Gandhi Bhavan Kodagu: ಕೊಡಗಿಗೂ ಮಹಾತ್ಮಾ ಗಾಂಧೀಜಿಗೂ ಇದೆ ಸಂಬಂಧ!

ಗಾಂಧಿ ಭವನ ನಿರ್ಮಿಸಬೇಕೆನ್ನುವ ಕೊಡಗು ಜನತೆಯ ದಶಕಗಳ ಬೇಡಿಕೆ ಸದ್ಯದಲ್ಲಿಯೇ ಈಡೇರಲಿದೆ. ಮುಂದಿನ ಗಾಂಧಿ ಜಯಂತಿ ವೇಳೆಗೆ ಗಾಂಧಿ ಭವನ ಲೋಕಾರ್ಪಣೆಗೊಳ್ಳಲಿದೆ. ಹಾಗಿದ್ರೆ ಹೇಗಿದೆ ಈ ನೂತನ ಗಾಂಧಿ ಭವನ ಅನ್ನೋ ಮಾಹಿತಿ‌ ಇಲ್ಲಿದೆ.

ಕೊಡಗಿಗೂ ಗಾಂಧೀಗೂ ಇದೆ ನಂಟು!

"ಕೊಡಗಿಗೂ ಗಾಂಧೀಗೂ ಇದೆ ನಂಟು!"

  • Share this:
    ಕೊಡಗು: ಎಲ್ಲಿ ನೋಡಿದ್ರಲ್ಲಿ ಗಾಂಧಿ. ಕೈಯ್ಯಲ್ಲಿ ಮಗು ಎತ್ತಿಕೊಂಡು ಮುದ್ದಾಡುತ್ತಿರೋ ಗಾಂಧಿ, ಮಂದಸ್ಮಿತವಾಗಿ ಪುಸ್ತಕ ಓದುತ್ತಿರುವ ಗಾಂಧಿ, ಕೋಲು ಹಿಡಿದು ಮುನ್ನಡೆಸುತ್ತಿರುವ ಗಾಂಧಿ.. ಹೀಗೆ ಎಲ್ಲೆಲ್ಲೂ ಗಾಂಧಿಯನ್ನೇ ಕಾಣುತ್ತಿರುವ ಈ ವಿಶಿಷ್ಟ ಶೈಲಿಯ ಕಟ್ಟಡವು ಕೊಡಗಿನ ನೂತನ ಗಾಂಧಿ ಭವನ ಆಗಿದೆ. ಇನ್ನೇನು ಅಂತಿಮ ಹಂತದಲ್ಲಿರುವ ಗಾಂಧಿ ಭವನದ ಕೆಲಸವು ಭರದಿಂದ ಸಾಗಿದ್ದು, ಕೊಡಗಿಗೂ, ಗಾಂಧೀಜಿಗೂ ಇದ್ದ ಒಡನಾಟವನ್ನು ಮೆಲುಕು ಹಾಕಲು ಈ ಭವನವು ಪ್ರೇರಣೆಯಾಗಲಿದೆ.

    ಕೊಡಗಿನ ಜೊತೆ ಬಾಪೂಜಿ ಅವಿನಾಭಾವ ಸಂಬಂಧ
    ಗಾಂಧಿಜಿಗೂ, ದಕ್ಷಿಣದ ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ ಬಾಪೂಜಿ ಇಲ್ಲಿಗೂ ಆಗಮಿಸಿದ್ರು. ಇಲ್ಲಿನ ಜನರೊಂದಿಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದರು. ಇಂದಿಗೂ ಗಾಂಧೀಜಿಯ ಚಿತಾಭಸ್ಮ ಕೊಡಗಿನಲ್ಲಿರುವುದಕ್ಕೆ ಇದೆಲ್ಲಕ್ಕೂ ಸಾಕ್ಷಿಯಾಗಿದೆ.

    ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ

    ಗಾಂಧಿ ಮೆಚ್ಚಿದ ನಾಡಲ್ಲಿ ಗಾಂಧಿ ಭವನ
    ಕೊಡಗು ಮಹಾತ್ಮ ಗಾಂಧೀಜಿಯ ನೆಚ್ಚಿನ ಸ್ಥಳವಾಗಿತ್ತು ಕೂಡಾ. ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣವಾಗ್ಬೇಕು ಅನ್ನೋದು ಅದೆಷ್ಟೋ ದಶಕಗಳಿಂದ ಕೇಳಿ ಬಂದಿರೊ ಕೂಗು. ಅದರಂತೆ ಮಡಿಕೇರಿಯ ಸುದರ್ಶನ ವೃತ್ತದ ಬಳಿ 80 ಸೆಂಟ್ ಜಾಗ ಗುರುತಿಸಿ, ಕಳೆದೆರಡು ವರ್ಷಗಳಿಂದ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಎಲ್ಲವೂ ಅಂದ್ಕೊಂಡಂತೆ ಆದ್ರೆ ಮುಂದಿನ ಗಾಂಧಿ ಜಯಂತಿಗೆ ಈ ಭವನವು ಲೋಕಾರ್ಪಣೆಗೊಳ್ಳಲಿದೆ.

    gandhi bhavan kodagu
    ಗಾಂಧಿ ಭವನ ನಿರ್ಮಾಣ ಆಗುವುದು ಇಲ್ಲೇ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಹೀಗಿರಲಿದೆ ಗಾಂಧಿ ಭವನ
    ಕೊಡಗು ಜಿಲ್ಲೆಯಲ್ಲಿ ಗಾಂಧೀಜಿ ಹೆಜ್ಜೆಗಳು, ಜಿಲ್ಲೆಯೊಂದಿಗೆ ಗಾಂಧಿ ನಂಟು, ಗಾಂಧೀಜಿ ಸಾಹಿತ್ಯ ಕಲಾ ಪ್ರದರ್ಶನ ಕೊಠಡಿ, ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು, ಗಾಂಧೀಜಿಯ ವಿಚಾರಧಾರೆಗಳನ್ನು ಪ್ರತಿಬಿಂಬಿಸುವ ವಿಷಯಗಳು, ಗ್ರಂಥಾಲಯ, ಚರಕ, ಗಾಂಧೀಜಿ ಪುತ್ಥಳಿಯೊಂದಿಗೆ ಗಾಂಧಿ ಭವನ ತಲೆ ಎತ್ತಲಿದೆ.

    ಇದನ್ನೂ ಓದಿ:Abbi Falls Kodagu: ಅಬ್ಬಬ್ಬಾ 'ಅಬ್ಬಿ'! ಮಿಸ್ ಮಾಡ್ದೇ ಈ ಅದ್ಭುತ ವಿಡಿಯೋ ನೋಡಿ

    ಒಟ್ಟಿನಲ್ಲಿ ರಾಷ್ಟ್ರಪಿತನ ಭವನವು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ವಿಚಾರವೇ ಸರಿ.
    Published by:guruganesh bhat
    First published: