Mulbagal Dosa: 'ಮುಳಬಾಗಿಲು ದೋಸೆ' ಜೊತೆ ಸೇರಬೇಕಂತೆ ಮೋದಿ ಹೆಸರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ 30 ವರ್ಷಗಳಿಂದ ಮುಳಬಾಗಿಲು ನಗರದಲ್ಲಿ ಮುಳಬಾಗಿಲು ದೋಸೆ ವ್ಯಾಪಾರ ನಡೆಯುತ್ತಿದೆ.

  • News18 Kannada
  • 5-MIN READ
  • Last Updated :
  • Kolar, India
  • Share this:

ಕೋಲಾರ: ಎಲೆಕ್ಷನ್ ಪ್ರಚಾರದಲ್ಲಿ ಪುಣ್ಯಕ್ಷೇತ್ರಗಳ, ಮಹಾನ್ ವ್ಯಕ್ತಿಗಳ ಹೆಸರು ಪ್ರಸ್ತಾಪಿಸೋದು ಕಾಮನ್. ಆದರೆ ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲೆಯ (Kolar News) ಮುಳಬಾಗಿಲು ಮಸಾಲೆ ದೋಸೆ (Mulbagal Dosa) ಹೆಸರನ್ನ ಹೇಳುವ ಮೂಲಕ,  ಪ್ರಧಾನಿ ನರೇಂದ್ರ ಮೋದಿ (PM Narendra Modi) ಮುಳಬಾಗಿಲು ದೋಸೆಯ ಸ್ವಾದವನ್ನ ಇಮ್ಮುಡಿಗೊಳಿಸಿದ್ದಾರೆ. ಸದ್ಯ ಮುಳಬಾಗಿಲು ದೋಸೆ ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ.


ಕೋಲಾರದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿಯವರು, ಚಿನ್ನದ ನಾಡಿನ ಜನತೆಗೆ ನನ್ನ ನಮಸ್ಕಾರ ಎನ್ನುವ ಮೂಲಕ ಜನರ ಗಮನ ಸೆಳೆದರು. ಬಳಿಕ ಭಾಷಣದ ಮಧ್ಯೆ ಬೆಂಗಳೂರು- ಚನ್ನೈ ಮಧ್ಯೆ ಪ್ರಗತಿಯಲ್ಲಿರುವ ಎಕ್ಸ್​ ಪ್ರೆಸ್ ಹೈವೆ ಕಾಮಗಾರಿ ಪ್ರಸ್ತಾಪಿಸುವ ವೇಳೆ, ಇಲ್ಲಿನ ಅಭಿವೃದ್ದಿಗೂ ಈ ಮಾರ್ಗ ಸಹಕಾರಿ ಆಗಲಿದೆ. ಕೋಲಾರದ ಮುಳಬಾಗಿಲು ದೋಸೆಯ ಕಂಪು ಪಕ್ಕದ ರಾಜ್ಯಗಳಿಗೂ ಹರಡಲಿದೆ. ಅದರ ರುಚಿ ಮತ್ತಷ್ಟು ಪ್ರಸಿದ್ದಿಯಾಗಲಿದೆ ಎಂದು ನಗುತ್ತಲೇ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.




ಕುರುಡುಮಲೆ ವಿನಾಯಕ ದೇಗುಲವೂ ಫೇಮಸ್
ಕರ್ನಾಟಕದ ದೇವಮೂಲೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇಗುಲ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆದ್ರೆ ಈ ತಾಲೂಕಿನ ಪ್ರವಾಸಿ ತಾಣಗಳಿಗೆ ಬರುವ ಜನರು, ತಪ್ಪದೇ ಮುಳಬಾಗಿಲು ದೋಸೆಯನ್ನ ಸವಿಯದೇ ವಾಪಸ್ ಹೋಗಿರುವ ಉದಾಹರಣೆಯೇ ಇಲ್ಲ. ಮುಳಬಾಗಿಲು ನಗರದ ಗಲ್ಲಿ ಗಲ್ಲಿಗಳಲ್ಲಿ ಮುಳಬಾಗಿಲು ದೋಸೆ ಕಾರ್ನರ್ ಮಳಿಗೆಗಳಿವೆ. ದಿನನಿತ್ಯ ದೋಸೆ ಪ್ರಿಯರು ತುಂಬಿ ತುಳುಕುತ್ತಿರುವ ದೃಶ್ಯಗಳು ಸಹಜವಾಗಿ ಕಾಣಸಿಗುತ್ತದೆ.




30 ವರ್ಷಗಳಿಂದ ಸಿಗ್ತಿದೆ ಮುಳಬಾಗಿಲು ದೋಸೆ
ಕಳೆದ 30 ವರ್ಷಗಳಿಂದ ಮುಳಬಾಗಿಲು ನಗರದಲ್ಲಿ ಮುಳಬಾಗಿಲು ದೋಸೆ ವ್ಯಾಪಾರ ನಡೆಯುತ್ತಿದೆ. 2016 ರಿಂದ ಈಚೆಗೆ ನಮ್ಮ ರಾಜ್ಯವಲ್ಲದೇ ದೇಶ ವಿದೇಶಗಳಲ್ಲೂ ಮುಳಬಾಗಿಲು ದೋಸೆ ಕಂಪು ಹರಡಿದೆ. ಸಣ್ಣ ಸಣ್ಣ ಹೆಂಚಿನಲ್ಲಿ, ದೋಸೆ ಹಿಟ್ಟನ್ನ ಹಾಕಿ, ಅದಕ್ಕೆ ತುಪ್ಪ, ಹಾಗೂ ಮಸಾಲೆ ಹಾಕಿ, ಬಳಿಕ ಆಲೂಗಡ್ಡೆ ಪಲ್ಯ, ಚಟ್ನಿ ಹಾಕಿ ಸಿದ್ದಪಡಿಸುವ ಮುಳಬಾಗಿಲು ದೋಸೆ ಹೆಸರುವಾಸಿಯಾಗಿದೆ.




ಡಿಮ್ಯಾಂಡ್ ಹೆಚ್ಚುವ ಭರವಸೆ
ನಿತ್ಯ ಆಗಮಿಸುವ ಪ್ರವಾಸಿಗರ ನೆಚ್ಚಿನ ತಿಂಡಿ ತಿನಿಸಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೇ, ಮುಳಬಾಗಿಲು ಮಸಾಲೆ ದೋಸೆಯ ಬಗ್ಗೆ ಹಾಡಿ ಹೊಗಳಿದ್ದು, ಇನ್ಮುಂದೆ ದೋಸೆಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚುವುದರಲ್ಲ ಎರಡು ಮಾತಿಲ್ಲ.


ದೋಸೆಗೆ ಮೋದಿ ಹೆಸರು!
ಮುಳಬಾಗಿಲು ದೋಸೆ ಹೆಸರನ್ನ ವೇದಿಕೆ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ, ಮುಳಬಾಗಿಲು ಬಿಜೆಪಿ ಅಭ್ಯರ್ಥಿ ಶೀಗೆಹಳ್ಳಿ ಸುಂದರ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಮುಳಬಾಗಿಲು ದೋಸೆ, ಮೋದಿ ಮುಳಬಾಗಿಲು ದೋಸೆ ಎಂದು ನಾಮಕರಣ ಆದರು ಅಚ್ಚರಿ ಪಡಬೇಕಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ವರದಿ: ರಘುರಾಜ್, ನ್ಯೂಸ್ 18 ಕನ್ನಡ ಕೋಲಾರ

top videos
    First published: