ಕೊಡಗು: ‘‘ತಡೀರಪ್ಪ.. ಅದ್ರ ಕಾಲು ಹಿಡೀರಿ.. ಕೆನೈನ್ ನೋಡ್ಕೊಳ್ಳಿ.. ಫೋಟೋ ತೆಗೆದ್ಬಿಡಿ.. ಕಾಡಿನ ನಡುವೆ ಕೂಗಾಟ..ಓಡಾಟ! ಬಿರುಸಿನ ಚಟುವಟಿಕೆ! ಕೊನೆಗೂ ಇಬ್ಬರ ಸಾವಿಗೆ ಕಾರಣವಾಗಿದ್ದ ಹುಲಿಯನ್ನ(Kodagu Tiger Capture Operation) ಸೆರೆ ಹಿಡಿಯುವಲ್ಲಿ ಫಾರೆಸ್ಟ್ ಆಫೀಸರ್ಸ್ (Forest Department) ಯಶಸ್ವಿಯಾದ್ರು. ಜನ ನಿಟ್ಟುಸಿರು ಬಿಟ್ರೆ, ಹುಲಿರಾಯ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕೊಡಗಿನ ಕಾಡಿನಿಂದ ಹೊರ ಬೀಳುವಂತಾಯಿತು.
ಟೈಗರ್ ಆಪರೇಷನ್
ಹೌದು, ಕೊಡಗಿನ ಬಾಡಗ ಗ್ರಾಮದಲ್ಲಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿ ಓರ್ವ ಬಾಲಕ ಹಾಗೂ ವೃದ್ಧರ ಸಾವಿಗೆ ಕಾರಣವಾಗಿದ್ದ ಹುಲಿಯನ್ನ ಕೊನೆಗೂ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಬಳಿಯ ನಾಣಚ್ಚಿಗೇಟ್ ಸೆರೆ ಹಿಡಿಯಲಾಗಿದೆ. ಸತತ ಕಾರ್ಯಾಚರಣೆ ಮೂಲಕ ನೂರಾರು ಸಿಬ್ಬಂದಿಗಳು, ಗಜರಾಜನನ್ನ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದೇ ಹುಲಿರಾಯ ಕೊನೆಗೂ ಶರಣಾಗಿದ್ದಾನೆ.
ಭಾರೀ ತಂಡದಿಂದ ಕಾರ್ಯಾಚರಣೆ
ಇದಕ್ಕಾಗಿ ಸುಮಾರು 150 ಸಿಬ್ಬಂದಿಗಳು, ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳ ಸಹಾಯವನ್ನು ಪಡೆಯಲಾಗಿತ್ತು. 10 ಕ್ಷಿಪ್ರ ಕಾರ್ಯಪಡೆ ವಾಹನ, ರೈಫಲ್ ಸೇರಿದಂತೆ 20 ಬಗೆಯ ಆಯುಧಗಳನ್ನು ಬಳಸಲಾಗಿತ್ತು.
ಇದನ್ನೂ ಓದಿ: Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ
ನಾಣಚ್ಚಿ ಗೇಟ್ ಬಳಿ ಅಡಗಿದ್ದ ಹುಲಿಯನ್ನ ಕಂಡ ಅರಣ್ಯಾಧಿಕಾರಿ ಓರ್ವರು ತಕ್ಷಣವೇ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದು, ಛಲ ಬಿಡದ ಹುಲಿರಾಯ ಓಟಕ್ಕಿತ್ತನಾದರೂ ಬಳಿಕ ಪ್ರಜ್ಞೆ ತಪ್ಪಿ ಅರಣ್ಯ ಸಿಬ್ಬಂದಿಗಳ ಕೈಗೆ ಸಿಗುವಂತಾಯಿತು.
ಇದನ್ನೂ ಓದಿ: Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!
ನಿಟ್ಟುಸಿರು ಬಿಟ್ಟ ಕೊಡಗಿನ ಜನ
ಇಬ್ಬರ ಸಾವಿನಿಂದ ಕಂಗಾಲಾಗಿದ್ದ ಜನ ಕಾಫಿ ತೋಟದ ಕೆಲಸಕ್ಕೂ ಹೋಗಲು ಭಯಭೀತರಾಗಿದ್ದರು. ಅದೆಲ್ಲಿ ಹುಲಿ ದಾಳಿಯಾಗುತ್ತೋ ಅನ್ನೋ ಭಯ ಆವರಿಸಿಕೊಂಡಿತ್ತು. ಇದೀಗ ಕಾರ್ಯಾಚರಣೆ ಮೂಲಕ ಹುಲಿಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.
ವರದಿ: ಸ್ಟಾನ್ಲಿ.ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ