ಕೋಲಾರ: ಸಾಧನೆಗೆ ಮಿತಿಯೇ ಇಲ್ಲ, ಸಾಧನೆ ಮಾಡ್ಬೇಕು (Success Story) ಅಂತಿರೋರಿಗೆ ಯಾವುದೂ ಅಡ್ಡಿಯಾಗಲ್ಲ ಅನ್ನೋ ಮಾತಿದೆ. ಈ ಮಾತಿಗೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಹೈಕೋರ್ಟ್ ಸಿವಿಲ್ ನ್ಯಾಯಾಧೀಶೆಯಾಗಿ (High Court Civil Judge) ಕೋಲಾರ ಮೂಲದ (Kolar Girl Selected As Judge) 25 ವರ್ಷದ ಯುವತಿಯೋರ್ವರು ಆಯ್ಕೆಯಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಎನ್. ಗಾಯತ್ರಿ ಅವರು ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
2021 ರಲ್ಲಿ ಕಾನೂನು ಪದವಿ
2021 ರಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದ ಗಾಯತ್ರಿ ಅವರು, 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್ನ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಈ ಮುನ್ನ ರಾಜ್ಯ ಉಚ್ಛ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.
ಬಂಗಾರಪೇಟೆಯ ಸರ್ಕಾರಿ ಶಾಲಾ, ಕಾಲೇಜಿನಲ್ಲೇ ವಿದ್ಯಾಭ್ಯಾಸ ಮಾಡಿದ್ದ ಗಾಯತ್ರಿ ಅವರು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಸ್ಥಳೀಯರ ಖುಷಿಗೆ ಕಾರಣವಾಗಿದೆ.
ಕೆಜಿಎಫ್ನ ಕಾನೂನು ಕಾಲೇಜಿನಲ್ಲಿ ಕಳೆದ ವರ್ಷ ಅತಿಹೆಚ್ಚು ಅಂಕ ಪಡೆದು ರಾಜ್ಯಕ್ಕೆ 4 ನೇ ಸ್ಥಾನ ಪಡೆದಿದ್ದ ಗಾಯತ್ರಿ ಅವರು ಈ ಮುನ್ನವೂ ಶ್ರೇಯಕ್ಕೆ ಭಾಜನರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ