ಒಂದೇ ರೀತಿ ಸ್ಟೆಪ್ ಹಾಕುತ್ತಾ ಕುಣಿಯುತ್ತಿರೋ (Children Dance) ಮಕ್ಕಳು. ಕೊರಿಯೋಗ್ರಫಿ ಕಲಿಸುತ್ತಿರೋ ಡ್ಯಾನ್ಸ್ ಮಾಸ್ಟರ್.ಕೇವಲ ಡಾನ್ಸ್ ಮಾಡ್ತಿದ್ರೆ ಇವ್ರು ಸುದ್ದಿಯಾಗ್ತಿರ್ಲಿಲ್ವೇನೋ, ಆದ್ರೆ ಇವ್ರು ಪಾರ್ಕ್ನಲ್ಲಿ ಡಾನ್ಸ್ (Dance In park) ಮಾಡ್ತಿರೋದಕ್ಕೆ ದೊಡ್ಡ ಸುದ್ದಿಯಾಗ್ತಿದ್ದಾರೆ! ಅಷ್ಟಕ್ಕೂ ಇವ್ರೆಲ್ಲ ಉದ್ಯಾನವನದಲ್ಲಿ ಕುಣಿಯುತ್ತಿರೋದಾದ್ರೆ ಯಾಕ್ ಅಂತೀರಾ? ನಾವ್ ಹೇಳ್ತೀವಿ ಕೇಳಿ. ಯಾವುದೇ ಸ್ಟೆಪ್ ಇರ್ಲಿ, ಯಾವುದೇ ಸ್ಟೈಲ್ ಇರ್ಲಿ ಪಟಪಟನೆ ಹೆಜ್ಜೆ ಹಾಕೋ ಇವ್ರ ಡಾನ್ಸ್ ಸ್ಟುಡಿಯೋನೆ ಕಲಬುರಗಿಯ (Kalaburagi News) ಈ ಸಾರ್ವಜನಿಕ ಉದ್ಯಾನವನ. ಹೀಗೆ ಕುಣಿಯೋ ಮಕ್ಕಳಿಗೆ ಗುರು (Kalaburagi Dance Master) ಯಂಕಪ್ಪ ಅಕ್ಷಯ್ ಅಂತ.
ಇವರ ಗರಡಿಯಲ್ಲಿ ಪಳಗಿದ ಮಕ್ಕಳು ಯಾರ್ಗೂ ಕಡಿಮೆಯಿಲ್ಲದೇ ನೃತ್ಯ ಮಾಡಬಲ್ಲರು. ಆದರೆ ಹೇಳಿಕೊಳ್ಳೋಕೆ ಯಂಕಪ್ಪ ಅವ್ರ ಬಳಿ ಡಾನ್ಸ್ ಮಾಸ್ಟರ್ ಬಳಿ ಸ್ವಂತ ಡ್ಯಾನ್ಸ್ ಸ್ಟುಡಿಯೋ ಇಲ್ಲ. ಅದ್ರಲ್ಲೂ ಬಡವರ ಮಕ್ಕಳೇ ಇಲ್ಲಿ ಡಾನ್ಸ್ ಕಲಿತಿದ್ದಾರೆ.
ಉದ್ಯಾನವೇ ಡಾನ್ಸ್ ಸ್ಟುಡಿಯೋ!
ಹೀಗಾಗಿ ಯಂಕಪ್ಪ ಅಕ್ಷಯ್ ಉದ್ಯಾನವನವನ್ನೇ ತಮ್ಮ ಡಾನ್ಸ್ ಸ್ಟುಡಿಯೋ ಮಾಡಿಕೊಂಡಿದ್ಧಾರೆ. ಅಲ್ಲೆ ಹತ್ತಾರು ವಿದ್ಯಾರ್ಥಿಗಳಿಗೆ ಡಾನ್ಸ್ ಪ್ರಾಕ್ಟೀಸ್ ಮಾಡಿಸ್ತಾರೆ. ಹೀಗೆ ಕಲಿತ ನೂರಾರು ವಿದ್ಯಾರ್ಥಿಗಳು ಫೇಮಸ್ ಆಗಿದ್ದಾರೆ ಅಂತ ಹೆಮ್ಮೆ ಪಡ್ತಾರೆ ಯಂಕಪ್ಪ ಅಕ್ಷಯ್.
ಕಳೆದ 30 ವರ್ಷಗಳಿಂದ ಡಾನ್ಸ್ ಹೇಳ್ಕೊಡ್ತಿದ್ದಾರೆ!
ಕಲಬುರಗಿ ನಗರದ ಡ್ಯಾನ್ಸ್ ಮಾಸ್ಟರ್ ಯಂಕಪ್ಪ ಅಕ್ಷಯ್ ಕಳೆದ 30 ವರ್ಷಗಳಿಂದ ಡಾನ್ಸ್ ಮೂಲಕ ಕಲಾ ಸೇವೆಯನ್ನು ಮಾಡ್ತಿದ್ದಾರೆ. ಅದರಲ್ಲೂ ಬಡ ಮಕ್ಕಳಿಗೆ ನೃತ್ಯವನ್ನು ಹೇಳಿಕೊಡುವ ಮೂಲಕ ಇಡಿ ಕಲಬುರ್ಗಿಯಲ್ಲಿ ಫೇಮಸ್ ಆಗಿದ್ದಾರೆ. ಇವರ ಬಳಿ ಕಲಿತ ಅದೆಷ್ಟೋ ಜನ ವಿದ್ಯಾರ್ಥಿ ಇಂದು ಡಾನ್ಸ್ ಮಾಸ್ಟರ್ ಆಗಿ ಇತರಿರಿಗೂ ಕಲಿಸ್ತಿದ್ದಾರಂತೆ.
ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ
ಇನ್ನು ಕೆಲವರು ರಾಜ್ಯ ಮಟ್ಟದ ಟಿವಿ ಶೋ ಹಾಗೂ ಬೃಹತ್ ವೇದಿಕೆಗಳ ಮೇಲೆ ಮಿಂಚುತ್ತಿದ್ದಾರೆ. ಇವರ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಡಾನ್ಸ್ ಕರ್ನಾಟಕ ಡಾನ್ಸ್ನಂತಹ ವೇದಿಕೆಗಳಲ್ಲೂ ಮಿರಮಿರ ಮಿಂಚಿದ್ದಾರೆ.
ಆದ್ರೆ ವಿಪರ್ಯಾಸ ಅಂದ್ರೆ ಕಳೆದ 30 ವರ್ಷಗಳಿಂದ ಬಡ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ನೀಡುತ್ತಿರುವ ಇವರಿಗೆ ಸ್ವಂತ ಮನೆಯಿಲ್ಲ. ಮಕ್ಕಳಿಗೆ ನೃತ್ಯ ತರಬೇತಿ ನೀಡಲು ಸಣ್ಣ ರೂಮ್ ಸಹ ಇಲ್ಲ. ಆದರೂ ಯಂಕಪ್ಪ ಅಕ್ಷಯ್ ಅವ್ರು ಛಲ ಬಿಡದೇ ಹಲವು ಡಾನ್ಸರ್ಗಳನ್ನು ಹುಟ್ಟುಹಾಕ್ತಿದ್ದಾರೆ.
ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!
ಯಂಕಪ್ಪ ಅಕ್ಷಯ್ ಕಳೆದ 30 ವರ್ಷಗಳಿಂದ ಯಾರಿಂದ್ಲೂ ಹಣ ಪಡೆಯದೆ ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸ್ತಾರೆ. ಸದ್ಯ ಡಾನ್ಸ್ ಕಲಿಸೋಕೆ ಒಂದೊಳ್ಳೆ ಸ್ಥಳದ ನೆರವಿನ ನಿರೀಕ್ಷೆಯಲ್ಲಿರೋ ಇವ್ರಿಗೆ ಸಹೃದಯರ ಸಹಾಯ ಬೇಕಿದೆ. ಇನ್ನೂ ನೂರಾರು ನೃತ್ಯಪಟುಗಳನ್ನ ರೆಡಿಮಾಡೋ ಇವ್ರ ಉತ್ಸಾಹಕ್ಕೆ ಶರಣು ಅಂತಿದ್ದಾರೆ ಕಲಬುರಗಿಯ ಜನರು.
ಡಾನ್ಸ್ ಮಾಸ್ಟರ್ ಯಂಕಪ್ಪ ಅಕ್ಷಯ್ ಅವರ ಸಂಪರ್ಕ ಸಂಖ್ಯೆ: 919980423213
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ