• ಹೋಂ
 • »
 • ನ್ಯೂಸ್
 • »
 • ಕೊಪ್ಪಳ
 • »
 • Koppal: ವಿಶೇಷ ಚೇತನರಿಗೆ ಉಚಿತ ಹೇರ್ ಕಟಿಂಗ್! ಅಂಧರನ್ನು ಇನ್ನಷ್ಟು 'ಅಂದ' ಮಾಡುವ ಸಲೂನ್ ಮಾಲೀಕ!

Koppal: ವಿಶೇಷ ಚೇತನರಿಗೆ ಉಚಿತ ಹೇರ್ ಕಟಿಂಗ್! ಅಂಧರನ್ನು ಇನ್ನಷ್ಟು 'ಅಂದ' ಮಾಡುವ ಸಲೂನ್ ಮಾಲೀಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇವರು ಅಂಗಡಿಗೆ ಬರುವ ವಿಶೇಷ ಚೇತನರಿಂದ ಒಂದು ಪೈಸೆಯೂ ಇಲ್ಲದೆ ಕ್ಷೌರವನ್ನು ಮಾಡುತ್ತಿದ್ದಾರೆ. ವಿಶೇಷ ಚೇತನರಿಗೆ ಕ್ಷೌರ ಮಾಡಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.

 • News18 Kannada
 • 2-MIN READ
 • Last Updated :
 • Koppal, India
 • Share this:

  ಕೊಪ್ಪಳ: ಸಾಮಾನ್ಯವಾಗಿ ವಿಶೇಷ ಚೇತನರಿಗೆ ಹೇರ್ ಕಟಿಂಗ್ ಮಾಡಲು ಕ್ಷೌರಿಕರು ಹಿಂದೇಟು ಹಾಕುತ್ತಾರೆ.  ವಿಶೇಷ ಚೇತನರು ಹೇರ್ ಕಟಿಂಗ್ (Hair Cutting) ಮಾಡಿಸಿಕೊಳ್ಳಲು ಸಹಕರಿಸೋದಿಲ್ಲ ಅನ್ನೋದೇ ಇದಕ್ಕೆ ಕಾರಣ. ಆದರೆ ಇಲ್ಲೋರ್ವ ಕ್ಷೌರಿಕರು ವಿಶೇಷ ಚೇತನರು ಹಾಗೂ ಅಂಧರಿಗೆ (Blind Persons) ಉಚಿತವಾಗಿ ಹೇರ್ ಕಟಿಂಗ್ ಮಾಡುತ್ತಾರೆ. ಇದೇ ವೇಳೆ ಅವರ ಅಂಗಡಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಚೇತನರಿಗೆ ಊಟ ಹಾಕಿಸುತ್ತಾರೆ.


  ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ನೇತ್ರಾವತಿ ಹೇರ್ ಡ್ರೆಸ್​ನಲ್ಲಿ ವಿಶೇಷ ಚೇತನರಿಗೆ ಹಾಗೂ ಅಂಧರಿಗೆ ವರ್ಷಪೂರ್ತಿ ಉಚಿತವಾಗಿ ಹೇರ್ ಕಟಿಂಗ್ ಮಾಡುತ್ತಾರೆ. ನೇತ್ರಾವತಿ ಹೇರ್ ಡ್ರೆಸ್​ನ ಮಾಲೀಕ ಹೆಚ್ ಗೋಪಾಲ ಎಂಬುವವರು ಕಳೆದ 22 ವರ್ಷಗಳಿಂದ ವಿಶೇಷ ಚೇತನರಿಗೆ ಸೇವೆ ಮಾಡುತ್ತಾ ಬಂದಿದ್ದಾರೆ.


  ಒಂದು ಪೈಸೆಯನ್ನೂ ಪಡೆಯಲ್ಲ!
  ಇವರು ಅಂಗಡಿಗೆ ಬರುವ ವಿಶೇಷ ಚೇತನರಿಂದ ಒಂದು ಪೈಸೆಯೂ ಇಲ್ಲದೆ ಕ್ಷೌರವನ್ನು ಮಾಡುತ್ತಿದ್ದಾರೆ. ವಿಶೇಷ ಚೇತನರಿಗೆ ಕ್ಷೌರ ಮಾಡಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.


  ಇದನ್ನೂ ಓದಿ: Koppal: ನೆನಪಿನ ಶಕ್ತಿಯಿಂದ ಫೇಮಸ್ ಆದ ಕೊಪ್ಪಳದ ಬಾಲಕ!
  ಈ ಸೇವೆ ನೀಡೋಕೆ ಇದೆ ವಿಶೇಷ ಕಾರಣ
  ನೇತ್ರಾವತಿ ಹೇರ್ ಡ್ರೆಸ್ ಅಂಗಡಿ ಆರಂಭವಾದಾಗ ಅಂಗಡಿ ಪಕ್ಕದಲ್ಲಿಯೇ ವಿಶೇಷ ಚೇತನರಿಗೆ ಹಾಸ್ಟೆಲ್ ಇತ್ತು. ಈ ಸಂದರ್ಭದಲ್ಲಿ ಅಂಗಡಿಗೆ ಬಂದ ಅಂಧರು ಹಾಗೂ ವಿಶೇಷ ಚೇತನರು ಐದು ಹತ್ತು ರೂಪಾಯಿ ಹಿಡಿದುಕೊಂಡು ಕೂದಲು ಕಟ್ ಮಾಡುವಂತೆ ಕೇಳಿ ಬರುತ್ತಿದ್ದರು. ಅವರಿಂದ ಹಣ ಪಡೆಯುವುದಕ್ಕೆ  ಮನಸು ಒಪ್ಪದ ಕಾರಣ ಅಂದಿನಿಂದ ಅಂಧರಿಗೆ ಹಾಗೂ ವಿಶೇಷ ಚೇತನರಿಗೆ ಉಚಿತವಾಗಿ ಕ್ಷೌರ ಮಾಡುತ್ತಾ ಬಂದಿದ್ದಾರೆ.


  ನೇತ್ರಾವತಿ ಹೇರ್ ಡ್ರೆಸಸ್ ಅಂಗಡಿಯನ್ನು ಆರಂಭಿಸಿ ಇಂದಿಗೆ 22 ವರ್ಷವಾಗಿದೆ. ಪ್ರತಿ ವರ್ಷ ಈ ದಿನ ವಿಶೇಷ ಚೇತನರಿಗೆ ಊಟ ಹಾಕಿಸುತ್ತಾರೆ. ಅವರ ಸೇವೆಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


  ಇದನ್ನೂ ಓದಿ: Koppal Voters: 100 ವರ್ಷ ಮೀರಿದ 212 ಮತದಾರರು! ಈ ಹಿರಿಯರ ಮಾತನ್ನು ನೀವೂ ಕೇಳಿ!


  ವಾಯ್:ಅಂಧ, ಅನಾಥರಿಗೆ ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವ ನೇತ್ರಾವತಿ ಹೇರ್ ಡ್ರೆಸ್ ಮಾಲೀಕ ಗೋಪಾಲರ ಕಾರ್ಯ ಶ್ಲಾಘನೀಯವಾಗಿದೆ.


  ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್ 18 ಕೊಪ್ಪಳ

  Published by:ಗುರುಗಣೇಶ ಡಬ್ಗುಳಿ
  First published: