ಕೋಲಾರ: ಆನೆ ಅಂದ್ರೆ ಸಾಕು, ಎಲ್ಲರ ಕಿವಿಯೂ ಒಮ್ಮೆ ಅರಳುತ್ತೆ! ಈ ಸುದ್ದಿ ನೋಡಿದ್ರೆ ನಿಮ್ಮ ಮನಸಲ್ಲೂ ಮುಗುಳುನಗು ಮೂಡುತ್ತೆ. ಹೌದು, ರಾಜ್ಯದಲ್ಲೇ ಮೊದಲ ಬಾರಿಗೆ ಕೋಲಾರ ಜಿಲ್ಲೆಯ (Kolar News) ಖಾಜಿಕಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಆನೆಗಳ ಆರೈಕೆ ಕೇಂದ್ರ (Elephant Treatment Centre In Kolar) ಶುರುವಾಗಿದೆ. ಅರಣ್ಯ ಇಲಾಖೆ ಈ ಆರೈಕೆ ಕೇಂದ್ರವನ್ನು ಆರಂಭಿಸಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಆರಂಭವಾಗಿರೋ ಈ ಆರೈಕೆ ಕೇಂದ್ರಕ್ಕೆ ವೈಲ್ಡ್ ಲೈಪ್ ರೆಸ್ಕ್ಯೂ ಅಂಡ್ ರಿಹ್ಯಾಬಿಟೇಶನ್ ಸೆಂಟರ್ (WRRC) ಸಹಯೋಗವಿದೆ.
ಒಂದೆರಡಲ್ಲ ಕಣ್ರೀ, ಸುಮಾರು 20 ಎಕರೆ ಪ್ರದೇಶದಲ್ಲಿ ಆನೆಗಳ ಆರೈಕೆ ಕೇಂದ್ರವನ್ನ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ನುರಿತ ವೈದ್ಯರು, ಮಾವುತರಿಂದ ಆನೆಗಳ ಆರೈಕೆ ಭರ್ಜರಿಯಾಗಿ ನಡೆಯುತ್ತಿದೆ.
ಆನೆಗಳ ಆರೋಗ್ಯ, ಆರೈಕೆಗಾಗಿ ಯೋಜನೆ
ಆನೆಗಳಿಗೆ ಆರೋಗ್ಯದಲ್ಲಿ ಏರುಪೇರು ಅಥವಾ ಗಾಯವಾದ್ರೆ, ಅಂತಹ ಆನೆಗಳನ್ನ ಇಲ್ಲಿಗೆ ತಂದು ಆರೈಕೆ ಮಾಡಿ ಮರಳಿ ವಾಪಸ್ ಕಳಿಸುವ ಯೋಜನೆ ಇದಾಗಿದೆ.
ಇದನ್ನೂ ಓದಿ: Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು
ಆನೆಗಳಿಗೆ ನೀಡಲಾಗುತ್ತೆ ಈ ಆಹಾರ
ಸದ್ಯ ಇಲ್ಲಿರೋ ನಾಲ್ಕು ಆನೆಗಳು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿವೆ. ಪ್ರತಿದಿನ ಆನೆಗಳಿಗೆ ಹುಲ್ಲು, ರಾಗಿ ಮುದ್ದೆ, ಹಣ್ಣುಗಳು ಅವಲಕ್ಕಿ, ಭತ್ತ, ಕೊಬ್ಬರಿ, ಅವಲಕ್ಕಿ, ಮುದ್ದೆ ನೀಡಲಾಗುತ್ತೆ. ಆಹಾರ ಹಾಗೂ ಆರೋಗ್ಯ ವೆಚ್ಚ ಸೇರಿ ಒಂದು ತಿಂಗಳಿಗೆ ಪ್ರತಿ ಆನೆಗೆ ಸುಮಾರು 2 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Hassan: ಕಾಡಾನೆ ಕಾಟಕ್ಕೆ ಬೇಸತ್ತು ಗ್ರಾಮಸ್ಥರಿಂದಲೇ ಖೆಡ್ಡಾ!
ಈ ಕುರಿತು ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲ ಅವರು, ಮುಂದಿನ ದಿನದಲ್ಲಿ ಆನೆಗಳ ಆರೈಕೆ ಕೇಂದ್ರದ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಪ್ರಯತ್ನ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಮಾಹಿತಿ, ವಿಡಿಯೋ: ರಘುರಾಜ್, ಕೋಲಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ