Koppal News: 28 ಮಾದರಿ ಮತಗಟ್ಟೆಗಳಿಗೆ ಅಭಿವೃದ್ಧಿ ಭಾಗ್ಯ, ಇದು ಚುನಾವಣೆ ಎಫೆಕ್ಟ್

ಮಾದರಿ ಮತಗಟ್ಟೆಗಳು

ಮಾದರಿ ಮತಗಟ್ಟೆಗಳು

ಚುನಾವಣೆ ಆಯೋಗದ ಸೂಚನೆಯ ಅನ್ವಯ ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕು ಥೀಮ್‌ ಬೇಸ್‌ ಪೋಲಿಂಗ್‌ ಸ್ಟೇಷನ್‌ ನಿರ್ಮಾಣ ಮಾಡಲಾಗುತ್ತಿದೆ.

  • News18 Kannada
  • 2-MIN READ
  • Last Updated :
  • Koppal, India
  • Share this:

ಕೊಪ್ಪಳ: ಮತದಾನ ಅನ್ನೋದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹೀಗಾಗಿ ಕಡ್ಡಾಯ ಮತದಾನ ಮಾಡುವಂತೆ ಅನೇಕ ಜಾಗೃತಿ ಕಾರ್ಯಕ್ರಮಗಳು ಈಗ ನಡೆಯುತ್ತಿವೆ. ಮತದಾನ ಮಾಡುವಂತೆ ಪ್ರೇರೇಪಿಸಲು ಚುನಾವಣಾ ಆಯೋಗ ವಿವಿಧ ಪ್ರಯೋಗಕ್ಕೆ ಮುಂದಾಗಿದೆ. ಮತದಾರರಲ್ಲಿ ಅರಿವು ಮೂಡಿಸಲು ಕೊಪ್ಪಳ ಜಿಲ್ಲಾ ಸ್ವೀಪ್‌ ಸಮಿತಿಯಿಂದಲೂ ಕೊಪ್ಪಳ ಜಿಲ್ಲೆಯಲ್ಲಿ (Koppal News) ನಾಲ್ಕು ಥೀಪ್‌ ಇರುವ ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ. ಈಗ ಪ್ರತಿ ಕ್ಷೇತ್ರದಲ್ಲಿಯೂ ಮಾದರಿ ಮತಗಟ್ಟೆಗಳನ್ನು (Model Voting Centres) ಸ್ಥಾಪಿಸಲಾಗುತ್ತಿದ್ದು ಮಾದರಿ ಮತಗಟ್ಟೆಗಳು ಗಮನ ಸೆಳೆಯುತ್ತಿವೆ.


ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ. ಮತದಾನಕ್ಕಾಗಿ ಈಗಾಗಲೇ ಜಿಲ್ಲಾಡಳಿತವೂ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದೆ.




ಮತದಾನ ಜಾಗೃತಿಯೇ ಉದ್ದೇಶ
ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಲವು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸ್ವೀಪ್‌ ಚಟುವಟಿಕೆಗಳ ಭಾಗವಾಗಿ ಕೊಪ್ಪಳ ಜಿಲ್ಲೆಯಲ್ಲಿಯೂ ಮಾದರಿ ಮತಗಟ್ಟೆ, ಮಹಿಳಾ ಮತಗಟ್ಟೆ, ಯುವ ಮತಗಟ್ಟೆ ಹೀಗೆ ನಾಲ್ಕು ಥೀಮ್‌ ಇರುವ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.




12 ಮಹಿಳಾ ಮತಗಟ್ಟೆಗಳು
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 12 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮಹಿಳಾ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಇರುತ್ತಾರೆ. 28 ಮಾದರಿ ಮತಟ್ಟೆಗಳು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ವಿಕಲಚೇತನ ಸಿಬ್ಬಂದಿಯನ್ನೊಳಗೊಂಡ ಮತಗಟ್ಟೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಯೂತ್‌ ಪೋಲಿಂಗ್‌ ಸ್ಟೇಷನ್‌ ನಿರ್ಮಾಣ ಮಾಡಲಾಗುತ್ತಿದೆ.




ಜಿಲ್ಲಾ ಪಂಚಾಯತ್‌ ಸಿಇಓ ಹೇಳೋದೇನು?
ಇವೆಲ್ಲ ಮತದಾರರಿಗೆ ಮತದಾನಕ್ಕೆ ಪ್ರೇರೇಪಣೆ ನೀಡಲು ಚುನಾವಣಾ ಆಯೋಗದ ಸೂಚನೆಯಂತೆ ಈ ಮತಗಟ್ಟೆಗಳನ್ನು ಆಯ್ಕೆ ಮಾಡಿ ಕಳಿಸಲಾಗಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್‌ ಸಿಇಓ ರಾಹುಲ್‌ ರತ್ನಂ ಪಾಂಡೇಯ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Viral Video: 105 ಕೆಜಿ ತೂಕದ ಚೀಲ ಹೊತ್ತು 570 ಮೆಟ್ಟಿಲು ಏರಿದ ಹನುಮ ಭಕ್ತ!




ಚುನಾವಣೆ ಆಯೋಗದ ಸೂಚನೆಯ ಅನ್ವಯ ಜಿಲ್ಲೆಯಲ್ಲಿ ನಾಲ್ಕು ಥೀಮ್‌ ಬೇಸ್‌ ಪೋಲಿಂಗ್‌ ಸ್ಟೇಷನ್‌ ನಿರ್ಮಾಣ ಮಾಡಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರೋದು ಮಾದರಿ ಮತಗಟ್ಟೆಗಳು. ಆಯ್ಕೆಯಾಗಿರುವ ಜಿಲ್ಲೆಯ 28 ಮತಗಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಆ ಮಾದರಿ ಮತಗಟ್ಟೆಗಳಿಗೆ ಪೇಂಟಿಂಗ್‌, ಮತದಾನಕ್ಕೆ ಬರುವ ಮತದಾರರ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ.


ವರ್ಲಿ ಕಲೆಯ ಹೊಳಪು
ಈಗ ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್​​ನಲ್ಲಿರುವ ಮತಗಟ್ಟೆ ಮಾದರಿ ಮತಗಟ್ಟೆಯಾಗಿ ಆಯ್ಕೆ ಮಾಡಿರುವುದರಿಂದ ಈಗ ಆ ಮತಗಟ್ಟೆ ಸಾಕಷ್ಟು ಗಮನ ಸೆಳೆಯುತ್ತಿದೆ. ವರ್ಲಿ ಕಲೆಯ ಮೂಲಕ ಮತಗಟ್ಟೆಯನ್ನು ಬಣ್ಣ ಮಾಡಿರುವುದರಿಂದ ವಿಶೇಷವಾಗಿ ಕಾಣಿಸುತ್ತಿದೆ.


ಇದನ್ನೂ ಓದಿ: Koppal: ನೆನಪಿನ ಶಕ್ತಿಯಿಂದ ಫೇಮಸ್ ಆದ ಕೊಪ್ಪಳದ ಬಾಲಕ!


ಎಲ್ಲೆಲ್ಲಿವೆ ಈ ಮತಗಟ್ಟೆಗಳು?
ಕೊಪ್ಪಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ತಲಾ ಐದು ಹಾಗೂ ಕುಷ್ಟಗಿ, ಕನಕಗಿರಿ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಆರು ಮಾದರಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮಾದರಿ ಮತಗಟ್ಟೆಗೆ ಆಯ್ಕೆಯಾಗಿರುವ ಒಟ್ಟು 28 ಮತಗಟ್ಟೆಗಳು ಈ ಮೂಲಕ ಅಭಿವೃದ್ಧಿ ಕಾಣುತ್ತಿರೋದು ಸಂತಸದ ವಿಚಾರವೇ ಸರಿ


ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ

First published: