ಲವೊ ಅಂತಹ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಮುಕ್ತಿವನ ನಿರ್ಮಾಣ ಮಾಡಲು ಜಿಲ್ಲಾ ಪಂಚಾಯತ್‌ ಮುಂದಾಗುತ್ತಿದೆ.


    ವರದಿ: ರಾಘವೇಂದ್ರ ಜಂಗ್ಲಿ, ಕೊಪ್ಪಳ

    Published by:guruganesh bhat
    First published: