• Home
  • »
  • News
  • »
  • kalburgi
  • »
  • Viratapura Viragi: ಹಾನಗಲ್ ಕುಮಾರಸ್ವಾಮಿಗಳ ಜೀವನಾಧಾರಿತ ವಿರಾಟಪುರ ವಿರಾಗಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Viratapura Viragi: ಹಾನಗಲ್ ಕುಮಾರಸ್ವಾಮಿಗಳ ಜೀವನಾಧಾರಿತ ವಿರಾಟಪುರ ವಿರಾಗಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ವಿರಾಟಪುರುಷ ವಿರಾಗಿ

ವಿರಾಟಪುರುಷ ವಿರಾಗಿ

ಭಕ್ತರು ನೀಡಿದ ಭಾರೀ ಸಹಾಯದಿಂದ ಈ ಸಿನೆಮಾಕ್ಕೆ ಬಂಡವಾಳ ಹೂಡಲಾಗಿದೆ. ಜೊತೆಗೆ ಕುಮಾರಸ್ವಾಮಿಗಳ ಗುರುವಿನ ಪಾತ್ರದಲ್ಲೂ ಶಾಂತಲಿಂಗ ಶಿವಯೋಗಿಗಳೇ ಕಾಣಿಸಿಕೊಂಡಿದ್ದಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಸಿನೆಮಾ ಥಿಯೇಟರ್ ಮುಂದೆ ಜನವೋ ಜನ. ಅದ್ಯಾವುದೋ ಸೂಪರ್ ಸ್ಟಾರ್ ಸಿನೆಮಾ ರಿಲೀಸ್ ಆಗೋ ಲೆವೆಲ್​ಗೆ ಸಂಭ್ರಮ. ಆದ್ರೆ ಸಿನೆಮಾ ನೋಡೋಕೆ ಗಣ್ಯರ ಜೊತೆಗೆ ಸಿನೆಮಾ ಮಂದಿರಕ್ಕೆ ಬಂದ್ರು ನೋಡಿ ಸ್ವಾಮೀಜಿ. ಅರೆ! ಸ್ವಾಮೀಜಿ ಪರಂಪರೆಗೂ, ಜನರ ಕ್ರೇಝ್ ಹುಟ್ಟಿಸಿರೋ ಈ ಸಿನೆಮಾಕ್ಕೂ (Viratapura Viragi) ಏನ್ ಸಂಬಂಧ ಅಂತೀರಾ? ಅಲ್ಲೇ ಇದೆ ನೋಡಿ ಸಿನೆಮಾ ಕಥೆಯ ನಿಜವಾದ ವಿಚಾರ.


    ಸಿನೆಮಾ ರಿಲೀಸ್ ದಿನವೇ ಸ್ವಾಮೀಜಿಗಳು ತಂಡೋಪತಂಡವಾಗಿ ಹೀಗೆ ಸಿನೆಮಾ ಮಂದಿರಕ್ಕೆ ಬಂದಿರೋದಕ್ಕೂ ಒಂದು ಕಾರಣವಿದೆ. ಹೇಳಿ ಕೇಳಿ ಇದ್ಯಾವ ಸೂಪರ್ ಸ್ಟಾರ್ ಸಿನೆಮಾವಲ್ಲ, ಬದಲಿಗೆ ನಿಜ ಜೀವನದಲ್ಲಿ ಸೂಪರ್ ಸ್ಟಾರ್ ಆಗಿದ್ದ ಉತ್ತರ ಕರ್ನಾಟಕ ಭಾಗದ ಹಾನಗಲ್ ಕುಮಾರ ಸ್ವಾಮಿಗಳ ಜೀವನ ಆಧಾರಿತ ಚಿತ್ರ.




    ಯಾವ ಸ್ಟಾರ್​ಗೂ ಕಡಿಮೆ ಇಲ್ಲ!
    ‘ವಿರಾಟಪುರ ವಿರಾಗಿ‘ ಹೆಸರಿನ ಈ ಸಿನೆಮಾ ಸದ್ಯ ಉತ್ತರ ಕರ್ನಾಟಕದ ಎಲ್ಲ ಥಿಯೇಟರ್​ಗಳಲ್ಲೂ ಯಾವ ಖ್ಯಾತನಾಮರ ಸಿನೆಮಾಕ್ಕೂ ಕಮ್ಮಿಯಿಲ್ಲ ಅನ್ನೋ ಲೆವೆಲ್​ಗೆ ಜನರ ರೆಸ್ಪಾನ್ಸ್ ಪಡೆದಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಮುಗಿಬಿದ್ದು ಸಿನೆಮಾ ನೋಡುತ್ತಿದ್ದಾರೆ.


    ಬಿ. ಎಸ್. ಲಿಂಗದೇವರು ನಿರ್ದೇಶನದ ಚಿತ್ರ
    ನಿರ್ದೇಶಕ ಬಿ. ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿಬಂದಿರುವ ‘ವಿರಾಟಪುರ ವಿರಾಗಿ‘ ಹಾನಗಲ್ ಕುಮಾರಸ್ವಾಮಿಗಳ ನಿಜ ಜೀವನವನ್ನು ತೆರೆಮೇಲೆ ನೋಡುವ ಅವಕಾಶ ಕಲ್ಪಿಸಿದೆ. ಹಾಗಾಗಿ ಅವರ ಅನುಯಾಯಿಗಳು, ಭಕ್ತರು ಸಿನೆಮಾವನ್ನು ಥಿಯೇಟರ್ಗೆ ತೆರಳಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಸಿನೆಮಾದ ವಿಶೇಷ ಅಂದ್ರೆ, ಸಿನೆಮಾ ನಿರ್ಮಾಣಕ್ಕೆ ನೇತೃತ್ವ ವಹಿಸಿದ್ದು ಕಲಬುರಗಿಯ ಸಮಾಧಾನ ಮಠದ ಜಡೆ ಶಾಂತಲಿಂಗ ಶಿವಯೋಗಿಗಳು. ಈ ಸಿನೆಮಾದಲ್ಲಿ ನಟಿಸುವ ಜೊತೆಗೆ ಇವರು ಭಕ್ತರಿಂದಲೇ ಸಿನೆಮಾ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಿದ್ದಾರೆ.




    ಭಕ್ತರಿಂದಲೇ ಬಂಡವಾಳ
    ಭಕ್ತರು ನೀಡಿದ ಭಾರೀ ಸಹಾಯದಿಂದ ಈ ಸಿನೆಮಾಕ್ಕೆ ಬಂಡವಾಳ ಹೂಡಲಾಗಿದೆ. ಜೊತೆಗೆ ಕುಮಾರಸ್ವಾಮಿಗಳ ಗುರುವಿನ ಪಾತ್ರದಲ್ಲೂ ಶಾಂತಲಿಂಗ ಶಿವಯೋಗಿಗಳೇ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಉತ್ತರ ಕರ್ನಾಟಕದ ಹಲವು ಪ್ರಸಿದ್ಧ ಮಠಾಧೀಶರು ವಿರಾಟಪುರ ವಿರಾಗಿ ಸಿನೆಮಾದಲ್ಲಿ ಬಣ್ಣ ಹಚ್ಚಿರುವುದು ಇನ್ನೊಂದು ವಿಶೇಷ.


    Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!


    ಇದನ್ನೂ ಓದಿ: Oscars-KGF: ಕೆಜಿಎಫ್ ಸಿನಿಮಾ ಯಾಕೆ ಆಸ್ಕರ್ ಲಿಸ್ಟ್​​ನಲ್ಲಿ ಬರಲಿಲ್ಲ?




    ಮೊದಲ ದಿನವೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು ಚಿತ್ರದ ಟಿಕೆಟ್​ಗಳು ಜೋರಾಗಿಯೇ ಸೇಲ್ ಆಗ್ತಿವೆ. ಸ್ಯಾಂಡಲ್​ವುಡ್ ಬಹುಬೇಡಿಕೆಯ ನಟ ಸುಚೇಂದ್ರ ಪ್ರಸಾದ್ ಸಿನಿಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾನಗಲ್ ಕುಮಾರ ಸ್ವಾಮಿಗಳ ಪಾತ್ರವನ್ನು ನಿರ್ವಹಿಸಿದ ಸುಚೇಂದ್ರ ಪ್ರಸಾದ್ ಅವರ ನಟನೆಗೆ ಉತ್ತರ ಕರ್ನಾಟಕ ಭಾಗದ ಜನ ಫಿದಾ ಆಗಿದ್ದಾರೆ.


    ಇದನ್ನೂ ಓದಿ: Shiva Temple: ಎಲ್ಲೆಡೆ ಬರಗಾಲ ಬಂದ್ರೂ ಇಲ್ಲಿ ಮಾತ್ರ ನೀರು ಬತ್ತಲ್ಲ! ಶಿವಲಿಂಗದ ಅಡಿಯಿಂದಲೇ ಒಸರುತ್ತಂತೆ ಜೀವಜಲ!


    ಸಿನಿಮಾದಲ್ಲಿ ಅತಿ ಹೆಚ್ಚು ವಚನ ಸಾಹಿತ್ಯವನ್ನು ಬಳಸಲಾಗಿದೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವಿರಾಟ ಪುರ ವಿರಾಗಿ ಅನ್ನೋ ಮಠಾಧೀಶರ ಕುರಿತಾದ ಸಿನೆಮಾವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ವಿಶೇಷವೇ ಸರಿ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: