• Home
  • »
  • News
  • »
  • kodagu
  • »
  • Success Story: ಹಲವು ಸಮಸ್ಯೆಗಳ ಮಧ್ಯೆಯೇ ಗೆದ್ದರು ಮಡಿಕೇರಿಯ ಈ ಕಾಫಿ ಕೃಷಿಕ! ಇಲ್ಲಿದೆ ನೋಡಿ ಸಕ್ಸಸ್ ಗುಟ್ಟು

Success Story: ಹಲವು ಸಮಸ್ಯೆಗಳ ಮಧ್ಯೆಯೇ ಗೆದ್ದರು ಮಡಿಕೇರಿಯ ಈ ಕಾಫಿ ಕೃಷಿಕ! ಇಲ್ಲಿದೆ ನೋಡಿ ಸಕ್ಸಸ್ ಗುಟ್ಟು

ಕಾಫಿ ಸಕ್ಸಸ್ ಗುಟ್ಟು

ಕಾಫಿ ಸಕ್ಸಸ್ ಗುಟ್ಟು

ಅರೇ! ಎಲ್ರೂ ಇಷ್ಟೊಂದು ಸಮಸ್ಯೆ ಅನುಭವಿಸುತ್ತಿರುವಾಗ ಇವರು ಹೇಗೆ ಸಾಧನೆ ಮಾಡಿದರು ಅಂತ ಯೋಚಿಸಿದ್ತಿದ್ದೀರಾ? ಇಲ್ಲಿದೆ ನೋಡಿ ಅವರ ಸಕ್ಸಸ್ ಕಥೆ.

  • News18 Kannada
  • 2-MIN READ
  • Last Updated :
  • Kodagu, India
  • Share this:

    ಮಡಿಕೇರಿ: ಹವಾಮಾನ ವೈಪರೀತ್ಯದಿಂದ ಕಾಫಿ ಕೃಷಿಕರು ದಿನೇ ದಿನೇ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಚಳಿಗಾಲದಲ್ಲೂ ಸುರಿದ ನಿರಂತರ ಮಳೆಯಿಂದ ಉಂಟಾಗುತ್ತಿರುವ ಬೆಳೆ ಹಾನಿ, ರೋಗ ರುಜಿನಗಳು ಕಾಫಿ ಕೃಷಿಕರ ನಿದ್ದೆಗೆಡಿಸಿವೆ. ಈ ಸವಾಲುಗಳ ನಡುವೆಯೂ ಮಡಿಕೇರಿಯ ಕಫಿ ಕೃಷಿಕರೊಬ್ಬರು ತಮ್ಮದೇ ಆದ ಪ್ರಗತಿಪರ ವಿಧಾನದಿಂದ (Dwarf Robusta Coffee Variety) ಕಾಫಿ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಡಿಕೇರಿಯ (Madikeri) ಪ್ರಗತಿಪರ ಕೃಷಿಕ ಸುರೇಶ್ ಅವರು ಒಟ್ಟು 1220 ಕುಬ್ಜ ತಳಿಯ ರೋಬಸ್ಟಾ ಗಿಡಗಳಿಂದ ಸುಮಾರು 7,000 ಕಿಲೋಗಳಷ್ಟು ಮಾಗಿದ ಕಾಫಿ ಬೀಜಗಳನ್ನು ಕೊಯ್ಲು ಮಾಡಿದ್ದಾರೆ. ಅರೇ! ಎಲ್ರೂ ಇಷ್ಟೊಂದು ಸಮಸ್ಯೆ ಅನುಭವಿಸುತ್ತಿರುವಾಗ ಇವರು ಹೇಗೆ ಸಾಧನೆ (Success Story) ಮಾಡಿದರು ಅಂತ ಯೋಚಿಸಿದ್ತಿದ್ದೀರಾ? ಇಲ್ಲಿದೆ ನೋಡಿ ಅವರ ಸಕ್ಸಸ್ ಕಥೆ.


    2020 ರಲ್ಲಿ ಸುರೇಶ್ ಅವರು ಕೋಲ್ಕತ್ತಾದಲ್ಲಿರುವ ತಮ್ಮ ಸ್ನೇಹಿತನಿಂದ ರೋಬಸ್ಟಾ ಕಾಫಿಯ ಕುಬ್ಜ ತಳಿಯ ಬಗ್ಗೆ ತಿಳಿದುಕೊಂಡರು. ಯಾವಾಗಲೂ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವ ಸುರೇಶ್ ಅವರು ಈ ಕುಬ್ಜ ರೋಬಸ್ಟಾ ತಳಿಯ ಐದು ಬೀಜಗಳನ್ನು ತಂದು ಗಿಡ ಬೆಳೆಸಿದರು.


    ಐದು ಸಸಿಗಳಲ್ಲಿ ಬದುಕಿದ್ದು ನಾಲ್ಕೇ ನಾಲ್ಕು!
    ಅವರು ಕೋಲ್ಕತ್ತಾದಿಂದ ತಂದಿದ್ದ ಐದು ಬೀಜಗಳಲ್ಲಿ ಒಂದು ಬದುಕುಳಿಯಲಿಲ್ಲ. ಉಳಿದ ನಾಲ್ಕು ಸಸಿಗಳು ಚಿಗುರಿದವು. ಆ ನಾಲ್ಕು ಸಸಿಗಳಿಂದ 196 ಕುಬ್ಜ ಗಿಡಗಳನ್ನು ಬೆಳೆಸಿ ಈಗ ಅದೇ ಜಾತಿಯ 1220 ಗಿಡಗಳನ್ನು ನೆಟ್ಟಿದ್ದಾರೆ ಸುರೇಶ್.


    7 ಟನ್ ಕಾಫಿ ಬೀಜ ಕೈಗೆ!
    6 ಅಡಿ X 6 ಅಡಿ ಅಂತರದಲ್ಲಿ ಒಟ್ಟು ಮೂರು ಎಕರೆ ಜಾಗದಲ್ಲಿ ಕುಬ್ಜ ತಳಿಯ ರೋಬಸ್ಟಾ ಕಾಫಿಯನ್ನು ಅಭಿವೃದ್ಧಿಪಡಿಸಿ ಸುರೇಶ್, ಆ ಪ್ರದೇಶದಲ್ಲಿ ನೆರಳಿಗಾಗಿ ಗ್ಲಿರಿಸಿಡಿಯಾ ಮರವನ್ನು ನೆಟ್ಟರು. ಮೂರು ವರ್ಷಗಳ ನಂತರ ಗಿಡಗಳು ಇಳುವರಿ ನೀಡುತ್ತಿವೆ. ನಾನು ಇಲ್ಲಿಯವರೆಗೆ 7 ಟನ್ ಕೊಯ್ದಿದ್ದೇನೆ ಎಂದು ಅವರು ತಮ್ಮ ಸಕ್ಸಸ್​ನ ಕಥೆಯನ್ನು ವಿವರಿಸುತ್ತಾರೆ.


    ಹೆಚ್ಚು ನಿರ್ವಹಣೆಯ ಅಗತ್ಯವಿಲ್ವಂತೆ
    ಕುಬ್ಜ ತಳಿಯ ಕಾಫಿ ಗಿಡಗಳಿಗೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ ಅಂತಾರೆ ಸುರೇಶ್. ತೋಟಕ್ಕೆ ಐದರಿಂದ ಆರು ಬಾರಿ ಗೊಬ್ಬರ ಹಾಕಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ತುಂತುರು ನೀರಾವರಿ ಮೂಲಕ ನೀರಾವರಿ ಮಾಡಿದರಾಯ್ತು. ಗಿಡಗಳು ಕೊಳೆಯುವುದನ್ನು ತಪ್ಪಿಸಲು ಮಾನ್ಸೂನ್‌ಗಿಂತ ಮೊದಲು ರಾಸಾಯನಿಕ ಸಿಂಪಡಣೆ ಮಾಡಿದರು. ಅಲ್ಲದೇ, ವಾತಾವರಣಕ್ಕೆ ತಕ್ಕಂತೆ ಕಾಫಿ ತೋಟವನ್ನು ನೋಡಿಕೊಂಡರು.


    ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ


    ಸುರೇಶ್ ಅವರು ಕಾಫಿ ಗಿಡಗಳಿಗೆ ಅಗತ್ಯವಾದ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಮಾತ್ರ ನೀಡುತ್ತಾರೆ. ಈ ಪೋಷಕಾಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ಕೈಯಿಂದಲೇ ಒದಗಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಸಂಬಳ ಹೆಚ್ಚಾಗಿತ್ತು. ಆದರೂ ಸಹ ಹೀಗೆ ಮಾಡೋದ್ರಿಂದ ಗಿಡಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಹೆಚ್ಚಾಗುತ್ತೆ ಎಂತಾರೆ ಪ್ರಗತಿಪರ ಕೃಷಿಕ ಸುರೇಶ್.


    ಇದನ್ನೂ ಓದಿ: Positive Story: ಜಗತ್ತಿನಲ್ಲಿ ಶಾಂತಿ ನೆಲೆಸೋಕೆ 8ನೇ ಕ್ಲಾಸ್ ಬಾಲಕಿಯ ಯಕ್ಷ ಪ್ರಯತ್ನ!


    ಡ್ವಾರ್ಫ್ ರೋಬಸ್ಟಾ ಗಿಡಗಳು ಕಾಫಿ ಮಂಡಳಿಯಿಂದ ಇನ್ನೂ ಪ್ರಮಾಣೀಕರಿಸಲ್ಪಟ್ಟಿಲ್ಲ. ಆದರೂ ಮುಂದಿನ ದಿನಗಳಲ್ಲಿ ಇವು ಕಾಫಿ ಮಂಡಳಿಯ ಗಮನ ಸೆಳೆಯಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ ಸುರೇಶ್.

    Published by:ಗುರುಗಣೇಶ ಡಬ್ಗುಳಿ
    First published: