ಕೊಡಗು: ಛೋಟಾ ಭೀಮ್ನಂತೆ ಕಾಣೋ ಪುಟ್ಟದಾದ ಗೊಂಬೆ. ಅದಕ್ಕೆ ಎಳನೀರು, ತಿಂಡಿ ತಿನ್ನಿಸ್ತಿರೋ ಮಹಿಳೆ. ಅರೆ! ನಿರ್ಜೀವ ಬೊಂಬೆಗೂ ತಿಂಡಿ ತೀರ್ಥ ಕೊಟ್ರೆ ಅದೇನ್ ಕುಡಿಯುತ್ತೆ, ಅದೇನ್ ತಿನ್ನುತ್ತೆ ಅಂತಾ ನಾವೆಲ್ಲ ಕೇಳ್ಬಹುದು. ಆದ್ರೆ ಈ ಫ್ಯಾಮಿಲಿಗೆ ಈ ವಿಗ್ರಹದ (Krishna Idol) ಜೊತೆಗಿರುವ ಸಂಬಂಧ ಅಂತಿಂಥದ್ದಲ್ಲ! ಅದನ್ನ ಹೇಳ್ತಾ ಹೋದ್ರೆ ನೀವೇ ʼʼಇದೆಲ್ಲ ಸಾಧ್ಯವೇ ?ʼʼ ಅಂತಾ ನೀವು ಪ್ರಶ್ನಿಸೋದ್ರಲ್ಲಿ ಡೌಟಿಲ್ಲ!
ಯೆಸ್, ಹೀಗೆ ಹೊಂದಿರುವ ಈ ಪುಟ್ಟದಾದ ಬೊಂಬೆ ಬಾಲಕೃಷ್ಣನದ್ದು. ಹಿಂದೂ ಧರ್ಮದಲ್ಲಿ ಕೃಷ್ಣನಿಗೆ ಶ್ರೇಷ್ಠ ಸ್ಥಾನಮಾನ ಹೇಗಿದ್ಯೋ, ಅದೇ ರೀತಿ ಜೈನ ಕುಟುಂಬವಾದರೂ ಮಹಾರಾಷ್ಟ್ರದ ಹಿಮೇಶ್ ಕುಟುಂಬದಲ್ಲಿ ಅದೇ ಸ್ಥಾನ ಈ ಬಾಲಕೃಷ್ಣನಿಗಿದೆ.
ಈ ಬಾಲಕೃಷ್ಣ ಕೇವಲ ಹಿಮೇಶ್ ಅವರ ಮನೆ ದೇವರಾಗಿ ಉಳಿದಿಲ್ಲ, ಬದಲಿಗೆ ಇವರು ಎಲ್ಲೆಲ್ಲಿ ಹೋಗ್ತಾರೋ, ಅಲ್ಲೆಲ್ಲ ಕರೆದೊಯ್ಯತ್ತಾರೆ. ಅದಕ್ಕಾಗಿಯೇ ಚೆಂದದ ಪೆಟ್ಟಿಗೆ ರೆಡಿ ಇದೆ. ಪೆಟ್ಟಿಗೆಯ ಸಿಂಗಾರವೂ ಆಕರ್ಷಣೀಯವಾಗಿದೆ.
ಪವಾಡ ಮಾಡುವ ಬಾಲಗೋಪಾಲ
ಹೀಗೆ ಪ್ರವಾಸ ಹೋಗೋದಿದ್ರೂ ಹಿಮೇಶ್ ಅವರ ಫ್ಯಾಮಿಲಿ ಜೊತೆಗೆ ಬಾಲಕೃಷ್ಣ ಇದ್ದೇ ಇರುತ್ತಾನೆ. ಆಶ್ಚರ್ಯ ಅಂದ್ರೆ ಇವ್ರ ಫ್ಯಾಮಿಲಿಗೆ ಬಾಲಗೋಪಾಲನ ಪ್ರವೇಶ ಆದ್ಮೇಲೆ ನಡೆದಿದ್ದೆಲ್ಲವೂ ವಿಸ್ಮಯವಂತೆ. ಹೀಗಾಗಿ ಎಲ್ಲೇ ಹೋಗೋದಿದ್ರೂ ಮುದ್ದುಕೃಷ್ಣನನ್ನ ಜೊತೆಗೆ ಕರೆದೊಯ್ಯದೇ ಹಿಮೇಶ್ ಕುಟುಂಬ ಎಲ್ಲೂ ಹೋಗೋದಿಲ್ಲ.
ಬಾಲಕೃಷ್ಣನಿಂದಲೇ ಮಾರ್ಗದರ್ಶನ
ಮುಂಬೈ ಮಹಾನಗರದ ಈ ಕುಟುಂಬ ತನ್ನ ಜೀವನದ ಒಂದು ಭಾಗವಾಗಿ ಶ್ರೀಕೃಷ್ಣನನ್ನು ಸ್ವೀಕರಿಸಿದೆ. ಹೋದಲ್ಲಿ, ಬಂದಲ್ಲಿ, ಮಲಗಿದಲ್ಲಿ, ಊಟದಲ್ಲಿ ಎಲ್ಲಾ ಕಡೆ ಇವರೊಂದಿಗೆ ಬಾಲಕೃಷ್ಣ ಜೊತೆಯಲ್ಲೇ ಇರುತ್ತಾನೆ. ಇಷ್ಟೇ ಅಲ್ಲ, ಬಾಲಗೋಪಾಲ ಜೀವನದ ಪ್ರತೀ ಹಂತದಲ್ಲೂ ಈ ಕುಟುಂಬಕ್ಕೆ ಮಾರ್ಗದರ್ಶನ, ಸಲಹೆ, ಸೂಚನೆ ಕೊಡುತ್ತಾನಂತೆ! ಮುಂಬೈನ ಉದ್ಯಮಿ ಹಿಮೇಶ್ ಎಂಬವರ ಕುಟುಂಬದಲ್ಲಿ ಬಾಲಕೃಷ್ಣ ಕಳೆದ 13 ವರ್ಷಗಳಿಂದಲೂ ಪವಾಡ ಮಾಡುತ್ತಿದ್ದಾನೆ ಎನ್ನುತ್ತಾರೆ ಹಿಮೇಶ್ ಅವರು.
ತಿಂಡಿ, ಪೂಜೆ ಪುನಸ್ಕಾರ
ಇನ್ನು ಹಿಮೇಶ್ ಅವರ ಪತ್ನಿ ಕೇತನ್ ಮತ್ತು ಪುತ್ರ ಜೈಗೂ ಬಾಲಕೃಷ್ಣನೆಂದರೆ ಎಲ್ಲಕ್ಕೂ ಹೆಚ್ಚು. ದಿನನಿತ್ಯ ಕೃಷ್ಣನಿಗೆ ಪೂಜೆ ಪುನಸ್ಕಾರ, ಊಟೋಪಚಾರ ಎಲ್ಲವೂ ನಡೆಯುತ್ತದೆ. ತಾವು ತಿನ್ನುವ ಆಹಾರವನ್ನೇ ಶ್ರೀಕೃಷ್ಣನಿಗೂ ನೀಡುತ್ತಾರೆ. ಹಿಮೇಶ್ ಅವರ ಕುಟುಂಬದಲ್ಲಿ ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಕೃಷ್ಣ ಸೂಚನೆ ಕೊಡುತ್ತಾನಂತೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಯಾವ ದಾರಿಯಲ್ಲಿ ನಡೆಯಬೇಕು ಎಂಬುದನ್ನೂ ಆತನೇ ಸೂಚನೆ ಮೂಲಕ ಹೇಳುತ್ತಾನಂತೆ.
ಇದನ್ನೂ ಓದಿ: Kodagu Tiger: ಈ ಹುಲಿ ಹಿಡಿಯೋಕೆ ಬೇಕಾಯ್ತು 5 ಕಾಡಾನೆ, 20 ಬಗೆಯ ಆಯುಧ,150 ಸಿಬ್ಬಂದಿ!
ಪ್ರವಾಸದ ಸಮಯದಲ್ಲೂ ಸಾಥ್
ಇತ್ತೀಚೆಗೆ ಇದೇ ಕುಟುಂಬ ಮಡಿಕೇರಿಯ ಅಬ್ಬಿ ಫಾಲ್ಸ್ಗೆ ಭೇಟಿ ನೀಡಿದಾಗಲೂ ಈ ಬಾಲಕೃಷ್ಣ ಅವರ ಕೈಯ್ಯಲ್ಲೇ ಇದ್ದ! ಉರಿಬಿಸಿಲಿನ ವಾತಾವರಣದಲ್ಲಿ ಬಾಲಗೋಪಾಲನಿಗೆ ಎಳನೀರು ಕುಡಿಸಿ, ಗಂಜಿ ತಿನ್ನಿಸಿದ ಕೇತನ್, ಆ ಬಳಿಕ ತಾವೂ ತಿಂದು ಸಂತಸಪಟ್ಟಿದ್ದಾರೆ.
ಇದನ್ನೂ ಓದಿ: Elephant Signal Kodagu: ಆನೆ ಬಂದ್ರೆ ಬರುತ್ತೆ ಮೆಸೇಜ್! ಕಾಡಾನೆ ಸಮಸ್ಯೆಗೆ ಹೊಸ ಪ್ಲಾನ್!
ಉಡುಪಿಯಲ್ಲಿ ಕನಕದಾಸರ ಭಕ್ತಿಗೆ ಸಂತುಷ್ಟನಾದ ಶ್ರೀಕೃಷ್ಣ, ಗೋಡೆಯನ್ನೇ ಒಡೆದು ಕನಕನಿಗೆ ದರ್ಶನವಿತ್ತಿದ್ದನ್ನ ಕೇಳಿದ್ದೇವೆ. ಅದೇ ಥರ ಜೈನ ಕುಟುಂಬವೊಂದಕ್ಕೆ ಬಾಲಕೃಷ್ಣ ಹೀಗೆ ಒಲಿದಿದ್ದು ಅಚ್ಚರಿಯೇ ಸರಿ!
ವರದಿ: ಸ್ಟ್ಯಾನ್ಲಿ ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ