ಕೊಪ್ಪಳ: ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬ ಗಾದೆಮಾತು ಇಲ್ಲೊಬ್ಬ ಬಾಲಕನಿಗೆ (Koppal Boy) ಅಕ್ಷರಶಃ ಅನ್ವಯಿಸುತ್ತೆ. ಕೇವಲ ಎರಡು ವರ್ಷ ಏಳು ತಿಂಗಳಿನಿಂದಲೇ ಈ ಬಾಲಕ ಎಲ್ಲಾ ಬಗೆಯ ಕಾರುಗಳ ಹೆಸರು ಹೇಳಬಲ್ಲ! ಬೈಕ್. ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳ ಹೆಸರನ್ನು ಪಟಾಪಟ್ ಎಂದು ಹೇಳುತ್ತಾನೆ ಈ ಪುಟ್ಟ ಬಾಲಕ! ಇದೇ ಕಾರಣಕ್ಕೆ ಈ ಬಾಲಕ ಹೆಸರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ (World Book of Records) ದಾಖಲಾಗಿದೆ.
ಮೊಬೈಲ್ನಲ್ಲಿ ತೋರಿಸುವ ಕಾರು, ಬೈಕ್ಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಹೆಸರು, ಇಲ್ಲಿಯವರೆಗಿನ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಹೆಸರನ್ನು ಪಟಾಪಟ್ ಹೇಳುವ ಈ ಬಾಲಕನ ಹೆಸರು ಅಗಸ್ತ್ಯ ಭಾವಿಹಳ್ಳಿ.
ಈ ದಂಪತಿಯ ಮಗ ಈ ಬಾಲಕ
ಈ ಪುಟ್ಟ ಬಾಲಕ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಪ್ರತಾಪ ಭಾವಿಹಳ್ಳಿ ಹಾಗು ಮಧು ಭಾವಿಹಳ್ಳಿಯವರ ಮೊದಲು ಮಗ. ಸದ್ಯ ಪ್ರತಾಪ ಭಾವಿಹಳ್ಳಿ ಹಾಗೂ ಮಧು ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿದ್ದಾರೆ. ಮಧು ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಪಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೆ ಪ್ರತಾಪ್ ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದಾರೆ.
ಒಮ್ಮೆ ಹೇಳಿಕೊಟ್ಟರೆ ಸಾಕು!
ಪ್ರತಾಪ ಅವರ ಮಗ ಅಗಸ್ತ್ಯ ಕೇವಲ ಎರಡು ವರ್ಷವಿರುವಾಗ ಒಮ್ಮೆ ಹೇಳಿದ ವಸ್ತು, ವಿಷಯಗಳನ್ನು ಮರೆಯದೇ ವಾಪಸ್ ಹೇಳುವ ನೆನಪಿನ ಶಕ್ತಿ ಹೊಂದಿದ್ದಾನೆ. ತಂದೆ ಹಾಗೂ ತಾಯಿ ಒಮ್ಮೆ ಹೇಳಿಕೊಟ್ಟರೆ ಸಾಕು, ಅವುಗಳನ್ನು ಥೇಟ್ ಹಾಗೇ ಹೇಳುವ ಸ್ಕಿಲ್ ಈ ಹುಡುಗನದ್ದು.
ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!
2.7 ವರ್ಷವಿರುವಾಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್
ಅಗಸ್ತ್ಯನಿಗೆ 2.7 ವರ್ಷವಿರುವಾಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೆ ಮೊಬೈಲ್ನಲ್ಲಿ ಚಿತ್ರೀಕರಿಸಿ ಕಳುಹಿಸಿದ್ದಾರೆ. 56 ಕಾರು, 6 ಟ್ರ್ಯಾಕ್ಟರ್ ಹಾಗೂ ಪ್ರಧಾನ ಮಂತ್ರಿಗಳ ಹೆಸರುಗಳನ್ನು 4.7 ನಿಮಿಷದಲ್ಲಿ ಹೇಳಿದ್ದಾನೆ ಅಗಸ್ತ್ರ. ಈ ಬಾಲಕನ ಜ್ಞಾಪಕಶಕ್ತಿಯನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Koppal Toll Problem: ಒಂದೇ ರಾಷ್ಟ್ರೀಯ ಹೆದ್ದಾರಿಗೆ ಮೂರು ಕಡೆ ಟೋಲ್ ಹಣ ಪಾವತಿ!
ಹೀಗೆ ವರ್ಲ್ಡ್ ರೆಕಾರ್ಡ್ಗೆ ಭಾಜನರಾಗುವ ಮೂಲಕ ಅಳವಂಡಿ ಗ್ರಾಮದಲ್ಲಿ ಈ ಬಾಲಕ ಫುಲ್ ಫೇಮಸ್ ಆಗಿದ್ದಾನೆ. ಒಟ್ಟಾರೆ ಅಸಾಧಾರಣ ಜ್ಞಾಪಕ ಶಕ್ತಿಯನ್ನು ಹೊಂದಿರುವ ಬಾಲಕನ ಬಗ್ಗೆ ಎಲ್ಲರೂ ಹೆಮ್ಮೆ ಪಡುವಂತಾಗಿದೆ.
ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ