• ಹೋಂ
  • »
  • ನ್ಯೂಸ್
  • »
  • ಕೋಲಾರ
  • »
  • Kolar: ಅಮಾವಾಸ್ಯೆ ಪ್ರಯುಕ್ತ ಮಂಗಳಮುಖಿಯರ ಭಯಾನಕ ಪೂಜೆ! ರಕ್ತ ಕುಡಿದ ದೇವಿ ವೇಷಧಾರಿ!

Kolar: ಅಮಾವಾಸ್ಯೆ ಪ್ರಯುಕ್ತ ಮಂಗಳಮುಖಿಯರ ಭಯಾನಕ ಪೂಜೆ! ರಕ್ತ ಕುಡಿದ ದೇವಿ ವೇಷಧಾರಿ!

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

ಸ್ಮಶಾನದಲ್ಲಿ ಘೋರಿ ಮೇಲೆ ನಿಂತು ನೃತ್ಯ ಮಾಡುತ್ತಾ, ಸಿಗರೇಟ್ ಸೇದಿದ ವೇಷಧಾರಿಯನ್ನು ನೋಡಿ ನೆರೆದವರು ಭಯಭೀತರಾಗಿದ್ದಾರೆ. ಕಾಳಿ ವೇಷಧಾರಿ ಅರ್ಚಕಿ ರಕ್ತ ಸೇವಿಸುತ್ತಿದ್ದಂತೆ ಹತ್ತಾರು ಮಂಗಳಮುಖಿಯರು ಮೈ ಮೇಲೆ ದೆವ್ವ ಬಂದಂತೆ ನೃತ್ಯ ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Kolar, India
  • Share this:

    ಕೋಲಾರ: ಅಮಾವಾಸ್ಯೆ ಪ್ರಯುಕ್ತ ಮಂಗಳಮುಖಿಯರು ವಿಭಿನ್ನವಾದ ಭಯಾನಕ ಆಚರಣೆಯೊಂದನ್ನು ನಡೆಸಿದ್ದಾರೆ.  ಕೋಲಾರದ ಬಂಗಾರಪೇಟೆಯ ಕುಂಬಾರಪಾಳ್ಯ ಸ್ಮಶಾನದಲ್ಲಿ ಮೈ ನವಿರೇಳಿಸುವ ಭಯಾನಕ ಪೂಜೆ ನಡೆಸಲಾಗಿದೆ. ಸ್ಮಶಾನದಲ್ಲಿನ ಕರುಮಾರಿಯಮ್ಮ ದೇವಿಯ 13 ನೇ ವಾರ್ಷಿಕೋತ್ಸವ ಪ್ರಯುಕ್ತ ಭಯಾನಕವಾದ ಪೂಜೆ ನಡೆಸಲಾಗಿದೆ. ಮಂಗಳಮುಖಿಯರಿಂದ ಆಚರಿಸುವ ವಿಭಿನ್ನ ಪೂಜೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.


    ಈ ಪೂಜೆಯ ವೇಳೆ ದೇವಿ ವೇಷಧಾರಿ ಕರುಮಾರಿಯಮ್ಮ ದೇವಿಗೆ ಕುರಿ ಬಲಿಕೊಟ್ಟು ಹಸಿ ರಕ್ತವನ್ನು ಸ್ಥಳದಲ್ಲೇ ಎಲ್ಲರ ಎದುರು ಕುಡಿದಿದ್ದಾರೆ. ಕಪ್ಪು ಬಣ್ಣದ ಕಾಳಿ ವೇಷ ಧರಿಸಿರುವ ಮಂಗಳಮುಖಿ ವೇಷಧಾರಿ ನಡೆಸಿದ ಭಯಾನಕ ಆಚರಣೆ ಮೈ ಜುಮ್ ಎನಿಸುವಂತಿದೆ.


    ಗೋರಿ ಮೇಲೆ ನಿಂತು ನೃತ್ಯ, ಸಿಗರೇಟ್!
    ಸ್ಮಶಾನದಲ್ಲಿ ಘೋರಿ ಮೇಲೆ ನಿಂತು ನೃತ್ಯ ಮಾಡುತ್ತಾ, ಸಿಗರೇಟ್ ಸೇದಿದ ವೇಷಧಾರಿಯನ್ನು ನೋಡಿ ನೆರೆದವರು ಭಯಭೀತರಾಗಿದ್ದಾರೆ. ಕಾಳಿ ವೇಷಧಾರಿ ಅರ್ಚಕಿ ರಕ್ತ ಸೇವಿಸುತ್ತಿದ್ದಂತೆ ಹತ್ತಾರು ಮಂಗಳಮುಖಿಯರು ಮೈ ಮೇಲೆ ದೆವ್ವ ಬಂದಂತೆ ನೃತ್ಯ ಮಾಡಿದ್ದಾರೆ.


    ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!


    13 ವರ್ಷಗಳಿಂದ ಮಂಗಳಮುಖಿಯರಿಂದ ವಿಶಿಷ್ಟ ಪೂಜೆ
    ಕಳೆದ 13 ವರ್ಷಗಳಿಂದ ಕೋಲಾರದ ಬಂಗಾರಪೇಟೆಯ ಕುಂಬಾರಪಾಳ್ಯ ಸ್ಮಶಾನದಲ್ಲಿ ಮಂಗಳಮುಖಿಯರು ಈ ಭಯಾನಕ ಪೂಜೆಯ ಆಚರಣೆ ನಡೆಸುತ್ತಿದ್ದಾರೆ.




    ಇದನ್ನೂ ಓದಿ: Hassan: ಸೊಸೈಟಿ ಅಕ್ಕಿ ರಾತ್ರೋ ರಾತ್ರಿ ಮಾಯ, ಕೊನೆಗೂ ಪತ್ತೆಯಾದ ಕಾಡಿನ ಕಳ್ಳ!


    ದೇವಿ ಪವಾಡ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ನೆರೆದಿದ್ದರು. ಮಹಾಶಿವರಾತ್ರಿ ಮರುದಿನ ನಡೆಯುವ ಕರುಮಾರಿಯಮ್ಮ ದೇವಿ ಪೂಜೆ ನಡೆಸಲಾಯಿತು.

    Published by:ಗುರುಗಣೇಶ ಡಬ್ಗುಳಿ
    First published: