Kodagu: ಮಳೆಗಾಲದಲ್ಲೂ ಬೇಗ ಬಟ್ಟೆ ಒಣಗಿಸಿ! ಇದು ಕೊಡವರ ಐಡಿಯಾ!

ಮಳೆಗಾಲದಲ್ಲಿ ಹೊರಗಡೆ ಮಳೆಯಾಗುತ್ತಿದ್ದರೆ ಬಟ್ಟೆ ಒಣಗಿಸುವುದು ಅತೀ ದೊಡ್ಡ ಸವಾಲು. ಕೊಡವರು ಇಂತಹ ಸಂದರ್ಭದಲ್ಲೂ ಬಟ್ಟೆ ಒಣಗಿಸುವುದಕ್ಕಾಗಿ ತಮ್ಮದೇ ಆದ ಟೆಕ್ನಾಲಜಿಯನ್ನು ಕಂಡು ಹಿಡಿದಿದ್ದಾರೆ. ಏನದು? ಹೇಗಿದೆ? ಅನ್ನೋದನ್ನ ಇಲ್ಲಿ ನೋಡಿ...

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:

    ಕೊಡಗು: ಮಳೆಗಾಲದಲ್ಲಿ ಬಟ್ಟೆ ಒಣಗಿಸೋದೆ ದೊಡ್ಡ ಸವಾಲು. ಅದರಲ್ಲೂ ಕೊಡಗಿನಲ್ಲಿ ಸುಮಾರು ಮೂರ್ನಾಲ್ಕು ತಿಂಗಳು ಕಾಲ ಮಳೆಗಾಲ (Karnataka Rains) ಇರೋದ್ರಿಂದ ಸೂರ್ಯನ ದರ್ಶನವಾಗೋದೆ ಇಲ್ಲ. ಆಗಾಗ ಕೆಲವೊಮ್ಮೆ ಮೋಡಗಳ ಸೆರೆಯಿಂದ ನುಸುಳಿ ಬಂದ್ರೂ ಕಣ್ಮುಚ್ಚಿ ಬಿಡುವಷ್ಟರಲ್ಲಿ ಮಾಯವಾಗಿ ಬಿಡ್ತಾನೆ. ಹೀಗಿದ್ದಾಗ ಬಟ್ಟೆ ಒಣಗಿಸೋದು (Clothes Drying In Rainy Season) ಹೇಗೆ ಅನ್ನೋದೆ ಜನರನ್ನು ಕಾಡುವ ಮೊಟ್ಟ ಮೊದಲ ಪ್ರಶ್ನೆ. ಹಾಗಾಗಿಯೇ ಈ ಭಾಗದ ಮಂದಿ ಮಳೆಗಾಲದಲ್ಲಿ ಬಟ್ಟೆ ಒಣಗಿಸಲೆಂದೇ ಟೆಕ್ನಾಲಜಿ ಕಂಡು ಹಿಡಿದಿದ್ದಾರೆ ನೋಡಿ. ಅದ್ಯಾವುದೋ ಮೆಷಿನರಿ ಅಂದ್ಕೋಬೇಡಿ.  ಅದುವೇ ಬಿದಿರಿನ ಭರ್ಜಿ!


    ಭರ್ಜಿ ಬ್ಯುಸಿನೆಸ್
    ಮಳೆಗಾಲ ಬಂತಂದ್ರೆ ಸಾಕು ಕೊಡಗಿನಲ್ಲೆಲ್ಲ ಬಿದಿರಿನ ಭರ್ಜಿಯ ಮೇಲೆ ಬಟ್ಟೆ ಒಣ ಹಾಕೊ ದೃಶ್ಯವೂ ಸಾಮಾನ್ಯವಾಗಿರುತ್ತೆ. ಹೀಗೆ ಬಳಸಲ್ಪಡೊ ಭರ್ಜಿ ಕೊಡಗಿನಲ್ಲೇ ತಯಾರಾಗುತ್ತೆ. ಸುಮಾರು 25ಕ್ಕೂ ಹೆಚ್ಚಿನ ಕುಟುಂಬಗಳು ಈ ಉದ್ಯಮದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.


    ಮಳೆಗಾಲ ಆರಂಭವಾಗ್ತಿದ್ದಂಗೆ ಭರ್ಜಿ ರೆಡಿ
    ಹೌದು, ಮಳೆಗಾಲದಲ್ಲಿ ನಿರಂತರವಾಗಿ ಬಿಟ್ಟು ಬಿಡದೆ ಮಳೆಯಾಗುತ್ತೆ. ಈ ನಡುವೆ ಶಾಲಾ ಮಕ್ಕಳು, ಉದ್ಯೋಗಸ್ಥರು ಸೇರಿದಂತೆ ಮನೆ ಮಂದಿಯ ಒದ್ದೆ ಬಟ್ಟೆಯನ್ನು ಒಣಗಿಸಲು ಇನ್ನಿಲ್ಲದ ಹರಸಾಹಸ ಪಡಬೇಕಾಗುತ್ತೆ. ಅದಕ್ಕಾಗಿ ಮಳೆಗಾಲಕ್ಕೂ ಮುಂಚಿತವಾಗಿಯೇ ಕೊಡಗಿನ ಬಹುತೇಕರು ಅಗೆಸ್ಟಿಕ್ ಮೊರೆ ಹೋಗ್ತಾರೆ. ಬರ್ಜಿ, ಕಲ್ಲಿದ್ದಲು ಸಂಗ್ರಹಿಸಿಟ್ಟುಕೊಂಡು ಮಳೆಗಾಲಕ್ಕೆ ಸಕಲ ತಯಾರಿ ಮಾಡಿಕೊಳ್ತಾರೆ.


    ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ

    ಬಟ್ಟೆ ಒಣಗಿಸೋದು ಹಿಂಗೆ
    ಹಿಂದಿನಿಂದಲೂ ಇದೇ ಉದ್ಯಮದಲ್ಲಿದ್ದವರು ಈಗಲೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ದಿನವೊಂದಕ್ಕೆ ಒಬ್ಬೊಬ್ಬರು ತಲಾ 2-4 ಭರ್ಜಿಗಳನ್ನು ತಯಾರಿಸ್ತಾರೆ. ಬಿದಿರಿನ ಬೆಲೆಯೂ ಹೆಚ್ಚಿರೋದ್ರಿಂದ ಒಂದು ಭರ್ಜಿ 200-300 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.


    ಇದ್ದಿಲು ಡಿಪೋದಿಂದ ಇದ್ದಿಲು, ಅಗೆಸ್ಟಿಕ್ ತಂದು ಇದ್ದಿಲನ್ನು ಅಗೆಸ್ಟಿಕ್ ಬುಟ್ಟಿಯಲ್ಲಿ ತುಂಬಿ ಬೆಂಕಿ ಹಾಕಲಾಗುತ್ತೆ. ಎಣ್ಣೆಯ ಟಿನ್​ನಿಂದ ಅಗೆಸ್ಟಿಕ್ ತಯಾರಿಸೋದ್ರಿಂದ ತಕ್ಷಣವೇ ಕೆಂಪಾಗಿ ಇದ್ದಿಲಿನ ಶಾಖವನ್ನು ಹೊರ ಸೂಸುತ್ತದೆ. ಅದರ ಮೇಲೆ ಬರ್ಜಿಯನ್ನು ಇಟ್ಟು ಬಟ್ಟೆ ಒಣಗಿಸಲಾಗುತ್ತೆ. ಈ ರೀತಿ ಒದ್ದೆ ಬಟ್ಟೆಯನ್ನ ಒಣಗಿಸೋದು ನಿಜಕ್ಕೂ ಸಾಹಸಮಯ ಕಾರ್ಯ.


    ಇದನ್ನೂ ಓದಿ: Kanile: ಅಲಲೆ! ಇದು ಕಣಿಲೆ! ತಿಂದ್ರೆ ದೇಹ ಇರುತ್ತೆ ಬೆಚ್ಚಗೆ; ನೋಡಿ ವಿಡಿಯೋ

    ಕೊಡಗು ಜಿಲ್ಲೆಯೇ ಹಾಗೆ ಮಳೆ ನಡುವೆಯೂ ಬದುಕನ್ನ ಕಲಿತುಕೊಂಡಿದೆ. ಇಲ್ಲಿನ ಜನರು ಕೂಡಾ ಆಯಾಯ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಜೀವನ ನಡೆಸುವುದು ವಿಶೇಷ.


    ವರದಿ: ಸ್ಟ್ಯಾನ್ಲಿ ಡಿ, ಕೊಡಗು
    Published by:guruganesh bhat
    First published: