• Home
 • »
 • News
 • »
 • kalburgi
 • »
 • Kalaburagi: ಸಂಭ್ರಮ ಅಂದ್ರೆ ಇದು! ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳ ಖುಷಿ ನೋಡಿ

Kalaburagi: ಸಂಭ್ರಮ ಅಂದ್ರೆ ಇದು! ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳ ಖುಷಿ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಡೊಳ್ಳಿನ ಸದ್ದಿಗೆ ಯುವಕ, ಯುವತಿಯರೆನ್ನದೇ ಜೋಷ್​ನೊಂದಿಗೆ ಮೈ ಚಳಿ ಬಿಟ್ಟು ಕುಣಿದು ಸಂಭ್ರಮಿಸಿದರು. ಸುಮಾರು ಒಂದೂವರೆ ಗಂಟೆ ನಡೆದ ಅದ್ಧೂರಿ ಮೆರವಣಿಗೆ ನೋಡುಗರ ಕಣ್ಣಿಗೆ ಹಬ್ಬದ ಸಂಭ್ರಮ ಮೂಡಿಸಿತು.

 • Share this:

  ಕಲಬುರಗಿ: ಡೊಳ್ಳಿನ ಸದ್ದಿಗೆ ಕುಣಿದ್ರು ನೋಡಿ ಯುವತಿಯರು, ಹಾಡಿನ ನಿನಾದಕ್ಕೆ ತಾಳ ಹಾಕಿದ್ರು ಸಭಿಕರು. ಬೃಹತ್ ವೇದಿಕೆಯಲ್ಲಿ ಕಂಡು ಬಂತು ವಿವಿಧ ಸಾಂಸ್ಕೃತಿಕ ವೈವಿಧ್ಯಗಳು. ಇದುವೇ ಕಲಬುರಗಿಯಲ್ಲಿ ನಡೆದ ಯುವಜನೋತ್ಸವದ ಝಲಕ್. ಗುಲ್ಬರ್ಗಾ ವಿಶ್ವವಿದ್ಯಾಲಯದ (Gulbarga University) ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ (Youth Festival) ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಒಂದುಗೂಡಿದ್ದರು.


  ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಂತೂ ಜಿದ್ದಾಜಿದ್ದಿನ ಪೈಪೋಟಿ ನೀಡಿದರು. ನೆರೆದವರಲ್ಲಿ ಹೊಸ ಬಗೆಯ ಪುಳಕ ಮೂಡಿಸಿದರು. ಒಂದೊಂದು ತಂಡದ ಕಲಾ ಪ್ರಕಾರಗಳು ಜಾನಪದ ಲೋಕಕ್ಕೆ ಕರೆದೊಯ್ದಿತ್ತು. ಅತ್ತ ವೇದಿಕೆಯಲ್ಲಿ ಸ್ಪರ್ಧಿಗಳು ನೃತ್ಯ ಮಾಡ್ತಿದ್ರೆ, ಇತ್ತ ಸಭಿಕರಾಗಿ ಕುಳಿತವರ ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ.
  ಇನ್ನು ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್.ಛಾಯಾ ಅವರು ಇನ್ನಷ್ಟು ಮೆರುಗು ನೀಡಿದರು. ಗಾಯನದ ಜೊತೆ ಜೊತೆಗೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಸಂಗೀತ ಲೋಕಕ್ಕೆ ಕರೆದೊಯ್ದರು.


  ಇದನ್ನೂ ಓದಿ: Kodagu: ಕಾಡಾನೆ-ಸಾಕಾನೆ ಸರ್ಕಸ್! ಕೊಡಗಿನಲ್ಲಿ ಹೀಗೊಂದು ಹಗ್ಗಜಗ್ಗಾಟ


  ಜಾನಪದ, ಭಾವಗೀತೆ, ಸಿನೆಮಾ ಗೀತೆಗಳ ಮೂಲಕ ರಂಜಿಸಿದರು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಂತೂ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಡೊಳ್ಳಿನ ಸದ್ದಿಗೆ ಯುವಕ, ಯುವತಿಯರೆನ್ನದೇ ಜೋಷ್​ನೊಂದಿಗೆ ಮೈ ಚಳಿ ಬಿಟ್ಟು ಕುಣಿದು ಸಂಭ್ರಮಿಸಿದರು. ಸುಮಾರು ಒಂದೂವರೆ ಗಂಟೆ ನಡೆದ ಅದ್ಧೂರಿ ಮೆರವಣಿಗೆ ನೋಡುಗರ ಕಣ್ಣಿಗೆ ಹಬ್ಬದ ಸಂಭ್ರಮ ಮೂಡಿಸಿತು.


  ಇದನ್ನೂ ಓದಿ: Vijayapura: ಭಕ್ತಿಯೆಂದರೆ ಇದು! ಸ್ವಾಮಿ ಅಯ್ಯಪ್ಪನ ಮೊರೆಹೋದ ಮಾಲಾಧಾರಿಗಳು


  ವಿವಿಧ ಜಿಲ್ಲೆಯ ವಿದ್ಯಾರ್ಥಿಗಳ ಸಂಭ್ರಮ
  ಮೂರು ದಿನಗಳ ನಡೆದ ಯುವಜನೋತ್ಸವದಲ್ಲಿ ವಿವಿ ಆವರಣದ ವಿವಿಧ ಸ್ಥಳದಲ್ಲಿ 27 ವಿವಿಧ ಸ್ಪರ್ಧೆಗಳು ನಡೆದವು. ಕಲಬುರಗಿ, ಬೀದರ್ ಸೇರಿದಂತೆ ನಾನಾ ಭಾಗದ ವಿದ್ಯಾರ್ಥಿಗಳು ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಹೀಗೆ ಯುವಜನೋತ್ಸವ ಕಲಬುರಗಿಯ ಕಾಲೇಜು ವಿದ್ಯಾರ್ಥಿಗಳಲ್ಲಿ ಸಂಭ್ರಮವನ್ನೇ ಹರಿಸಿತು.


  ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು