• Home
  • »
  • News
  • »
  • kodagu
  • »
  • Kaveri: ಕಾವೇರಿ ಕೊಡಗಿನಲ್ಲೇ ಹುಟ್ಟಿದ್ದೇಗೆ? ಇಲ್ಲಿದೆ ಆ ಕುತೂಹಲದ ಕಥೆ!

Kaveri: ಕಾವೇರಿ ಕೊಡಗಿನಲ್ಲೇ ಹುಟ್ಟಿದ್ದೇಗೆ? ಇಲ್ಲಿದೆ ಆ ಕುತೂಹಲದ ಕಥೆ!

ಕಾವೇರಿ ಕಥೆ

"ಕಾವೇರಿ ಕಥೆ"

ಕಾವೇರಿ ಇಲ್ಲೇ ಹೀಗೆ ಉದ್ಭವವಾಗೋದು ಹೇಗೆ ಅಂತ ಹುಡುಕುತ್ತ ಹೊರಟರೆ ಪುರಾಣಲೋಕ ಪ್ರವೇಶಿಸುತ್ತೇವೆ!

  • Share this:

    ಕೊಡಗು: ಚುಮುಚುಮು ಚಳಿ, ತೆಳುವಾದ ಮಂಜು. ಸಾಂಪ್ರದಾಯಿಕ ದಿರಿಸು ಧರಿಸಿ ಕೈಮುಗಿಯುತ್ತಿರೋ ಜನರು. ಆ ತಾಯಿ ಕಾವೇರಿ ಉಗಮವಾಗೋ ಅಮೃತ ಕ್ಷಣಕ್ಕೆ ಸಾಕ್ಷಿಯಾಗೋ ಹಂಬಲ, ಕಾತುರ. ಜೀವನದಿ ಕಾವೇರಿಯ (Kaveri River) ತೀರ್ಥೋದ್ಭವವಾದಂತೆ ಮೊಳಗಿದ ಜಯಘೋಷ. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ(Talakaveri) ನಿನ್ನೆ (ಅಕ್ಟೋಬರ್ 17) ಸಂಜೆ 7 ಗಂಟೆ 21 ನಿಮಿಷಕ್ಕೆ ಸರಿಯಾಗಿ ಮೇಷಲಗ್ನದಲ್ಲಿ ತೀರ್ಥೋದ್ಭವವಾಯಿತು.

    ತಾಯಿ ಕಾವೇರಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನಭಾಗ್ಯ ಕರುಣಿಸಿದಳು.


    ಕಾವೇರಿ ಕೊಡಗಿನಲ್ಲೇ ಉದ್ಭವ ಆದ ಹಿಂದೆ ಇದೆ ರೋಚಕ ಕಥೆ!
    ಕಾವೇರಿ ಇಲ್ಲೇ ಹೀಗೆ ಉದ್ಭವವಾಗೋದು ಹೇಗೆ ಅಂತ ಹುಡುಕುತ್ತ ಹೊರಟರೆ ಪುರಾಣಲೋಕ ಪ್ರವೇಶಿಸುತ್ತೇವೆ! ಕವೇರ ಎಂಬ ಮುನಿಗೆ ಸಂತಾನವಿರುವುದಿಲ್ಲ. ಬ್ರಹ್ಮದೇವ ತನ್ನ ಮಾನಸಪುತ್ರಿ ಲೋಪಮುದ್ರೆಯನ್ನೇ ಕವೇರ ಮುನಿಗೆ ನೀಡುತ್ತಾನೆ. ಮುಂದೆ ಅಗಸ್ತ್ಯ ಮುನಿ ತನ್ನನ್ನು ಮದುವೆಯಾಗೆಂದು ಕಾವೇರಿಯಲ್ಲಿ ಕೇಳುತ್ತಾರೆ. ತನ್ನನ್ನು ಎಂದಿಗೂ ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿ ಕಾವೇರಿಯೂ ಒಪ್ಪುತ್ತಾಳೆ.


    ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


    ಕಾವೇರಿಯಾಗಿ ಹರಿದ ಕವೇರಿ!
    ಆದರೆ ಅಗಸ್ತ್ಯ ಷರತ್ತು ಮೀರಿದಾಗ ಕವೇರಿ ಕಾವೇರಿಯಾಗಿ ಹರಿಯುತ್ತಾಳೆ. ಪರಿಪರಿಯಾಗಿ ಬೇಡಿಕೊಂಡ ಅಗಸ್ತ್ಯ ಮುನಿಗಾಗಿ ಬ್ರಹ್ಮಗಿರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಹೀಗೆ ಕವೇರಿಯೇ ಕಾವೇರಿಯಾಗಿ ಜನಜೀವನ ಪಾವನಗೊಳಿಸುತ್ತಾಳೆ ಎಂಬ ಐತಿಹ್ಯವಿದೆ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ಇಷ್ಟೆಲ್ಲ ಪ್ರತೀತಿಯಿರೋ ಕಾವೇರಿ ತೀರ್ಥೋದ್ಭವದ ದರ್ಶನ ಪಡೆದು ಭಕ್ತರು ಪುನೀತರಾದರು. ಜೀವನದಿಯ ತೀರ್ಥ ಚಿಮುಕಿಸಿಕೊಂಡು ಪುಳಕಿತರಾದರು.

    Published by:ಗುರುಗಣೇಶ ಡಬ್ಗುಳಿ
    First published: