• Home
  • »
  • News
  • »
  • kodagu
  • »
  • Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!

Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೊಡಗಿನ ವೈನ್ ಟೇಸ್ಟ್ ಇನ್ನೆಲ್ಲೂ ಸಿಗಲ್ಲ. ಅಷ್ಟೊಂದು ಡಿಫ್ರೆಂಟ್ ಆಗಿ, ಪ್ಯೂರ್ ಆಗಿರುತ್ತೆ ಕೂರ್ಗ್ ಹೋಮ್ ಮೇಡ್ ವೈನ್. ಗುಲಾಬಿ ಹೂವು, ಗಾಂಧಾರಿ ಮೆಣಸು, ವಿವಿಧ ಬಗೆಯ ಹಣ್ಣುಗಳು, ವೀಳ್ಯದೆಲೆ, ಶುಂಠಿ, ಭತ್ತ ಹೀಗೆ ಕೊಡಗಿನಲ್ಲೇ ಬೆಳೆದ ಉತ್ಪನ್ನಗಳಿಂದ ವೈನ್ ತಯಾರಿಸಲಾಗುತ್ತೆ.

  • Share this:

    ಕೊಡಗು: ಕೂರ್ಗ್ ಅಂದ್ರೆ ಥಟ್ಟನೆ ನೆನಪಾಗೋದು ಇಲ್ಲಿನ ಚಿಲ್ಡ್ ವೆದರ್. ತಂಪಾದ ಗಾಳಿ, ಮೈಕೊAll Postsರೆಯುವ ಚಳಿ ಪ್ರವಾಸಿಗರಿಗೆ ಒಂಥರಾ ಮಜಾ ಕೊಡುತ್ತೆ. ಇದೇ ಕಾರಣಕ್ಕೆ ಅನ್ಸುತ್ತೆ ಕೊಡಗನ್ನ(Kodagu News)  ಮದ್ಯಪ್ರಿಯರ ನಾಡು ಅಂತಲೂ ಕರೀತಾರೆ. ದಕ್ಷಿಣ ಕಾಶ್ಮೀರ ಎಂದೇ ಖ್ಯಾತಿ ಪಡೆದ ನಾಡಲ್ಲಿ ಹೋಮ್ ಮೇಡ್ ವೈನ್​ಗೆ (Home Made Wine) ಭಾರೀ ಡಿಮ್ಯಾಂಡ್ ಇದೆ. ಇಲ್ಲಿಯಂತೆ ಕಿಕ್ ಕೊಡೊ ವೈನ್ ಇನ್ನೆಲ್ಲೂ ಸಿಗೋಕೆ ಚಾನ್ಸೇ ಇಲ್ಲ. ಕೊಡಗಿನ (Kodagu Homemade Wine)ಬಹುತೇಕರ ಜೀವನಾಧಾರ ವೈನ್ ಬ್ಯುಸಿನೆಸ್ (Homemade Wine Business) ಅಂದ್ರೆ ತಪ್ಪಾಗಲ್ಲ. ಹಾಗಾದ್ರೆ ಇಲ್ಲಿನ ವೈನ್ ನಲ್ಲಿ ಅದೇನ್ ಸ್ಪೆಷಾಲಿಟಿ ಇದೆ ಅನ್ನೋದನ್ನ ನಾವ್ ತೋರಿಸ್ತೀವಿ.


    ಕೊಡಗಿಗೆ ಆಗಮಿಸುವ ಟೂರಿಸ್ಟ್ ಇಲ್ಲಿನ ಬ್ಯೂಟಿಫುಲ್ ನೇಚರ್ ಕಣ್ತುಂಬಿಕೊಳ್ಳೋದು ಅಷ್ಟೇ ಅಲ್ಲ, ಹೋಮ್ ಮೇಡ್ ವೈನ್​ನತ್ತಲೂ ಅಟ್ರಾಕ್ಟ್ ಆಗ್ತಾರೆ. ಕೊಡಗಿನ ವೈನ್ ಟೇಸ್ಟ್ ಇನ್ನೆಲ್ಲೂ ಸಿಗಲ್ಲ. ಅಷ್ಟೊಂದು ಡಿಫ್ರೆಂಟ್ ಆಗಿ, ಪ್ಯೂರ್ ಆಗಿರುತ್ತೆ ಕೂರ್ಗ್ ಹೋಮ್ ಮೇಡ್ ವೈನ್.


    ಈ ಉತ್ಪನ್ನಗಳಿಂದ ವೈನ್ ತಯಾರಿ!
    ಗುಲಾಬಿ ಹೂವು, ಗಾಂಧಾರಿ ಮೆಣಸು, ವಿವಿಧ ಬಗೆಯ ಹಣ್ಣುಗಳು, ವೀಳ್ಯದೆಲೆ, ಶುಂಠಿ, ಭತ್ತ ಹೀಗೆ ಕೊಡಗಿನಲ್ಲೇ ಬೆಳೆದ ಉತ್ಪನ್ನಗಳಿಂದ ವೈನ್ ತಯಾರಿಸಲಾಗುತ್ತೆ. ಸುಮಾರು 200 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತೆ.




    ವೈನ್ ತಯಾರಿಕೆಯೇ ಹಲವರ ಉದ್ಯೋಗ
    ಕೊಡಗಿನ ಬಹುತೇಕರು ಇಂದಿಗೂ ಸ್ವ ಉದ್ಯೋಗದ ಮೂಲಕ ಹೋಂ ಮೇಡ್ ವೈನ್ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದಾಯ ಗಳಿಸುತ್ತಿದ್ದಾರೆ. ಸ್ಪೈಸಸ್ ಅಂಗಡಿಗಳಲ್ಲಿ ಕೂರ್ಗ್ ಹೋಂ ಮೇಡ್ ವೈನ್ ಮಾರಾಟ ಮಾಡಲಾಗುತ್ತದೆ.


    ಇದನ್ನೂ ಓದಿ: Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ


    ಕೊಡಗಿನ ವೈನ್​ಗೆ ಉತ್ತಮ ಬೇಡಿಕೆಯಿದ್ದು, ಪ್ರವಾಸಿಗರು ಹೆಚ್ಚು ಕೊಂಡುಕೊಳ್ತಾರೆ. ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ವಿವಿಧ ಬಗೆಯ ಹಣ್ಣಿನಿಂದ ನೈಸರ್ಗಿಕವಾಗಿ ಹೋಂ ಮೇಡ್ ವೈನ್ ತಯಾರಿಸಲಾಗುತ್ತದೆ. ಸುಮಾರು ಅದರಲ್ಲಿ ಒಂದು ತಿಂಗಳ ಪ್ರಾಸೆಸ್ ಬಳಿಕ ಕೊಡಗಿನ ಶುದ್ದ ಹೋಮ್ ಮೇಡ್ ವೈನ್ ತಯಾರಾಗುತ್ತೆ.


    ದುಪ್ಪಟ್ಟು ಬೆಲೆಗೆ ವೈನ್ ಮಾರಾಟ
    ಆಹಾರ ಇಲಾಖೆಯಿಂದ ಪರವಾನಗಿ ಪಡೆದುಕೊಂಡು ಜಿಲ್ಲೆಯಲ್ಲಿ ವೈನ್ ಉದ್ಯಮವನ್ನು ನಡೆಸಲಾಗ್ತಿದೆ. ವೈನ್ ಕೂಡ ಮದ್ಯದ ಸಾಲಿಗೆ ಸೇರೋದ್ರಿಂದ ಕೊರೊನಾ ಲಾಕ್ ಡೌನ್ ಸಂದರ್ಭ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆ ವೇಳೆ ಹಲವರು ವೈನ್ ತಯಾರಿಕೆಯನ್ನೇ ನಿಲ್ಲಿಸಿ ಬಿಟ್ಟಿದ್ರೆ, ಬಹುತೇಕರು ಸಿಕ್ಕಿದ್ದೇ ಚಾನ್ಸ್ ಎಂಬಂತೆ ದುಪ್ಪಟ್ಟು ಬೆಲೆಗೆ ವೈನ್ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸಿಕೊಂಡಿದ್ರು.


    ಇದನ್ನೂ ಓದಿ: Pandi Curry: ಕೊಡಗಿನಲ್ಲೇ ವರ್ಲ್ಡ್​ ಫೇಮಸ್ ಈ ಪಂದಿಕರಿ ಹೊಟೇಲ್!


    ನಕಲಿ ವೈನ್​ಗಳ ಬಗ್ಗೆ ಇರಲಿ ಎಚ್ಚರ
    ಇನ್ನು ಕೂರ್ಗ್ ವೈನ್ ಹೆಸರಿನಲ್ಲಿ ಹೊರ ಜಿಲ್ಲೆ, ರಾಜ್ಯಗಳಲ್ಲಿ ನಕಲಿ ವೈನ್ ಮಾರಾಟವಾಗ್ತಿರುವ ಬಗ್ಗೆಯೂ ಸಾಕಷ್ಟು ಆರೋಪಗಳು ಕೇಳಿ ಬರ್ತಿದೆ. ಕೃತ್ಯದಲ್ಲಿ ತೊಡಗಿದ್ದ ಹಲವರು ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದ ಉದಾಹರಣೆಗಳೂ ಇವೆ. ಪ್ರವಾಸಿಗರು ವೈನ್ ಖರೀದಿ ಸಂದರ್ಭ ಎಚ್ಚರ ವಹಿಸುವುದು ಒಳಿತು.


    ವರದಿ: ಸ್ಟ್ಯಾನ್ಲಿ . ಡಿ, ಕೊಡಗು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು