ಕಲ್ಲಿಗೂ ಇಲ್ಲಿ ಜೀವ ಬರುತ್ತೆ. ದಾಸರಿಂದ ಹಿಡಿದು ದೇವರವರೆಗೆ ಹೀಗೆ ವಿವಿಧ ರೂಪಗಳು ಕಾಣಸಿಗುತ್ತೆ. ಈ ಶಿಲ್ಪಿ ಕಲ್ಲಿನ ಮೇಲೆ ಅರಳುವ ಕುಂಚದ ಕಲೆಗೆ ತಲೆದೂಗಲೇಬೇಕು. ಪಾರಂಪರಿಕ ಬಳುವಳಿಯಾಗಿ ಬಂದ ಈ ಸಾಂಪ್ರದಾಯಿಕ ಕಲೆ ಇದೀಗ ಪದವೀಧರ ಯುವಕನ ಬದುಕಿನ ಅನ್ನದ ದಾರಿಯೂ ಆಗಿದೆ. ಹೀಗೆ ಉಳಿ ಹಿಡಿದು ಕಲ್ಲುಗಳಿಗೆ ಮೂರ್ತಿರೂಪ ನೀಡುತ್ತಿರುವ ಇವರ ಹೆಸರು ರಾಜಶೇಖರ್ ಬಡಿಗೇರ್. ಕಲಬುರಗಿ (Kalaburagi News) ತಾಲೂಕಿನ ಕುಸನೂರು ಗ್ರಾಮದ ನಿವಾಸಿ. ರಾಜಶೇಖರ್ ಬಡಿಗೇರ್ ಓದಿದ್ದು ಬಿಎ ಪದವಿ. ಆದ್ರೆ ಬಿಎ ಪದವಿ ಮುಗಿಸಿರುವ ರಾಜಶೇಖರ್ ಹಾಗೇ ಇರದೇ ತಮ್ಮ ತಂದೆಯಿಂದ ಬಳುವಳಿಯಾಗಿ ಬಂದಿರುವ ಸಾಂಪ್ರದಾಯಿಕ ಕಲೆಯನ್ನು (Treditonal Art) ಉಳಿಸಿ-ಬೆಳೆಸಿಕೊಂಡು ಬರ್ತಿದ್ದಾರೆ.
ಇವರು ಕೈಯಲ್ಲಿ ಉಳಿ ಹಿಡಿದು ಕಲ್ಲುಗಳಿಗೆ ಜೀವ ತುಂಬುವ ಕೆಲಸ ಮಾಡ್ತಿದ್ದಾರೆ. ಕುಸನೂರು ಗ್ರಾಮದಲ್ಲಿ ಶ್ರೀ ಜಕಣಾಚಾರಿ ಶಿಲ್ಪ ಕಲಾಕೇಂದ್ರವನ್ನು ಆರಂಭಿಸಿದ್ದು, ರಾಜಕೀಯ ನಾಯಕರಿಂದ ಹಿಡಿದು ಸಾವಿರಾರು ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಬಸವಣ್ಣ, ಬುದ್ದ, ಅಕ್ಕ ಮಹಾದೇವಿ, ಕನಕದಾಸ, ಶ್ರೀಕೃಷ್ಣ, ರಾಮ, ಯೇಸು ಹೀಗೆ ದಾಸರಿಂದ ದೇವರುಗಳವರೆಗಿನ ಅನೇಕ ಮೂರ್ತಿಗಳನ್ನ ಕೆತ್ತಿದ್ದಾರೆ.
ಸರ್ಕಾರಿ ಕೆಲಸ ಬಂದ್ರೂ ಸೇರಿಲ್ಲ!
ರಾಜಶೇಖರ್ ಬಡಿಗೇರ್ ಬಾಗಲಕೋಟೆ ಸೇರಿ ಇತರೆ ಕಡೆಗಳಿಂದ ಕಲ್ಲುಗಳನ್ನು ತರಿಸಿ ಅವುಗಳಿಗೆ ಮೂರ್ತಿರೂಪ ನೀಡ್ತಿದ್ದಾರೆ. ಈ ಹಿಂದೆ ತಮ್ಮ ತಂದೆ ಮೂರ್ತಿ ರಚಿಸುವಾಗ ಅವರ ಜೊತೆಯಲ್ಲಿಯೇ ಇದ್ದು ಕಲಿತ ರಾಜಶೇಖರ್ ತಮ್ಮ ಕುಟುಂಬದ ವೃತ್ತಿಯನ್ನು ಮುಂದುವರಿಸಿದ್ದಾರೆ. ಬಿಎ ಪಾಸಾದ ನಂತರ ಸರ್ಕಾರಿ ನೌಕರಿ ಬಂದ್ರೂ ಕೂಡ ಹೋಗದೇ ಸಾಂಪ್ರದಾಯಿಕವಾಗಿ ಬಂದ ತಮ್ಮ ಕುಟುಂಬದ ವೃತ್ತಿಯನ್ನು ಮುಂದುವರಿಸಿಕೊಂಡು ಬರ್ತಿದ್ದಾರೆ.
ಇದನ್ನೂ ಓದಿ: Kalaburagi: ಬಡಮಕ್ಕಳ ದ್ರೋಣಾಚಾರ್ಯ ಕಲಬುರಗಿಯ ಈ ಡಾನ್ಸ್ ಮಾಸ್ಟರ್!
ಇವರ ರೂಪಿಸಿದ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ
ಹದಿನೈದು ವರ್ಷಗಳಿಂದ ಮಾಡುತ್ತಿರುವ ಇವರ ಕೆಲಸಕ್ಕೆ ಇವರ ಪತ್ನಿ, ಸಹೋದರಿಯರು ಕೂಡ ಸಾಥ್ ನೀಡ್ತಿದ್ದಾರೆ. ಇವರ ಕೈಯಲ್ಲಿ ಅರಳಿರುವ ಕಲ್ಲಿನ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆಯೂ ಇದ್ದು, ಬರೀ ಕರ್ನಾಟಕ ಮಾತ್ರವಲ್ದೇ ಇಡೀ ದೇಶದ ಮೂಲೆ ಮೂಲೆಗಳಲ್ಲಿಯೂ ಭಾರಿ ಬೇಡಿಕೆ ಪಡೆದುಕೊಂಡಿವೆ.
ಇದನ್ನೂ ಓದಿ: Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್ ಟೈಮ್ ರೈತ
ಸರ್ಕಾರದ ನೆರವಿನ ಹಂಬಲದಲ್ಲಿ ಕಲಾವಿದ
ಒಟ್ಟಾರೆ ರಾಜಶೇಖರ್ ಬಡಿಗೇರ್ ಅವರು ತಮ್ಮ ಪೂರ್ವಜರಿಂದ ಬಂದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗ್ತಿರೋದು ಶ್ಲಾಘನೆಗೆ ಪ್ರಾಪ್ತವಾಗಿದೆ. ಮೆಚ್ಚುಗೆ ಗಳಿಸಿದೆ. ಇಂತಹ ಪಾರಂಪರಿಕ ಕಲಾವಿದರ ನೆರವಿಗೆ ಸರ್ಕಾರವೂ ಬರಬೇಕಿದೆ ಅನ್ನೋದು ಕಲಬುರಗಿ ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ