ಕಲಬುರಗಿ: ಎಲ್ಲಿ ನೋಡಿದ್ರಲ್ಲಿ ಅಪ್ಪು ಫ್ಯಾನ್ಸ್. ಸಿಹಿ ಹಂಚಿ, ಹಾಲಿನ ಅಭಿಷೇಕದ ಮೂಲಕ ಪವರ್ ಸ್ಟಾರ್ ಬರ್ಡ್ಡೇ ಸೆಲೆಬ್ರೇಷನ್. ಅಭಿಮಾನಿಗಳ (Appu Fans) ಪಾಲಿಗಂತೂ ಇದು ಪುನೀತ ಕ್ಷಣ. ಇದೆಲ್ಲವೂ ಬಿಸಿಲನಾಡಿನ ಜನರ ಅಪ್ಪು (Power Star Puneeth Rajkumar) ಮೇಲಿನ ಅಭಿಮಾನ.
ಯೆಸ್, ಕನ್ನಡದ ಮೇರು ನಟನಾಗಿ ದಶಕಗಳ ಕಾಲ ಮಿಂಚಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಆದರೆ ಅವರು ಅಕಾಲಿಕವಾಗಿ ಅಗಲಿದ್ರೂ, ಅಭಿಮಾನಿಗಳು ಮಾತ್ರ ಅವರನ್ನ ಮರೆತಿಲ್ಲ ಅನ್ನೋದಕ್ಕೆ ಬಿಸಿಲನಾಡು ಕಲಬುರಗಿ ಸಾಕ್ಷಿಯಾಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು ದೈವಾಧೀನರಾದ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನ ಈ ರೀತಿಯಾಗಿ ತೋರಿಸಿಕೊಂಡರು. ಕಲಬುರಗಿ ಹೊರವಲಯದಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ವಯೋವೃದ್ಧರೊಟ್ಟಿಗೆ ಕೇಕ್ ಕತ್ತರಿಸಿದ ಅಭಿಮಾನಿಗಳು ವೃದ್ಧರಿಗೆ ಭೋಜನ ಮಾಡಿಸಿ ಅಪ್ಪು ಬರ್ತ್ಡೇ ಆಚರಿಸಿದರು.
ಇದನ್ನೂ ಓದಿ: Kalaburagi: ಬರೋಬ್ಬರಿ 100 ವರ್ಷಗಳಿಂದ ಅನ್ನದಾನ, ಇದೇ ನೋಡಿ ಭಕ್ತಿ ಅಂದ್ರೆ!
ಇನ್ನೊಂದೆಡೆ ಅಪ್ಪು ಅಡ್ಡ ಬಾಯ್ಸ್ ಗ್ಯಾಂಗ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಆಚರಿಸಿ ನೂರಾರು ಜನರಿಗೆ ಅನ್ನದಾನ ಮಾಡಿದರು. ಕರ್ನಾಟಕ ರತ್ನನ ಜನ್ಮದಿನ ಪ್ರಯುಕ್ತ 48 ಕೆಜಿ ತೂಕದ ಕೇಕ್ ಕತ್ತರಿಸಿದರು. ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ನೂರಾರು ಜನರಿಗೆ ಭೋಜನ ವ್ಯವಸ್ಥೆ ಮಾಡಿದರು. ಇನ್ನು ಯುವಕರು ಅಪ್ಪು ಭಾವಚಿತ್ರವಿದ್ದ ಟೀ ಶರ್ಟ್ ಧರಿಸಿ ತಮ್ಮ ನೆಚ್ಚಿನ ನಟನನ್ನು ನೆನಪಿಸಿಕೊಂಡರು.
ಒಟ್ಟಿನಲ್ಲಿ ಕರ್ನಾಟಕ ರತ್ನ ನಮ್ಮನ್ನ ಅಗಲಿ ಎರಡು ವರ್ಷಗಳು ಸಂದರೂ ಅಭಿಮಾನಿಗಳ ಹೃದಯದಲ್ಲಿ ಅವರು ಸದಾ ಜೀವಂತ ಅನ್ನೋದನ್ನ ಕಲಬುರಗಿ ಜನತೆ ಮತ್ತೆ ತೋರಿಸಿಕೊಟ್ಟರು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ