• Home
 • »
 • News
 • »
 • koppala
 • »
 • Gavisiddeshwara Jatre Rathotsava: ದಕ್ಷಿಣ ಭಾರತದ ಮಹಾ ಕುಂಭಮೇಳದ ವೈಭವ!

Gavisiddeshwara Jatre Rathotsava: ದಕ್ಷಿಣ ಭಾರತದ ಮಹಾ ಕುಂಭಮೇಳದ ವೈಭವ!

X
ಇಲ್ಲಿ ಜಾತ್ರೆಯ ವೈಭವ ನೋಡಿ

"ಇಲ್ಲಿ ಜಾತ್ರೆಯ ವೈಭವ ನೋಡಿ"

ಹದಿನೈದು ದಿನ ನಡೆಯುವ ಜಾತ್ರೆಯಲ್ಲಿ ವಿಶೇಷವಾಗಿ ಮಹಾದಾಸೋಹ ನಡೆಯಲಿದೆ. ಮಹಾದಾಸೋಹದಲ್ಲಿ ಸುಮಾರು 30 ಲಕ್ಷ ಜನ ಊಟ ಮಾಡಲಿದ್ದಾರೆ.

 • Share this:

  ಕೊಪ್ಪಳ: ಎಲ್ಲೆಲ್ಲೂ ಜನವೋ ಜನ. ಭಕ್ತಸಾಗರ ಅನ್ನೋ ಪದಕ್ಕೆ ಅಕ್ಷರಶಃ ಹೇಳಿಮಾಡಿಸಿದಂತಿತ್ತು ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ. ದಕ್ಷಿಣ ಭಾರತ ಮಹಾಕುಂಭ ಮೇಳ (Maha Kumbh Mela Of South India) ಎಂದೇ ಕರೆಯಲ್ಪಡುವ ಕೊಪ್ಪಳದ (Koppal News) ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರಾ (Gavisiddeshwara Jatre Rathotsava) ಮಹೋತ್ಸವದಲ್ಲಿ 7 ಲಕ್ಷಕ್ಕೂ ಹೆಚ್ಚು ಭಕ್ತರು ಸಂಭ್ರಮದಿಂದ ಮಿಂದೆದ್ದರು. ಹದಿನೈದು ದಿನ ಕಾಲ ನಡೆಯುವ ಗವಿಮಠದ ಜಾತ್ರೆಯಲ್ಲಿ ಸುಮಾರು 30 ಲಕ್ಷ ಜನ ಭಾಗಿಯಾಗುವ ಸಾಧ್ಯತೆಯಿದೆ.


  ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಕಾರಣಕ್ಕೆ ಕೇವಲ ಮಠದಲ್ಲಿ ಮಾತ್ರ ಸಂಕ್ಷಿಪ್ತವಾಗಿ ಗವಿಸಿದ್ದೇಶ್ವರ ಜಾತ್ರೆ ನಡೆದಿತ್ತು. ಆದರೆ ಈ ಬಾರಿ ಅದ್ದೂರಿ ಜಾತ್ರೆಗೆ ಈಗಾಗಲೇ ಚಾಲನೆ ಸಿಕ್ಕಿದೆ. ರಥೋತ್ಸವಕ್ಕೆ ಈಶಾ ಫೌಂಡೇಷನ್ನಿನ ಶ್ರೀಸದ್ಗುರು ಚಾಲನೆ ನೀಡಿದ್ದು ಈಸಲದ ವಿಶೇಷವಾಗಿತ್ತು.


  ಇದನ್ನೂ  ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ


  ನಡೆಯುತ್ತಿದೆ ಮಹಾದಾಸೋಹ
  ಹದಿನೈದು ದಿನ ನಡೆಯುವ ಜಾತ್ರೆಯಲ್ಲಿ ವಿಶೇಷವಾಗಿ ಮಹಾದಾಸೋಹ ನಡೆಯಲಿದೆ. ಮಹಾದಾಸೋಹದಲ್ಲಿ ಸುಮಾರು 30 ಲಕ್ಷ ಜನ ಊಟ ಮಾಡಲಿದ್ದಾರೆ. ದಾಸೋಹಕ್ಕಾಗಿ 400 ಕ್ವಿಂಟಾಲ್ ಮಾದಲಿ, 6 ಲಕ್ಷ ಶೇಂಗಾ ಹೋಳಿಗೆ, ರೊಟ್ಟಿ, ಪಲ್ಲೆ ಹೀಗೆ ಹಲವಾರು ಅಡುಗೆ ಸಿದ್ದವಾಗಿದೆ. ಸುಮಾರು 20 ಲಕ್ಷ ರೊಟ್ಟಿ ಮಠಕ್ಕೆ ಸಲ್ಲಿಕೆಯಾಗಿದೆ.


  ಇದನ್ನೂ ಓದಿ: Koppal: 45,000 ರೂಪಾಯಿಗೆ ದೇವರ ಹರಕೆ ಕೋಣ ಮಾರಾಟ!


  ಗಮನ ಸೆಳೆದ ಬೃಹತ್ ರಂಗೋಲಿ
  ರಥೋತ್ಸವಕ್ಕಾಗಿ ಕೊಪ್ಪಳದ ಮಠದ ಆವರಣದಲ್ಲಿ ಬೃಹತ್ ರಂಗೋಲಿ ಹಾಕಲಾಗಿತ್ತು. ಅದರಲ್ಲಿ ವಿಶೇಷವಾಗಿ ಸಾಮರಸ್ಯ ಸಾರುವ ರಂಗೋಲಿ ಗಮನ ಸೆಳೆಯುತ್ತಿದೆ. ರಾಜ್ಯದಲ್ಲಿ ಧರ್ಮ ದಂಗಲ್ ಮಧ್ಯೆ ಸಾಮರಸ್ಯದ ರಂಗೋಲಿ ಮಠದ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: