Kalaburagi: ದೇವರ ಫೋಟೋಗಳಿಗೆ ವಿಶಿಷ್ಟ ಮುಕ್ತಿ, ಕಣ ಕಣದಲ್ಲೂ ಶಿವ ಎನ್ನುತ್ತಿರುವ ಯುವಕರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದೇವರ ಫೋಟೋಗಳು ಕೂಡಾ ಪರಿಸರಕ್ಕೆ ಹಾನಿಕಾರಕ ಅನ್ನೋದನ್ನ ಕಂಡುಕೊಂಡ ಯುವಕರು, ಅದಕ್ಕಾಗಿ ಉತ್ತಮ ಯೋಜನೆ ಮಾಡಿದ್ದಾರೆ.

 • Share this:

  ಕಲಬುರಗಿ: ರಾಶಿ ರಾಶಿ ಬಿದ್ದಿರೋ ದೇವರ ಫೋಟೋಗಳು. ಯಾವೊಂದಕ್ಕೂ ಫ್ರೇಮು ಇಲ್ಲ, ಪೂಜಿಸೋ ಭಕ್ತರೂ ಇಲ್ಲ.  ನದಿಯೋ, ಮರದ ಬುಡ ಸೇರಿದ್ದ ಈ ಫೋಟೋಗಳನ್ನ ಮತ್ತೆ ಸರ್ಜರಿ ಮಾಡಲಾಗಿದೆ. ಹೊಂಡ ತೆಗೆದು ಹೂಳಲಾಗ್ತಿದೆ. ಅರೆ! ಇದೇನಿದು ಶಾಂತಂ ಪಾಪಂ ಅಂತೀರಾ? ಹಾಗೇನಿಲ್ಲ, ಈ ಸ್ಟೋರಿ ನೋಡಿದ್ರೆ ನೀವೇ ಹ್ಯಾಟ್ಸಾಪ್ ಅಂತೀರ?


  ಒಂದು ಕಡೆ ರಾಶಿ ಹಾಕಿರೋ ದೇವರ ಫೋಟೋಗಳು, ಇನ್ನೊಂದೆಡೆ ಹೊಂಡ ತೆಗೆದು ಗಿಡ ನೆಡುತ್ತಿರೋ ಯುವಕರು ಈ ದೃಶ್ಯ ಕಂಡು ಬರುತ್ತಿರೋದು ಕಲಬುರಗಿ ಜಿಲ್ಲೆಯಲ್ಲಿ. ಇಲ್ಲಿನ ಅಫಜಲಪುರ ತಾಲೂಕಿನ ಯುವ ಬ್ರಿಗೇಡ್ ಕಾರ್ಯಕರ್ತರು, ಇಲ್ಲಿನ ಪ್ರಸಿದ್ದ ದೇವಸ್ಥಾನಗಳ ಬಳಿ ಜನರು ಬಿಸಾಡಿ ಹೋದ ದೇವರ ಪಟಗಳ‌ನ್ನು ಸಂಗ್ರಹಿಸುವ ಭಕ್ತಿ ಮೆರೆಯುತ್ತಿದ್ದಾರೆ.
  ಕಣ ಕಣದಲ್ಲೂ ಶಿವ!
  ಅಫಜಲಪುರ ತಾಲೂಕಿನ ಯುವ ಬ್ರಿಗೇಡ್ ಕಾರ್ಯಕರ್ತರು "ಕಣ ಕಣದಲ್ಲೂ ಶಿವ" ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಯುವಕರು ಈಗಾಗಲೇ ಅಫಜಲಪುರ ಪ್ರಸಿದ್ದ ಘತ್ತರಗಿಯ ಭಾಗ್ಯವಂತಿ ದೇವಿ ದೇವಸ್ಥಾನದ ಭೀಮಾನದಲ್ಲಿ ಎಸೆದಿರುವ ದೇವರ ಪೋಟೋಗಳನ್ನು ಸಂಗ್ರಹ ಮಾಡಿದ್ದು, ಅದಕ್ಕೆ ಸೂಕ್ತ ರೀತಿಯಲ್ಲಿ ಮುಕ್ತಿ ಕಲ್ಪಿಸೋ ವ್ಯವಸ್ಥೆ ಮಾಡಿದ್ದಾರೆ.


  ಇದನ್ನೂ ಓದಿ: Kalaburagi: ಸಿಕ್ಸರ್‌, ಬೌಂಡರಿ ಬಾರಿಸಿ ಮಿಂಚಿದ ಮಹಿಳೆಯರು, ರೋಚಕ ಮ್ಯಾಚ್ ನೀವೂ ನೋಡಿ


  ಫೋಟೋಗಳಲ್ಲಿ ಅರಳುತ್ತೆ ಹೂವು!
  ಹೀಗಂತ ಸಂಗ್ರಹಿಸಿದ ಫೋಟೋಗಳನ್ನ ಎಲ್ಲೋ ಕೊಂಡೊಯ್ದು ತ್ಯಾಜ್ಯ ಗುಂಡಿಗೆ ಹಾಕಲ್ಲ. ಬದಲಿಗೆ ದೇವರ ಫೋಟೋ ಫ್ರೇಮ್​ನ ಅಂಚು, ಗಾಜುಗಳನ್ನು ಬೇರ್ಪಡಿಸಿ, ದೇವರ ಚಿತ್ರಗಳನ್ನು ಮಣ್ಣಿಗೆ ಸೇರಿಸಿ, ಅದರ ಮೇಲೆ ಗಿಡ ನೆಟ್ಟು ಪೋಷಣೆ ಮಾಡುವ ಕಾಯಕವನ್ನು ಕೈಗೆತ್ತಿಕೊಂಡಿದ್ದಾರೆ.
  ಹೀಗೆ ಭೀಮಾ ನದಿಯ ದಡದಲ್ಲಿ ಬಿಸಾಡಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ದೇವರ ಫೋಟೋಗಳನ್ನು ಸಂಗ್ರಹಿಸಿ, ಅವುಗಳನ್ನು ಮಣ್ಣಿನಲ್ಲಿ ಹೂತು ಅದರ ಮೇಲೆ ಗಿಡ ನೆಡಲಾಗಿದೆ.


  ಇದನ್ನೂ ಓದಿ: Kalaburagi: ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ, ಜಾತಿ-ಧರ್ಮದ ಹಂಗಿಲ್ಲದೇ ಅನಾಥ ಶವಗಳಿಗೆ ಮುಕ್ತಿ ಕೊಡುವ ಯುವಕರು!


  ಮಾದರಿ ಕಾರ್ಯ
  ಒಟ್ಟಿನಲ್ಲಿ ಯುವ ಬ್ರೀಗೆಡ್ ಯುವಕರ ಈ ನಿಸ್ವಾರ್ಥ ಸೇವೆಯಿಂದ ದೇವರಿಗೂ ಗೌರವ ಹೆಚ್ಚಾಗುವಂತೆ ಆಗಿದೆ. ಜೊತೆಗೆ ಕಸ ಕಡ್ಡಿಗಳ ನಡುವೆ ಇನ್ನಷ್ಟು ಕೊಂಪೆಯಾಗುತ್ತಿದ್ದ ದೇವರ ಫೋಟೋಗಳ ಮೇಲೆ ಹಚ್ಚಹಸಿರ ಗಿಡಗಳು ಬೆಳೆಯಲು ಕಾರಣವಾಗ್ತಿರೋದಕ್ಕೆ, ಈ ಯುವಕರಿಗೆ ಹ್ಯಾಟ್ಸಾಪ್ ಎನ್ನಲೇಬೇಕು.


  ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: