• Home
 • »
 • News
 • »
 • kalburgi
 • »
 • Kalaburagi: ವಿಶ್ವದ ಅತಿ ದೊಡ್ಡ ಫಿರಂಗಿ ನಮ್ಮ ಕಲಬುರಗಿಯಲ್ಲೇ ಇದೆ!

Kalaburagi: ವಿಶ್ವದ ಅತಿ ದೊಡ್ಡ ಫಿರಂಗಿ ನಮ್ಮ ಕಲಬುರಗಿಯಲ್ಲೇ ಇದೆ!

ಇಲ್ಲಿದೆ ನೋಡಿ ಫಿರಂಗಿ

"ಇಲ್ಲಿದೆ ನೋಡಿ ಫಿರಂಗಿ"

ಕಲಬುರಗಿ ಕೋಟೆಯಲ್ಲಿರೋ ಈ ಫಿರಂಗಿ 29 ಅಡಿ ಉದ್ದವಿದ್ದು ರಷ್ಯಾದ ತೋಪನ್ನೂ ಮೀರಿಸಿದೆ. ಈ ತೋಪನ್ನು ವಿಶ್ವ ದಾಖಲೆ ಪಟ್ಟಿಗೆ ಸೇರಿಸಬೇಕು ಅನ್ನೋ ಆಗ್ರಹವೂ ಕೇಳಿಬರ್ತಿದೆ.

 • Share this:

  ಕಲಬುರಗಿ: ಫಿರಂಗಿ ಅಂದ್​ತಕ್ಷಣ ನೆನಪಿಗೆ ಬರೋದು ರಾಜಾಧಿರಾಜರ ಕಾಲ.. ಅದ್ರಲ್ಲೂ ಕಲ್ಬುರ್ಗಿ ಅಂದ್ರೆ ಕೇಳ್ಬೇಕೆ..ಕಲಬುರಗಿಯ (Kalaburagi News) ಬಹುಮನಿ ಸುಲ್ತಾನರ ಕೊಡುಗೆಯನ್ನ ಬಿಡಿಸಿ ಹೇಳ್ಬೇಕೆ? ಬಹುಮನಿ ಸುಲ್ತಾನರು (Bahmani Sultans) ನಿರ್ಮಿಸಿದ ಇಲ್ಲಿರೋ ವಿಶ್ವದ ಅತ್ಯಂತ ಉದ್ದನೆಯ ಈ ತೋಪನ್ನು (World's Biggest Cannon) ನೀವ್ ನೋಡಿದ್ರೆ ಅಬ್ಬಬ್ಬಾ ಅಂತೀರಿ. ಕಲಬುರಗಿ ಜಿಲ್ಲೆ ಐತಿಹಾಸಿಕವಾಗಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲೇ ಇದೆ ನೋಡಿ ವಿಶ್ವದ ಅತ್ಯಂತ ಉದ್ದದ ತೋಪು ಎಂದು ಹೇಳಲಾಗಿರೋ ತೋಪು.


  ಇದು ಬಹುಮನಿ ಸುಲ್ತಾನರ ಕಾಲದ ಕೊಡುಗೆಯಾಗಿರೋ ಈ ಬೃಹತ್ ಫಿರಂಗಿ ಕಲಬುರಗಿಯ ಜಾಮೀಯಾ ಮಸೀದಿಯ ಬಳಿಯಿದೆ. ದಿನಂಪ್ರತಿ ನೂರಾರು ಜನರು ಫಿರಂಗಿ ನೋಡಿ ರೋಮಾಂಚನ ಅನುಭವಿಸ್ತಾರೆ.


  ಇದನ್ನೂ ಓದಿ: Rose Business: ಗುಲಾಬಿ ಬೆಳೆದು ಭರ್ಜರಿ ಆದಾಯ, ಖರ್ಚು ತೀರಾ ಕಡಿಮೆ!


  ಸದ್ಯ ರಷ್ಯಾದಲ್ಲಿರೋ 17.5 ಅಡಿ ಉದ್ದದ ಟಿಸಾರ್ ತೋಪು ವಿಶ್ವದ ಅತ್ಯಂತ ಎತ್ತರವಾದ ತೋಪು ಅಂತ ದಾಖಲೆಗಳು ಹೇಳುತ್ತವೆ.


  ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


  ಆದ್ರೆ ಕಲಬುರಗಿ ಕೋಟೆಯಲ್ಲಿರೋ ಈ ಫಿರಂಗಿ 29 ಅಡಿ ಉದ್ದವಿದ್ದು ರಷ್ಯಾದ ತೋಪನ್ನೂ ಮೀರಿಸಿದೆ. ಈ ತೋಪನ್ನು ವಿಶ್ವ ದಾಖಲೆ ಪಟ್ಟಿಗೆ ಸೇರಿಸಬೇಕು ಅನ್ನೋ ಆಗ್ರಹವೂ ಕೇಳಿಬರ್ತಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: