• ಹೋಂ
 • »
 • ನ್ಯೂಸ್
 • »
 • ಕೊಪ್ಪಳ
 • »
 • Miyazaki Mangoes: ಜಗತ್ತಲ್ಲೇ ದುಬಾರಿ ಮಾವು ನಮ್ಮ ಕೊಪ್ಪಳದಲ್ಲಿ, ರೇಟ್ ಕೆಜಿಗೆ ರಾಯಲ್ ಎನ್​ಫೀಲ್ಡ್ ಬೆಲೆಗಿಂತ ಹೆಚ್ಚು!

Miyazaki Mangoes: ಜಗತ್ತಲ್ಲೇ ದುಬಾರಿ ಮಾವು ನಮ್ಮ ಕೊಪ್ಪಳದಲ್ಲಿ, ರೇಟ್ ಕೆಜಿಗೆ ರಾಯಲ್ ಎನ್​ಫೀಲ್ಡ್ ಬೆಲೆಗಿಂತ ಹೆಚ್ಚು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೊಪ್ಪಳದಲ್ಲಿ ನಡೆಯುತ್ತಿರೋ ಮಾವು ಮೇಳದಲ್ಲಿ ಇರೋ ಈ ಮಾವಿನ ಹಣ್ಣಿಗೆ ಒಂದು ಕೆಜಿಗೆ ದರ ಬರೋಬ್ಬರಿ 2.70 ಲಕ್ಷ!

 • News18 Kannada
 • 3-MIN READ
 • Last Updated :
 • Koppal, India
 • Share this:

ಕೊಪ್ಪಳ: ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣಿನ ಸೀಸನ್ ಈಗ ಶುರುವಾಗಿದೆ. ಮಾರುಕಟ್ಟೆಯಲ್ಲಂತೂ ಮಾವಿನ ಹಣ್ಣಿನ (Mango) ವಾಸನೆ ಮೂಗಿಗೆ ತಾಗಿ ಬಾಯಲ್ಲಿ ನೀರೂರಿಸುತ್ತಿವೆ. ಮಾವು ಪ್ರಿಯರಿಗೆ ವಿವಿಧ ಬಗೆಯ ಮಾವು ಸವಿಯಲು ಅನುಕೂಲವಾಗಲಿ ಎಂದು ಕೊಪ್ಪಳದಲ್ಲಿ ಮಾವು ಮೇಳ (Mango Mela) ಆರಂಭವಾಗಿದೆ. ತರಹೇವಾರು ಮಾವಿನ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿವೆ.


ಕೊಪ್ಪಳದಲ್ಲಿ ನಡೆಯುತ್ತಿರೋ ಮಾವು ಮೇಳದಲ್ಲಿ ಇರೋ ಈ ಮಾವಿನ ಹಣ್ಣಿಗೆ ಒಂದು ಕೆಜಿಗೆ ದರ ಬರೋಬ್ಬರಿ 2.70 ಲಕ್ಷ! ಇಷ್ಟೊಂದು ರೇಟ್​ನ ಮಾವಿನ ಹಣ್ಣು ಇರುತ್ತಾ? ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೂ ನಂಬಲೇಬೇಕು.
ಕೈಬೀಸಿ ಕರೆಯುತ್ತಿದೆ ಮಾವು ಮೇಳ
ಜಪಾನ್ ಮೂಲದ ಮಿಯಾ ಜಾಕಿ ಎಂಬ ಮಾವಿನ ಹಣ್ಣಿನ ದರ ಎರಡೂವರೆ ಲಕ್ಷ! ಈ ಕೊಪ್ಪಳ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಮಾವು ಮೇಳದಲ್ಲಿ ಈ ಹಣ್ಣಿನದ್ದೇ ಆಕರ್ಷಣೆ. ಕೊಪ್ಪಳದಲ್ಲಿಯ ಮಾವು ಮೇಳ ಹಣ್ಣು ಪ್ರಿಯರನ್ನು ಕೈ ಮಾಡಿ ಕರೆಯುತ್ತಿದೆ.


ಮಿಯಾ ಜಾಕಿ ಮಾವಿನ ಹಣ್ಣು


ಇದನ್ನೂ ಓದಿ: Koppal Viral Birthday: ಶತಾಯುಷಿ ಅಜ್ಜಿಯ ‌ಸೆಂಚುರಿ ಸೆಲೆಬ್ರೇಷನ್, ಮರಿ ಮಕ್ಕಳೊಂದಿಗೆ ಮಸ್ತ್ ಮಜಾ!


ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳು ಲಭ್ಯವಾಗಲಿ ಎಂಬ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಕೊಪ್ಪಳದ ತೋಟಗಾರಿಕಾ ಕಚೇರಿ ಆವರಣದಲ್ಲಿ ಮಾವು ಮೇಳ ಆರಂಭಿಸಿದೆ.
ಈ ಮೇಳದಲ್ಲಿ ಪ್ರಮುಖವಾಗಿ ಕೇಸರ್, ಆಪೂಸ್, ದಶಹರಿ, ಬೆಮೆಶಾನ್, ಮಲ್ಲಿಕಾ, ಸಿಂಧೂರಿ, ರಸಪುರಿ ಮಾವಿನ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿವೆ. ವಿವಿಧ ರೈತರು ಬೆಳೆದಿರುವ 100 ಕ್ಕೂ ಹೆಚ್ಚು ವೆರೈಟಿಯ ಮಾವಿನ ಹಣ್ಣುಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.  ಇಲ್ಲಿ ಜಪಾನ್ ಮೂಲದ ಮಿಯಾ ಜಾಕಿ ಎಂಬ ತಳಿಯ ಮಾವಿನ ಹಣ್ಣಿನ ದರದಿಂದಲೇ ಆಕರ್ಷಣೆಯಾಗಿದೆ.


ಇದನ್ನೂ ಓದಿ: Koppal News: ಇಡೀ ಊರಿನ ಸುತ್ತ ಹಾಲೆರೆದ ಗ್ರಾಮಸ್ಥರು! ಅನ್ನ ನೀಡುವ ತಾಯಿಗೆ ವಿಶಿಷ್ಟ ಪೂಜೆ

ಈ ಮಾವು ಮೇಳ ಮೇ 31 ರವರೆಗೆ ಒಟ್ಟು 10 ದಿನಗಳ ಕಾಲ ನಡೆಯಲಿದ್ದು ಮಾವು ಪ್ರಿಯರನ್ನು ತೃಪ್ತಿಪಡಿಸಲಿದೆ.

top videos
  First published: