ಕಲಬುರಗಿ: ಚಂದಚಂದದ ಅಲಂಕಾರ, ಗಂಟೆ, ಪೆಟ್ಟಿಗೆ ಅಥವಾ ಇನ್ಯಾವ್ದೇ ವಸ್ತುಗಳಿರ್ಲಿ, ಅದರ ಮೇಲೆ ಈ ಕಲಾವಿದರ ಕೈಬೆರಳು ಅತ್ತಿಂದಿತ್ತ ಹರಿದಾಡ್ತು ಅಂದ್ರೆ ಸೃಷ್ಟಿಯಾಗುತ್ತೆ ಅದ್ಭುತ! ಅತಿ ಸೂಕ್ಷ್ಮ ರಚನೆ, ಕಲಾಕುಸುರಿಗಳ ಈ ಕಲೆಯೇ ಬಿದರಿ ಕಲೆ! (Bidri Art) ಈಗಲೂ ಬಿದರಿ ಕಲೆ ಮೇಲಿನ ಅಧ್ಯಯನ, ಪ್ರಯೋಗಗಳೂ ಮುಂದುವರೆದೇ ಇದೆ.
ನಮ್ ಕಲಬುರಗಿ ನಗರದ ಸಂಶೋಧಕ ರಹೆಮಾನ್ ಪಟೇಲ್ ಅವರ ಸಂಶೋಧನೆಗಳು ಬಿದರಿ ಕಲೆಯ ಮಹತ್ವವನ್ನು ಜಗತ್ತಿಗೇ ಸಾರಿವೆ. ರಷ್ಯಾದಲ್ಲೂ ಬಿದರಿ ಕಲೆಯ ಹೆಚ್ಚಗಾರಿಕೆ ಸಾರಿದ್ದಾರೆ ಈ ಕಲಬುರಗಿ ಕಲಾವಿದ.
ಇದನ್ನೂ ಓದಿ: Kalaburgi: ಯೂಟ್ಯೂಬ್ ನೋಡಿ ಯೋಗ ಕಲಿತಳು ಈ ಪುಟಾಣಿ!
15 ದಿನಗಳವರೆಗೂ ಬೇಕು!
ಬಿದರಿ ಕಲೆಯು ಅತ್ಯಂತ ಸೂಕ್ಷ್ಮ ಹಾಗೂ ಶ್ರಮದ ಕೆಲಸವಾಗಿದ್ದು ಸುಮಾರು 10 ರಿಂದ 15 ದಿನಗಳ ಕಾಲ ಒಂದು ಕಲಾಕೃತಿಯನ್ನು ತಯಾರಿಸಲು ಸಮಯ ಬೇಕಾಗುತ್ತೆ.
ಇದನ್ನೂ ಓದಿ: Kalaburgi: ಏಳು ರಾಜರ ಗೋರಿ, ಸಾಥ್ ಗುಂಬಜ್ ರಹಸ್ಯವೇ ಈ ಸಮಾಧಿ!
ಕುಶಲಕರ್ಮಿಗಳು ತಾಮ್ರ, ಸತುವಿನ ಧಾತುಗಳನ್ನು ಮಿಶ್ರ ಮಾಡಿ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿ ಅಥವಾ ಬಂಗಾರದ ತಂತಿಯನ್ನು ಕೂರಿಸಿ ಹೊಳಪು ನೀಡುತ್ತಾರೆ. ಕನ್ನಡನಾಡಿನ ಬಿದರಿ ಕಲೆಗೆ ವಿದೇಶಗಳಲ್ಲೂ ಮಾನ್ಯತೆ ಇರೋದು ಹೆಮ್ಮೆಯ ಸಂಗತಿಯಾಗಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ