• Home
  • »
  • News
  • »
  • kodagu
  • »
  • Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ

Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ, ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮ ಆನೆಗಳ ಸಹಾಯದಿಂದ ಯಶಸ್ವಿಯಾಗಿ ಸೆರೆ ಹಿಡಿದವು.

  • Share this:

    ಮಡಿಕೇರಿ: ಆನೆಯನ್ನ ಹಿಡಿಯೋಕೆ ಇನ್ನೊಂದು ಆನೆ, ಎತ್ತು ಏರಿಗೆಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಅತ್ತಂದಿತ್ತ ಆನೆಗಳ (Elephants In Kodagu) ಜಗ್ಗಾಟ. ಸಾಕಾನೆಗಳ ಪ್ರಯತ್ನದಿಂದ ಕಾಡಾನೆ (Wild Elephant) ಸೆರೆ ಸಿಕ್ಕೇಬಿಡ್ತು ಎಂಬಷ್ಟರಲ್ಲಿ ಉಹು, ಬರಲ್ಲ ಎಂದು ಮತ್ತೆ ತನ್ನತ್ತಲೇ ಎಳೆದುಕೊಳ್ತಿರೋ ಕಾಡಾನೆ. ಈ ಸರ್ಕಸ್ ನೋಡ್ತಾ ತಮ್ಮ ಗೆಳೆಯನ ಬರುವಿಕೆಯಲ್ಲಿ ಕಾದಿರೋ ಇನ್ನಷ್ಟು ಕಾಡಾನೆಗಳು. ಇದೊಂಥರಾ ಕಾಡಾನೆ ಸಾಕಾನೆಗಳ ನಡುವಿನ ಹಗ್ಗಜಗ್ಗಾಟ!


    ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡುವಿನ ಕಾಫಿತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಉಪಟಳ ನೀಡುತ್ತಿದ್ದ ಕಾಡಾನೆಯೊಂದನ್ನು ಸೆರೆ ಹಿಡಿದಿದ್ದಾರೆ.


    18 ವರ್ಷದ ಈ ಆನೆಯಿಂದ ರೈತರಿಗೆ ಉಪಟಳ
    ಅಂದಾಜು 18 ವರ್ಷದ ಈ ಆನೆ ಕರಡಿಗೋಡು ಭಾಗದಲ್ಲಿ ಸಾಕಷ್ಟು ಬಾರಿ ರೈತರ ಜಮೀನಿನ ಮೇಲೆ ದಾಳಿ ನಡೆಸಿತ್ತು. ಕಾರ್ಯಾಚರಣೆ ವೇಳೆ ಈ ಆನೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಅಟ್ಟಾಡಿಸಿತ್ತು.




    ಇದನ್ನೂ ಓದಿ: Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ


    ಈ ಆನೆಗಳ ಸಹಾಯದಿಂದ ಕಾಡಾನೆ ಸೆರೆ
    ಆದ್ರೆ ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ, ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಭೀಮ ಆನೆಗಳ ಸಹಾಯದಿಂದ ಯಶಸ್ವಿಯಾಗಿ ಸೆರೆ ಹಿಡಿದವು.


    ಇದನ್ನೂ ಓದಿ: Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು


    ಸೆರೆಸಿಕ್ಕ ಆನೆಯನ್ನ ಲಾರಿ ಹತ್ತಿಸೋಕೆ ಅರಣ್ಯ ಇಲಾಖೆ ಸಿಬ್ಬಂದಿ ಸರ್ಕಸ್ಸನ್ನೇ ಮಾಡಿದರು. ಕೊನೆಗೂ ಈ ಕಾಡಾನೆ ಹಿಡಿಯೋ ಕಾರ್ಯಾಚರಣೆ ಯಶಸ್ವಿಯಾಯ್ತು. ಸೆರೆಸಿಕ್ಕ ಕಾಡಾನೆಯನ್ನ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯ್ತು.
    ಒಟ್ಟಾರೆ ಈ ಕಾರ್ಯಾಚರಣೆ ಕರಡಿಗೋಡು ಭಾಗದ ಸ್ಥಳೀಯರಿಗೆ ಕೊಂಚ ನೆಮ್ಮದಿ ಮೂಡಿಸ್ತು.


    ವರದಿ: ಸ್ಟಾನ್ಲಿ ಡಿ. ಕೊಡಗು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು