• Home
  • »
  • News
  • »
  • kodagu
  • »
  • Pandi Curry: ಕೊಡಗಿನಲ್ಲೇ ವರ್ಲ್ಡ್​ ಫೇಮಸ್ ಈ ಪಂದಿಕರಿ ಹೊಟೇಲ್!

Pandi Curry: ಕೊಡಗಿನಲ್ಲೇ ವರ್ಲ್ಡ್​ ಫೇಮಸ್ ಈ ಪಂದಿಕರಿ ಹೊಟೇಲ್!

ಪಂದಿಕರಿ ವಿಡಿಯೋ ನೋಡಿ

"ಪಂದಿಕರಿ ವಿಡಿಯೋ ನೋಡಿ"

ಬಿಸಿ ಬಿಸಿಯಾದ ಈ ಪಂದಿಕರಿ ಜೊತೆಗೆ ಸವಿಯೋಕೆ ಕಡಂಬುಟ್, ನೂಲ್ಪಟ್ಟ್, ಅಕ್ಕಿ ರೊಟ್ಟಿ ಅಥವಾ ಇಡ್ಲಿ ಬೆಸ್ಟ್ ಕಾಂಬಿನೇಷನ್. ಮಡಿಕೇರಿಯ ಹೋಂಸ್ಟೇ, ರೆಸಾರ್ಟ್​ಗಳ ಮೆನುವಿನಲ್ಲಿ ಈ ಡಿಶ್ ಇದ್ದೇ ಇರುತ್ತೆ.

  • Share this:

    ಮಡಿಕೇರಿ: ಬಿಸಿ ಬಿಸಿಯಾದ ಕರಿ, ರುಚಿ ರುಚಿಯಾದ ಆಹಾರ..ಇಷ್ಟಿದ್ರೆ ಸಾಕು ಮಳೆಗಾಲದಲ್ಲಿ ಬಾಯಿ ಚಪ್ಪರಿಸೋಕೆ. ಅದ್ರಲ್ಲೂ ಚುಮು ಚುಮು ಎನಿಸುವ ಮಡಿಕೇರಿಯ (Madikeri Weather) ವಾತಾವರಣದಲ್ಲಂತೂ ಇಂತಹ ಆಹಾರವೇ ಬೆಸ್ಟ್. ಅಂತಹದ್ದೇ ಟೇಸ್ಟಿಯಾದ ಫುಡ್ ಇದು ಕೂಡಾ. ಅದ್ರಲ್ಲೂ ಪೋರ್ಕ್ ಪ್ರಿಯರಿಗೆ ಇದನ್ನ ನೋಡ್ತಿದ್ರೆ ಬಾಯಲ್ಲಿ ನೀರೂರೋದ್ರಲ್ಲಿ ಸಂಶಯನೇ ಇಲ್ಲ. ಪಂದಿಕರಿ ಕೊಡವರ ನಾಡಿನ (Kodagu Pandi Curry) ಸ್ಪೆಷಲ್. ಅದ್ರಲ್ಲೂ ಪಂದಿಕರಿಯನ್ನು ಡಿಫರೆಂಟ್ ಟೇಸ್ಟಿಯಲ್ಲಿ ಗ್ರಾಹಕರಿಗೆ ಉಣಬಡಿಸುವುದೇ ಅಡುಗೆ ಮಂದಿಗಿರೋ ಸವಾಲ್.ಇಲ್ಲೊಂದು ದಂಪತಿ ಸಣ್ಣ ಹೊಟೇಲ್ ನಡೆಸುತ್ತಿದ್ದು ತಾವೇ ಹಂದಿ ಮಾಂಸದ ಪಂದಿಕರಿ (Pandi Curry) ಮಾಡ್ತಾರೆ.


    ಬಿಸಿ ಬಿಸಿಯಾದ ಈ ಪಂದಿಕರಿ ಜೊತೆಗೆ ಸವಿಯೋಕೆ ಕಡಂಬುಟ್, ನೂಲ್ಪಟ್ಟ್, ಅಕ್ಕಿ ರೊಟ್ಟಿ ಅಥವಾ ಇಡ್ಲಿ ಬೆಸ್ಟ್ ಕಾಂಬಿನೇಷನ್. ಮಡಿಕೇರಿಯ ಹೋಂಸ್ಟೇ, ರೆಸಾರ್ಟ್ ಗಳ ಮೆನುವಿನಲ್ಲಿ ಈ ಡಿಶ್ ಇದ್ದೇ ಇರುತ್ತೆ.


    ಎಲ್ಲಿದೆ ಈ ಹೊಟೇಲ್?
    ಆದರೆ ಕೊಹಿನೂರ್ ರಸ್ತೆಯಲ್ಲಿನ ಕೂರ್ಗ್ ಫುಡ್ ಅನ್ನೋ ಹೋಟೆಲ್ ನ ಕಟ್ಟಿ ಮಂದಣ್ಣ ಹಾಗೂ ಲಾಲು ದಂಪತಿ ನಡೆಸ್ತಿರೋ ಈ ಪಂದಿಕರಿ ಹೊಟೇಲ್ ಊರಲ್ಲೇ ಫೇಮಸ್. ರೇಟ್ ಕೂಡಾ ಅಷ್ಟೇ ಕಡಿಮೆ.


    ಇದನ್ನೂ ಓದಿ: Sirsi: ನೀರು ಚಿಮ್ಮೋ ಬಾವಿ! ಇದು ಶಿರಸಿಯಲ್ಲಿರೋ ಅಚ್ಚರಿ!


    ಪೋರ್ಕ್ ಸ್ಪೆಷಲ್ ಪಂದಿಕರಿಯೇ ಸೂಪರ್
    ಕೊಡವರು ತಮ್ಮ ವಿಶಿಷ್ಟ ಸಂಸ್ಕೃತಿಯಿಂದಲೇ ವಿಶ್ವಖ್ಯಾತಿ ಪಡೆದಿದ್ದಾರೆ. ಅದರಲ್ಲಿ ಈ ಪಂದಿಕರಿ ಹಾಗೂ ಕಡಂಬುಟ್ ಕೂಡಾ ಒಂದು. ಮಕ್ಕಳಿಂದ ಮುದುಕರವರೆಗೂ ಎಲ್ಲರ ಫೇವರೆಟ್ ಕೂಡಾ. ಇಲ್ಲಿಗೆ ಆಗಮಿಸೋ ಪ್ರವಾಸಿಗರಿಗೂ ಅಷ್ಟೇ ಪೋರ್ಕ್ ಸ್ಪೆಷಲ್ ಪಂದಿಕರಿ ಮೊದಲ ಆದ್ಯತೆ.


    ಬಾಯಲ್ಲಿ ನೀರೂರಿಸೊ ಈ ಕರಿ ಸವಿಯೋದಕ್ಕೆ ಎಷ್ಟು ಸಮಯ ಬೇಕಾದ್ರೂ ವ್ಯಯಿಸರು. ಅದ್ರಲ್ಲೂ ಈ ಕೂರ್ಗ್ ಫುಡ್ ಇದೆಯಲ್ವ ಇಲ್ಲಿ ಸಿಗೋ ಪಂದಿಕರಿ ಟೇಸ್ಟೇ ಬೇರೆ. ಹಾಗಾಗಿ ಕಳೆದ 9 ವರ್ಷದಿಂದ ಇವ್ರ ಬ್ಯುಸಿನೆಸ್ ಕೂಡ ಚೆನ್ನಾಗಿಯೇ ದಂಪತಿಯ ಕೈ ಹಿಡಿದಿದೆ.


    ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


    ಒಟ್ಟಿನಲ್ಲಿ ಆಹಾರ, ಸಂಸ್ಕೃತಿ, ಆಚಾರಗಳೆಲ್ಲದ್ರಲ್ಲೂ ಕೊಡವರು ಡಿಫರೆಂಟ್ ಅನ್ನೋದು ಎಲ್ರಿಗೂ ಗೊತ್ತು. ಅದ್ರಲ್ಲೂ ಆಹಾರ ಪ್ರಿಯರಿಗಂತೂ ಕೊಡವರ ಈ ಆಹಾರ ಶೈಲಿ ಇಷ್ಟವಾಗ್ದೇ ಇರದು. ಹಾಗಿದ್ರೆ ನೆನಪಿರಲಿ, ಕೂರ್ಗ್ ಪ್ರವಾಸದಲ್ಲಿ ಈ ಪಂದಿಕರಿ, ಕಡಂಬುಟ್ ನಿಮ್ಮ ಫುಡ್ ಮೆನುವಿನಲ್ಲಿ ಮರೆಯದೇ ಸೇರಿಸಿಕೊಳ್ಳಿ.


    ವರದಿ: ಸ್ಟ್ಯಾನ್ಲಿ, ಕೊಡಗು

    Published by:ಗುರುಗಣೇಶ ಡಬ್ಗುಳಿ
    First published: