Dubare Elephant Camp: ಇದು ಆನೆಗಳ ಲೋಕ! ದುಬಾರೆಯಲ್ಲಿ ಗಜಪಡೆಗಳ ಜೀವನ ಹೇಗಿರುತ್ತೆ?

ಮೈಸೂರು ದಸರಾದಲ್ಲಿ ಭೇಷ್ ಎನಿಸಿಕೊಳ್ಳೋ ಗಜರಾಜನ ನಿತ್ಯ ಜೀವನ ಹೇಗಿರುತ್ತೆ ಅನ್ನೋ ಕುತೂಹಲ ಸಹಜ ಅಲ್ವೇ? ಗಜರಾಜನ ಸ್ಟೈಲು, ಕಾರುಬಾರು ಹೇಗಿರುತ್ತೆ ಅಂತ ನೀವೇ ನೋಡಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಕೊಡಗು: ಮೈಸೂರು ದಸರಾದಲ್ಲಿ (Mysuru Dasara) ಅಂಬಾರಿ ಹೊತ್ತು ಬೇಷ್ ಎನಿಸಿಕೊಳ್ಳೋ ಆನೆಗಳು ಎಲ್ಲಿರೋದು ಗೊತ್ತಾ? ದಸರಾ ಜಂಬೂ ಸವಾರಿಯಲ್ಲಿ ರಾಜ ಮರ್ಯಾದೆ ಪಡೆಯೋ ಈ ಗಜಪಡೆಗಳ ಬೀಡು ಹೇಗಿದೆ? ಅದರ ದಿನನಿತ್ಯದ ಚಟುವಟಿಕೆಗಳು ಹೇಗಿವೆ ಅನ್ನೋದನ್ನ ಡೀಟೆಲ್ ಆಗಿ ಹೇಳ್ತೀವಿ ನೋಡಿ. ದಾಪುಗಾಲಿಡುತ್ತಾ ಸಾಗುತ್ತಿರುವ ಬೃಹತ್ ಗಾತ್ರದ ಆನೆಗಳು, ಮಾವುತರ ಮಾತಿಗೆ ತಲೆಯಾಡಿಸುವ ಗಜಪಡೆಗಳು, ಕುಣಿದು ಕುಪ್ಪಳಿಸುತ್ತಿರುವ ಪುಟಾಣಿ ಮಕ್ಕಳು.. ಇಂತಹ ಸುಂದರ ದೃಶ್ಯ ಕಂಡು ಬಂದಿದ್ದು ಕೊಡಗಿನ ದುಬಾರೆ (Kodagu Dubare Elephant Camp) ಸಾಕಾನೆ ಶಿಬಿರದಲ್ಲಿ.

    ದುಬಾರೆಯ ದೃಶ್ಯ


    ಜಂಬೂ ಸವಾರಿಯ ಗಜಪಡೆ
    ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ವಿಶ್ವವಿಖ್ಯಾತ ಮೈಸೂರು ದಸರಾಗೆ ಆನೆಗಳನ್ನು ಕರೆದೊಯ್ಯಲಾಗುತ್ತೆ. ಪ್ರತಿವರ್ಷ ಜಂಬೂ ಸವಾರಿಯಲ್ಲಿ ಕೊಡಗಿನ ಆನೆಗಳು ಪಾಲ್ಗೊಂಡು ಗಮನ ಸೆಳೆಯುವುದಲ್ಲದೆ, ಎಲ್ಲರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತೆ. ಜನ ವಲಯದಲ್ಲಿ ಆನೆಗಳ ಸೈಲೆಂಟ್ ವರ್ತನೆಗೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತೆ. ಗಜಪಡೆಗಳಿಗೆ ಕೊಡಗಿನಲ್ಲಿ ಸಾಕಷ್ಟು ಟ್ರೈನಿಂಗ್ ನೀಡುವ ಕೆಲಸವನ್ನು ಮಾವುತರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

    ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ

    ವೀಕ್ಷಣೆ ಸಮಯ ಹೀಗಿದೆ
    ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ಪಳಗಿಸಲಾಗುತ್ತೆ. ಸದ್ಯ ಶಿಬಿರದಲ್ಲಿ 31 ಆನೆಗಳಿದ್ದು, ಪ್ರವಾಸಿಗರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ಬೆಳಗ್ಗೆ 9 ರಿಂದ 11 ಗಂಟೆ ಮತ್ತು ಸಂಜೆ 4.30 ರಿಂದ 5.30 ಗಂಟೆಯವರೆಗೆ ಆನೆಗಳ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ.

    ಆನೆಗಳಿಗೆ ಸ್ನಾನ!


    ಗಜರಾಜನ ಆಹಾರ ಕ್ರಮ
    ಆನೆಗಳಿಗೆ ಬೆಳಗ್ಗಿನ ಆಹಾರವಾದ ರಾಗಿ ಮುದ್ದೆ, ಭತ್ತ, ಹುಲ್ಲು ನೀಡಿ ಪಕ್ಕದ ಆನೆ ಕಾಡಿಗೆ ಸಾಗಿಸಲಾಗುತ್ತೆ. ಅಲ್ಲಿ ಹುಲ್ಲು ಸೇವಿಸುವ ಆನೆಗಳು, ಸಂಜೆ ವೇಳೆಗೆ ಮತ್ತೆ ಕ್ಯಾಂಪ್ ಸೇರಿಕೊಳ್ಳುತ್ತವೆ. ಪ್ರವಾಸಿಗರ ವೀಕ್ಷಣೆ ಬಳಿಕ ಪುನಃ ಕಾಡಿಗೆ ತೆರಳುವ ಆನೆಗಳನ್ನು ಮರುದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಆನೆ ಕ್ಯಾಂಪ್​ಗೆ ಕರೆತರಲಾಗುತ್ತೆ.

    ಇದನ್ನೂ ಓದಿ: Budga Jangama Community: ಊರೂರು ಅಲೆದಾಡುವ ಬುಡ್ಗ ಜಂಗಮರ ಕಥೆ ಕೇಳಿ!

    Dubare Elephant Camp
    ದುಬಾರೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಸಾಕಾನೆ ಶಿಬಿರಕ್ಕೆ ಹೀಗೆ ತಲುಪಿ
    ಕಾವೇರಿ ನದಿ ದಾಟಿಕೊಂಡೆ ಸಾಕಾನೆ ಶಿಬಿರಕ್ಕೆ ತೆರಳಬೇಕಾಗುತ್ತದೆ. ಮಳೆಗಾಲದ ಸಂದರ್ಭ ಬೋಟ್ ವ್ಯವಸ್ಥೆ ಇರಲಿದ್ದು, ಸುಲಭವಾಗಿ ನದಿ ದಾಟಬಹುದು. ಆದ್ರೆ ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರೋದ್ರಿಂದ ನೀರಿನಲ್ಲಿ ನಡೆದುಕೊಂಡೇ ಹೋಗಬೇಕಾಗುತ್ತದೆ. ದುಬಾರೆ ಸಾಕಾನೆ ಶಿಬಿರದಲ್ಲಿ ವೀಕೆಂಡ್​ನಲ್ಲಂತೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸ್ತಾರೆ. ಸಾಲಿನಲ್ಲಿ ನಿಂತು ಆನೆಗಳನ್ನು ನೋಡಿ ಅದರೊಂದಿಗೆ ಫೊಟೊ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಾರೆ. ಹೀಗೆ ದುಬಾರೆ ಸಾಕಾನೆ ಶಿಬಿರದಲ್ಲೂ ಗಜರಾಜ ರಾಜ ಮರ್ಯಾದೆಯಿಂದಲೇ ಜೀವನ ನಡೆಸ್ತಾನೆ.
    Published by:guruganesh bhat
    First published: