ಮಡಿಕೇರಿ: ಮಂಜಿನ ನಗರಿ ಮಡಿಕೇರಿ (Madikeri Travel Plan) ಟೂರಿಸ್ಟ್ ಹಾಟ್ಸ್ಪಾಟ್ಗಳಲ್ಲಿ ಮುಂಚೂಣಿಯಲ್ಲಿದೆ. ನಮ್ಮ ದೇಶದ ಮೊದಲ ಪ್ರಧಾನಿ ಇಲ್ಲಿನ ಪ್ರಕೃತಿ ಸೊಬಗನ್ನ ಕಣ್ತುಂಬಿಕೊಂಡ ರಾಜಾಸೀಟ್ಗಿಂತಲೂ (Raja's Seat) ಎತ್ತರವಿರುವ ಪ್ರಕೃತಿಯ ತೊಟ್ಟಿಲಿನಂತಿರೊ ಈ ತಾಣವೇ (Nehru Mantapa) ನೆಹರು ಮಂಟಪ.
ಈ ನೆಹರು ಮಂಟಪವನ್ನು ನವೀಕರಿಸಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗಿದೆ. ಇದೀಗ ತೋಟಗಾರಿಕೆ ಇಲಾಖೆ ನೆಹರು ಮಂಟಪವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಬಗೆಬಗೆಯ ಹೂಗಿಡಗಳನ್ನು ಬೆಳೆಯಲಾಗಿದೆ. ಪ್ರವೇಶ ದ್ವಾರದಿಂದಲೇ ಪ್ರವಾಸಿಗರನ್ನು ಪುಷ್ಪರಾಣಿಯರು ಸ್ವಾಗತಿಸುತ್ತಿದ್ದಾರೆ.
ವಿವಿಧ ಹೂಗಳ ಆಕರ್ಷಣೆ
ಆರಂಭದಲ್ಲೇ ಎರಡೂ ಬದಿಗಳಲ್ಲಿ ಸಾಲ್ವೆ ಹೂಗಳ ರಾಶಿ ಎಲ್ಲರನ್ನ ಆಕರ್ಷಿಸುತ್ತಿದೆ. ಗುಲಾಬಿ, ಡೇಲಿಯಾ, ದಾಸವಾಳ, ಸೇವಂತಿಗೆ, ಮತ್ತಿತರ ಚಿತ್ತಾಕರ್ಷಕ ಹೂಗಳು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರವಾಸಿಗರ ಸುಳಿವೇ ಇಲ್ಲ!
ವೀಕೆಂಡ್ ಆಗಿರೋದ್ರಿಂದ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸ್ತಿದ್ದಾರೆ. ಆದ್ರೆ ಮಾಜಿ ಪ್ರಧಾನಿಯ ಹೆಸರಿರುವ ಪ್ರವಾಸಿ ತಾಣವೊಂದು ರಾಜಾಸೀಟ್ ಪಕ್ಕದಲ್ಲೇ ಇರುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿಯಿಲ್ಲ. ಸರಿಯಾದ ಸೂಚನಾ ಫಲಕಗಳನ್ನೂ ಅಳವಡಿಸದೆ, ಹೆಚ್ಚಿನ ಪ್ರಚಾರ ನೀಡದೆ ಇರೋದ್ರಿಂದ ಪ್ರವಾಸಿಗರಿಂದ ದೂರವಾಗಿಯೇ ಉಳಿದಿದೆ. ಸ್ಥಳೀಯರೇ ಕೆಲವರು ಆಗಾಗ ಬಂದು ಹೋಗ್ತಾರೆ. ಆದರೆ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ.
ಇದನ್ನೂ ಓದಿ: Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ
ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇನ್ನು ತೋಟಗಾರಿಕಾ ಇಲಾಖೆ ವತಿಯಿಂದ ನೆಹರು ಮಂಟಪದ ಪ್ರತಿ ನಿತ್ಯದ ಕೆಲಸಕಾರ್ಯಗಳಿಗಾಗಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಹೂಗಳ ನಿರ್ವಹಣೆ ಮತ್ತು ನೆಹರು ಮಂಟಪದ ಸುರಕ್ಷತೆಯ ಜವಾಬ್ದಾರಿ ಹೊತ್ತಿದ್ದಾರೆ. ಮಂಟಪದ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯಾಚರಿಸುತ್ತೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ನೆಹರು ಮಂಟಪ ಪ್ರವಾಸಿಗರ ಕಣ್ಣಿಗೆ ಬೀಳದೇ ಇರೋದು ದುರದೃಷ್ಟ.
ಇದನ್ನೂ ಓದಿ: Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!
ಒಟ್ನಲ್ಲಿ ನೆಹರು ಮಂಟಪಕ್ಕೆ ಒಳ್ಳೆಯ ಪ್ರಚಾರ ಸಿಕ್ಕಿದ್ರೆ, ಇದು ಕೂಡ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ಆಗೋದ್ರಲ್ಲಿ ಸಂಶಯನೇ ಇಲ್ಲ.
ವರದಿ: ಸ್ಟ್ಯಾನ್ಲಿ .ಡಿ ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ