Kalaburagi: ಸಿಕ್ಸರ್‌, ಬೌಂಡರಿ ಬಾರಿಸಿ ಮಿಂಚಿದ ಮಹಿಳೆಯರು, ರೋಚಕ ಮ್ಯಾಚ್ ನೀವೂ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಡರ್-19 ಯುವತಿಯರ ಕ್ರಿಕೆಟ್ ಪಂದ್ಯಾವಳಿಯಂತೂ ನೆರೆದವರ ಮೆಚ್ಚುಗೆ ಪಡೆಯಿತು. ಭರ್ಜರಿ ಬ್ಯಾಟಿಂಗ್‌, ಬೌಲಿಂಗ್‌ ಮೂಲಕ ಹೆಣ್ಮಕ್ಕಳು ಭಾರೀ ಪೈಪೋಟಿಯ ಪಂದ್ಯಕೂಟಕ್ಕೆ ಸಾಕ್ಷಿಯಾದರು.

  • Share this:

    ಕಲಬುರಗಿ: "ಬಿಡ್ಬೇಡಿ ಎಳೀರಿ.. ಎಳೀರಿ.. ಹಗ್ಗ ಲೂಸ್‌ ಬಿಡ್ಬೇಡ ಕಣೇ.." ಹೀಗೆ ಹುರಿದುಂಬಿಸ್ತಿರೋ ಹಿರಿಯರು. ಹಗ್ಗಜಗ್ಗಾಟದ ಮೂಲಕ ಶಕ್ತಿ ಪ್ರದರ್ಶಿಸ್ತಿರೋ ಯುವತಿಯರು. ಕ್ರಿಕೆಟ್‌ ಬಾಲ್‌, ಬ್ಯಾಟ್‌ ಹಿಡಿದು ಸ್ಮೃತಿ ಮಂದಾನ, ಹರ್ಮನ್‌ ಪ್ರೀತ್‌ ಕೌರ್‌ ನೆನಪಿಸಿದ ಮಹಿಳಾ (Women's Cricket League) ಕ್ರಿಕೆಟಿಗರು! ಹೀಗೆ ಪಾಠಕ್ಕೂ ಜೈ, ಆಟಕ್ಕೂ ಸೈ ಅಂತಾ ತೋರಿಸಿಕೊಟ್ರು ನೋಡಿ ಬಿಸಿಲುನಾಡಿನ (Kalaburagi News) ಹೆಣ್ಮಕ್ಕಳು.


    ಹೌದು, ಕಲಬುರಗಿಯ ಎನ್​ವಿ ಮೈದಾನದಲ್ಲಿ ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಅಂಡರ್-19 ಯುವತಿಯರ ಕ್ರೀಡಾಕೂಟದಲ್ಲಿ ಯುವತಿಯರು ಸಖತ್‌ ಆಗಿಯೇ ಮಿಂಚಿದರು. ಕ್ರೀಡಾಂಗಣಕ್ಕೆ ಇಳಿದವರೇ ಕ್ರಿಕೆಟ್ ಆಡುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಬೀಗಿದ್ರು.


    ಹಗ್ಗಜಗ್ಗಾಟ ಪೈಪೋಟಿ
    ಇನ್ನು ಹಗ್ಗಜಗ್ಗಾಟದ ಮೂಲಕವಂತೂ ಹೆಣ್ಮಕ್ಕಳು ಬಿಸಿಲನ್ನೂ ಲೆಕ್ಕಿಸದೇ ಅಕ್ಷರಶಃ ಶಕ್ತಿ ಪ್ರದರ್ಶನ ತೋರಿದರು.‌ ಹಗ್ಗಜಗ್ಗಾಟವಂತೂ ರೋಮಾಂಚನಕಾರಿಯಾಗಿತ್ತು. ನೀ ಕೊಡೆ, ನಾ ಬಿಡೆ ಅನ್ನೋ ರೀತೀಲಿ ಹಗ್ಗ ಜಗ್ಗಾಟ ಪಂದ್ಯಾಟ ಸಾಗಿ ಬಂತು. ಕಟು ಬಿಸಿಲನ್ನು ಲೆಕ್ಕಿಸದೇ ಸುತ್ತಲೂ ಇದ್ದ ಬೆಂಬಲಿಗ ಪ್ರೋತ್ಸಾಹದ ನಡುವೆ ಮೈನವಿರೇಳಿಸುವ ಪಂದ್ಯ ನಡೆಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಈ ಪಂದ್ಯಕೂಟಗಳನ್ನು ಆಯೋಜಿಸಲಾಗಿತ್ತು.


    ಇದನ್ನೂ ಓದಿ: Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!


    ಭರ್ಜರಿ ಬೌಲಿಂಗ್‌, ಬ್ಯಾಟಿಂಗ್
    ಅಂಡರ್-19 ಯುವತಿಯರ ಕ್ರಿಕೆಟ್ ಪಂದ್ಯಾವಳಿಯಂತೂ ನೆರೆದವರ ಮೆಚ್ಚುಗೆ ಪಡೆಯಿತು. ಭರ್ಜರಿ ಬ್ಯಾಟಿಂಗ್‌, ಬೌಲಿಂಗ್‌ ಮೂಲಕ ಹೆಣ್ಮಕ್ಕಳು ಭಾರೀ ಪೈಪೋಟಿಯ ಪಂದ್ಯಕೂಟಕ್ಕೆ ಸಾಕ್ಷಿಯಾದರು. ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಪುರುಷ ಕ್ರಿಕೆಟಿಗರಿಗೂ ಸೆಡ್ಡು ಹೊಡೆದರು.




    ಇದನ್ನೂ ಓದಿ: Kalaburagi: ಹೈ ಹೀಲ್ಡ್ ಚಪ್ಪಲಿ ಧರಿಸಿ ಪುರುಷರ ಕ್ಯಾಟ್ ವಾಕ್!


    ಗೆದ್ದವರು ಇವರು
    ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಲಬುರಗಿ ತಂಡ ವಿನ್ನರ್ ಆದ್ರೆ ಚಿಂಚೋಳಿ ತಂಡ ರನ್ನರ್ ಆಗಿ ಬೀಗಿತು. ಇನ್ನು ಹಗ್ಗ- ಜಗ್ಗಾಟ ಸ್ಪರ್ಧೆಯಲ್ಲಿ ಚಿಂಚೋಳಿ ತಂಡ ವಿನ್ನರ್ ಆಗಿ ಹೊರಹೊಮ್ಮಿದರೆ, ಕಲಬುರಗಿ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟಿತು. ಒಟ್ಟಿನಲ್ಲಿ ಪುರುಷರಿಗೆ ಸೀಮಿತ ಅನ್ನೋ ಹಾಗಿದ್ದ ಕ್ರೀಡೆಯಲ್ಲಿ ಹೆಣ್ಮಕ್ಕಳು ತಾವೇನು ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿಕೊಟ್ಟರು.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: