• ಹೋಂ
  • »
  • ನ್ಯೂಸ್
  • »
  • ಕೊಡಗು
  • »
  • Madikeri: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಕೇಶ ವಿನ್ಯಾಸದಲ್ಲಿ ಅರಳಿದ ಅಂಬೇಡ್ಕರ್

Madikeri: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಕೇಶ ವಿನ್ಯಾಸದಲ್ಲಿ ಅರಳಿದ ಅಂಬೇಡ್ಕರ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೇರ್ ಕಟಿಂಗ್ ಶಾಪ್ ಇಟ್ಕೊಂಡಿರೋ ಈ ಯುವಕನ ಪ್ರತಿಭೆ ಇದೀಗ ಭಾರೀ ಪ್ರಚಾರ ಗಿಟ್ಟಿಸಿಕೊಳ್ತಿದೆ

  • Share this:

    ಮಡಿಕೇರಿ: ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಒಂದು ಸಲ ಫೋಟೋ ನೋಡಿದ್ರೆ ಸಾಕು, ಥೇಟ್ ಆ ಚಿತ್ರದಲ್ಲಿರುವಂತೆ ಭಾವಚಿತ್ರವನ್ನ ಮೂಡಿಸ್ತಾರೆ. ಹೌದು, ಮಂಜಿನ ನಗರಿ ಮಡಿಕೇರಿಯಲ್ಲಿ (Madikeri) ವಿನಯ್ ಎಂಬ ಯುವಕ ಸಲೂನ್​​ನಲ್ಲಿ (Hair Cutting Saloon) ಕೆಲಸ ಮಾಡ್ತಿದ್ದಾರೆ. ಈ ಯುವಕನೇ ಸದ್ಯ ಮಡಿಕೇರಿಯಲ್ಲಿ ಸದ್ದು ಮಾಡ್ತಿರೋ ಪ್ರತಿಭೆ!


    ಇವರ ಕೈಗೆ ಕೈಗೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರ ಫೊಟೋ ಕೊಟ್ರೆ ಸಾಕು, ಥೇಟ್ ಆ ಚಿತ್ರದಲ್ಲಿರುವಂತೆ ತಲೆಯ ಹಿಂಭಾಗದಲ್ಲಿ ಆ ಚಿತ್ರ ಮೂಡಿಬರುತ್ತೆ. ಹೇರ್ ಕಟಿಂಗ್ ಶಾಪ್ ಇಟ್ಕೊಂಡಿರೋ ಈ ಯುವಕನ ಪ್ರತಿಭೆ ಇದೀಗ ಭಾರೀ ಪ್ರಚಾರ ಗಿಟ್ಟಿಸಿಕೊಳ್ತಿದೆ.


    ಇದನ್ನೂ ಓದಿ: Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!


    ತಲೆಯಲ್ಲಿ ಮಹಾನಾಯಕ ಡಾ ಬಿ.ಆರ್ ಅಂಬೇಡ್ಕರ್ ಭಾವಚಿತ್ರ!
    ಇತ್ತೀಚಿಗೆ ಮಡಿಕೇರಿ ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಅಪ್ಪಟ್ಟ ದೇಶ ಪ್ರೇಮಿಯಾಗಿರುವ ಸತ್ಯ ಕರ್ಕೆರ ಎಂಬುವವರು ಕೇಶ ವಿನ್ಯಾಸಗಾರ ವಿನಯ್ ಅವರ ಬಳಿ ಹೋಗಿದ್ರು. ಮಹಾನಾಯಕ ಡಾ ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ತೋರಿಸಿ ಅದೇ ರೀತಿಯಲ್ಲಿ ತಲೆಯ ಹಿಂಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರ ಮೂಡಿಸಲು ಹೇಳಿದ್ದರು.




    ಇದನ್ನೂ ಓದಿ: Madikeri: ಕಣಕಣದಲ್ಲೂ ಭಾರತ! ದೇಶಭಕ್ತಿ ಹೆಚ್ಚಿಸುತ್ತೆ ಈ ಮ್ಯೂಸಿಯಂ


    ಅರೆಕ್ಷಣದಲ್ಲಿ ಜಾದೂ!
    ಅರೆಕ್ಷಣದಲ್ಲಿ ಕೇಶ್ ವಿನ್ಯಾಸಕಾರ ವಿನಯ್ ಅವರು ಅಂಬೇಡ್ಕರ್ ಭಾವಚಿತ್ರವನ್ನು ಕೇಶ ವಿನ್ಯಾಸ ಮಾಡಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗ್ತಿದೆ.


    ವರದಿ: ಸ್ಟ್ಯಾನ್ಲಿ ಡಿ. ಕೊಡಗು

    Published by:ಗುರುಗಣೇಶ ಡಬ್ಗುಳಿ
    First published: