• ಹೋಂ
 • »
 • ನ್ಯೂಸ್
 • »
 • ಕೊಡಗು
 • »
 • Kodagu: ಹಣ್ಣಿನ ಕೆತ್ತನೆಯಲ್ಲಿ ಮಹಾನ್ ನಾಯಕರು! ಮಡಿಕೇರಿಯಲ್ಲಿ ಆಕರ್ಷಿಸಿದ ಸುಂದರ ಕಲಾಕೃತಿಗಳು

Kodagu: ಹಣ್ಣಿನ ಕೆತ್ತನೆಯಲ್ಲಿ ಮಹಾನ್ ನಾಯಕರು! ಮಡಿಕೇರಿಯಲ್ಲಿ ಆಕರ್ಷಿಸಿದ ಸುಂದರ ಕಲಾಕೃತಿಗಳು

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಇತಿಹಾಸ ನಿರ್ಮಿಸಿದ ಕಾಂತಾರ ಸಿನಿಮಾದ ದೈವದ ಪ್ರತಿಕೃತಿ ಎಲ್ಲರ ಚಿತ್ತ ಸೆಳೆಯಿತು.

 • News18 Kannada
 • 3-MIN READ
 • Last Updated :
 • Kodagu, India
 • Share this:

  ಮಡಿಕೇರಿ: ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್, ಪ್ರಧಾನಿ ನರೇಂದ್ರ ಮೋದಿ, ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್, ಕೊಡಗಿನ ಕಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ರಾಷ್ಟಕವಿ ಕುವೆಂಪು ಹೀಗೆ ಹಣ್ಣಿನ ಕೆತ್ತನೆಯಲ್ಲೇ ಚೆಂದದ ರೂಪ ಪಡೆದಿದ್ದಾರೆ ಮಹಾನ್ ನಾಯಕರು. ರಾಷ್ಟ್ರದ ಅಚ್ಚುಮೆಚ್ಚಿನ ನಾಯಕರೆಲ್ಲರೂ (National Leaders)) ನೋಡುಗರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದರು. ಅಷ್ಟಕ್ಕೂ ಸಂಭ್ರಮದ ಈ ಫಲಪುಷ್ಪ (Flowers Show) ಪ್ರದರ್ಶನ ನಡೆದಿದ್ದು ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ.


  ಹೌದು, ಪ್ರಕೃತಿ ಸೊಬಗಿನ ನಾಡು ಮಡಿಕೇರಿಯ ಪುಷ್ಪೋದ್ಯಾನ ರಾಜಾಸೀಟಿನಲ್ಲಿ ಪುಷ್ಪರಾಣಿಯರೊಂದಿಗೆ ರಾಷ್ಟ್ರ ನಾಯಕರೂ ಆಕರ್ಷಣೆಯ ಕೇಂದ್ರ ಬಿಂದುವಾದರು. ಕಲ್ಲಂಗಡಿ ಹಣ್ಣಿನಲ್ಲೇ ಮೂಡಿಬಂದಿರುವ ಸುಂದರ ಕಲಾಕೃತಿಗಳು ವೀಕ್ಷಕರನ್ನು ಬಹುವಾಗಿ ಆಕರ್ಷಿಸಿದವು.


  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಾಂತಾರ ವಿಶೇಷ
  ಕಲಾವಿದ ಭರತ್ ಎಂಬವರ ಕೈಚಳಕದಲ್ಲಿ ಮೂಡಿಬಂದಿರುವ ಕಲಾಕೃತಿಗಳು ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಕಳೆ ತಂದುಕೊಟ್ಟಿತ್ತು. ಇನ್ನು  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಇತಿಹಾಸ ನಿರ್ಮಿಸಿದ ಕಾಂತಾರ ಸಿನಿಮಾದ ದೈವದ ಪ್ರತಿಕೃತಿ ಎಲ್ಲರ ಚಿತ್ತ ಸೆಳೆಯಿತು.


  ಇದನ್ನೂ ಓದಿ: Madikeri: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಕೇಶ ವಿನ್ಯಾಸದಲ್ಲಿ ಅರಳಿದ ಅಂಬೇಡ್ಕರ್
  ಕ್ಯಾಟರಿಂಗ್ ನಡೆಸುತ್ತಿರುವ ಕಲಾವಿದ!
  ಕ್ಯಾಟರಿಂಗ್ ಉದ್ಯಮ ನಡೆಸುತ್ತಿರುವ ಬೆಂಗಳೂರಿನ ಭರತ್, ಈ ಕಲಾಕೃತಿಗಳ ಕರ್ತೃ. ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿಯಲ್ಲಿ ಇಂಥ ಕಲಾಕೃತಿಗಳನ್ನು ಪ್ರದರ್ಶಿಸುತ್ತಿರುವ ಭರತ್, ರಾಜ್ಯದ ಹಲವೆಡೆ ತಮ್ಮ ವಿಶೇಷ ಕೈಚಳಕದಿಂದ ಜನ ಮನ್ನಣೆ ಗಳಿಸಿದ್ದಾರೆ.


  ಇದನ್ನೂ ಓದಿ: Kodagu: ಮಡಿಕೇರಿಯಲ್ಲಿ ಪುಷ್ಪಲೋಕ! ಹೂಗಳಿಂದ ಮೈದಳೆದ ನಾಲ್ಕುನಾಡು ಅರಮನೆ


  ಒಟ್ಟಿನಲ್ಲಿ ಮಡಿಕೇರಿಯ ರಾಜಾಸೀಟ್​ನಲ್ಲಿ ನಡೆದ ಫಲಪುಷ್ಪ ಪ್ರದರ್ಶನ ರಾಜಾಸೀಟ್​ನ ಸೊಬಗನ್ನ ಇನ್ನಷ್ಟು ಹೆಚ್ಚಿಸಿತ್ತು.


  ವರದಿ: ಸ್ಟಾನ್ಲಿ ಡಿ. ಕೊಡಗು

  Published by:ಗುರುಗಣೇಶ ಡಬ್ಗುಳಿ
  First published: