ಕೊಪ್ಪಳ: ಮೇ 10 ರಂದು ವಿಧಾನಸಭೆಯ ಚುನಾವಣೆ (Karnataka Elections 2023) ನಡೆಯಲಿದೆ. ಚುನಾವಣೆಯಲ್ಲಿ ಕಡ್ಡಾಯ ಮತದಾನಕ್ಕೆ (Voting Awareness) ಜಾಗೃತಿ ಮೂಡಿಸಲಾಗುತ್ತಿದೆ. ಈ ಮಧ್ಯೆ ಮದುವೆಯಾದ ಜೋಡಿಗಳು (Newly Married Couple) ಎಲ್ಲರೂ ಮತದಾನ ಮಾಡಿ ಎಂದು ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಪಟ್ಟಣದ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ಇದೇ ತಾಲೂಕಿನ ಕಡೇಕೊಪ್ಪದ ಜೀಗೇರಿ ಎಂಬ ಮನೆತನಗಳ ಮಕ್ಕಳ ಮದುವೆ ನಡೆಯಿತು. ನಿಂಗಪ್ಪ- ರೇಖಾ ಹಾಗು ರಾಚಪ್ಪ ಹಾಗೂ ನಿವೇದಿತ ಎಂಬ ಜೋಡಿಗಳ ಮದುವೆಗೆ ಬಂದವರಿಗೆ ಮತದಾನ ಮಾಡಿ ಎಂಬ ಸಂದೇಶವನ್ನು ಬಿತ್ತರಿಸಲಾಗಿದೆ.
ಮತ ಹಾಕಲು ನಿರಾಸಕ್ತಿಯೇಕೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ದೊಡ್ಡ ಹಕ್ಕು ಮತದಾನ. ಮತದಾರ ತನ್ನ ಅಭ್ಯರ್ಥಿಯನ್ನು ಆಯ್ಕೆ ತನ್ನ ಪ್ರತಿನಿಧಿಯಾಗಿ ಶಾಸನ ಸಭೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಇತ್ತೀಚಿನವರೆಗೂ ಶೇ 100 ರಷ್ಟು ಮತದಾನವಾಗಿಲ್ಲ. ನಗರ ಪ್ರದೇಶದಲ್ಲಿ ಈಗಲೂ ಸಹ ಶೇ 50 ರ ಆಸುಪಾಸು ಇರುತ್ತದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗವು ಮತದಾನ ಹೆಚ್ಚಿಸಲು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಕಳೆದ ಹತ್ತು ವರ್ಷದಿಂದ ನಡೆಸುತ್ತಿದೆ. ಆದರೂ ಇನ್ನೂ ಮತದಾರ ಮತ ಹಾಕಲು ಸ್ವಲ್ಪ ನಿರಾಸಕ್ತಿ ವಹಿಸುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: Viral Video: 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಏರಿದ ಹನುಮ ಭಕ್ತ!
ಶುಭಾಶಯ ಹೇಳಿದವರಿಗೆ ಮತ ಹಾಕಲು ತಿಳಿಸಿದ್ರು!
ಈ ಮಧ್ಯೆ ಗ್ರಾಮೀಣ ಪ್ರದೇಶದ ಕಡೇಕೊಪ್ಪದ ಕುಟುಂಬವೊಂದು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿದೆ. ಮತದಾನ ಜಾಗೃತಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂಬ ವಧು ಹಾಗೂ ವರರು ಫಲಕಗಳನ್ನು ಹಿಡಿದು ಶುಭಾಶಯ ಕೋರಲು ಬಂದವರಿಗೆ ಮತದಾನ ಮಾಡಿ ಎಂದು ಹೇಳಿದ್ದಾರೆ.
ಅದ್ದೂರಿಯಾಗಿ ನಡೆದ ಮದುವೆಯ ಸಮಾರಂಭದಲ್ಲಿ ಮದುವೆಗೆ ಬಂದ ಸಾವಿರಾರು ಜನರು ನವಜೋಡಿಗಳಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಅವರ ಜಾಗೃತಿಯಲ್ಲಿ ತಾವು ಪಾಲ್ಗೊಂಡು ಮತದಾನ ಮಾಡಿ ಎಂದು ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: Koppal: ವಿಶೇಷ ಚೇತನರಿಗೆ ಉಚಿತ ಹೇರ್ ಕಟಿಂಗ್! ಅಂಧರನ್ನು ಇನ್ನಷ್ಟು 'ಅಂದ' ಮಾಡುವ ಸಲೂನ್ ಮಾಲೀಕ!
ಮೇ 10 ರಾಜ್ಯಕ್ಕೆ ನಿರ್ಣಾಯಕ ದಿನವಾಗಿದ್ದು. ಮತದಾರನಿಗೆ ಇರುವ ಏಕೈಕ ಹಕ್ಕು ಮತದಾನ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಆಯ್ಕೆಯಿಂದ ಜನಪ್ರತಿನಿಧಿಗಳು ಉತ್ತಮ ಕೆಲಸ ಮಾಡುವಂತಾಗಲಿ ಎಂಬುವುದು. ತಮ್ಮ ಕ್ಷೇತ್ರದ ಅಭಿವೃದ್ಧಿ ಗೆ ಆಯ್ಕೆಯಾದವರು ಕೆಲಸ ಮಾಡಿ ಎಂದು ವಧು ವರರು ಆಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ