ಮಡಿಕೇರಿ: ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ! ಹಾಲ್ನೊರೆಯಂತೆ ಉಕ್ಕಿ ಹರಿಯಿತು ಭವ್ಯ ಭಾರತದ ವೈವಿಧ್ಯತೆ. ಜನಮಾನಸದ ಸಂಸ್ಕೃತಿಯನ್ನು (Indian Culture) ಬಿಂಬಿಸುವ ಚಿತ್ತಾರ ಅಲ್ಲಿ ಮನೆ ಮಾಡಿತ್ತು. ಥೇಟ್ ಹಳ್ಳಿಯ ಮನೆಯಲ್ಲಿ ಚಿಣ್ಣರೆಲ್ಲ ಸೇರಿ ಸಡಗರದ ಸಂಕ್ರಾಂತಿ (Makara Sankranti) ಆಚರಿಸಿದರು.
ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಮುಳ್ಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಂಕ್ರಾಂತಿ ಹಬ್ಬವನ್ನು ವೈಭವವಾಗಿ ಆಚರಿಸಿದರು.
ಇದನ್ನೂ ಓದಿ: Kodagu Homemade Wine: ಕೊಡಗು ಹೋಮ್ ಮೇಡ್ ವೈನ್ ರುಚಿಯ ರಹಸ್ಯ!
ಹಳ್ಳಿ ವಾತಾವರಣದ ನಿರ್ಮಾಣ
ಹಳ್ಳಿ ವಾತಾವರಣದ ಗುಡಿಸಲು, ಎತ್ತಿನಗಾಡಿ, ಭತ್ತದ ಕಣಜ, ಕೋಳಿ, ಹಸು ಇತ್ಯಾದಿ ಚಿತ್ರಣ ಅಲ್ಲಿತ್ತು. ಮಕ್ಕಳು ಅಕ್ಷರಶ: ಹಳ್ಳಿ ರೈತರಾಗಿ ಸಂಕ್ರಾಂತಿಯ ಸವಿ ಸವಿದರು. ಮುಖ್ಯ ಶಿಕ್ಷಕ ಸಿ.ಎಸ್ ಸತೀಶ್ ಮತ್ತು ಶಿಕ್ಷಕಿ ನವ್ಯ ಎಮ್ ಆರ್ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಇದನ್ನೂ ಓದಿ: Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ
ಜನಾಂಗೀಯ ದಿನದ ಆಚರಣೆ
ಸಂಕ್ರಾಂತಿ ಆಚರಣೆಯ ಜೊತೆಜೊತೆಗೆ ಜನಾಂಗೀಯ ದಿನವನ್ನೂ ಆಚರಿಸಲಾಯಿತು. ಹಾಲುಕ್ಕಿಸಿ, ಪೊಂಗಲ್ ಸಿಹಿಯೂಟ ತಯಾರಿಸಿ, ಸೇವಿಸುವ ಮೂಲಕ ವಿದ್ಯಾರ್ಥಿಗಳು ಸಂಭ್ರಮವನ್ನು ಹಂಚಿಕೊಂಡರು.
ವರದಿ: ಸ್ಟ್ಯಾನ್ಲಿ. ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ