ಕಲಬುರಗಿ: "ಇನ್ನೇನು ಸತ್ತೇಹೋದ, ಆತ ನಮಗೆ ಸಿಗೋದಿಲ್ಲ" ಎಂದು ಮರೆತು ಕುಳಿತ ಕಲಬುರಗಿಯ (Kalaburagi News) ಕುಟುಂಬವೊಂದಕ್ಕೆ ಆಶ್ಚರ್ಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಕಳೆದ ಹನ್ನೆರಡು ವರ್ಷಗಳ ನಾಪತ್ತೆಯಾದ ವ್ಯಕ್ತಿಯೋರ್ವ ಧಿಡೀರ್ ಪ್ರತ್ಯಕ್ಷನಾಗುವ ಮೂಲಕ ಇಡಿ ಗ್ರಾಮವೇ (Kalaburagi Viral News) ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಹೌದು, ಕಲಬುರಗಿ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಿಂದ 12 ವರ್ಷಗಳ ಹಿಂದೆ ಕಾಣೆಯಾಗಿದ್ದ ಚಂದ್ರಕಾಂತ ಕಲವಾಣಿ ಹರವಾಳ ಎಂಬ 45 ವರ್ಷದ ವ್ಯಕ್ತಿ ಇದೀಗ ಪತ್ತೆಯಾಗಿದ್ದಾರೆ.
ಕೇರಳದಲ್ಲಿ ಪತ್ತೆ!
ಕೇರಳದ ಕೊಲ್ಲಂನ ಪಠಣಪುರಂನ ಗಾಂಧಿಭವನ ಸ್ವಯಂಸೇವಾ ಸಂಸ್ಥೆಯೊಂದು ಚಂದ್ರಕಾಂತ ಕಲವಾಣಿ ಹರವಾಳ ಅವರನ್ನು ಪತ್ತೆಹಚ್ಚಿ ಮತ್ತೆ ಕುಟುಂಬದವರೊಟ್ಟಿಗೆ ಬೆರೆಯುವಂತೆ ಮಾಡಿದೆ.
ಇದನ್ನೂ ಓದಿ: Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!
ಅಸ್ವಸ್ಥರಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿ
12 ವರ್ಷಗಳ ಹಿಂದೆ ಕಾಣೆಯಾದ ಚಂದ್ರಕಾಂತ ಅವರು ಕೊಲ್ಲಂನ ರಸ್ತೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಿದ್ದರು. ಅವರ ಬಗ್ಗೆ ಮಾಹಿತಿ ಪಡೆದ ಗಾಂಧಿನಗರ ಸಂಸ್ಥೆಯವರು ಕೌನ್ಸೆಲಿಂಗ್ ನಡೆಸಿ ಅವರ ವಿಳಾಸವನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ಕಲಬುರಗಿ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಿಂದ 12 ವರ್ಷಗಳ ಹಿಂದೆ ಕಾಣೆಯಾಗಿದ್ದ ಚಂದ್ರಕಾಂತ ಅವರು ಮರಳಿ ತಮ್ಮ ಕುಟುಂಬದವರನ್ನು ಸೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ
ಕುಟುಂಬದಲ್ಲಿ ಮತ್ತೆ ಮರುಕಳಿಸಿದ ಸಂತೋಷ!
ಇನ್ನು ಕೇರಳದಿಂದ ಚಂದ್ರಕಾಂತ ಅವರನ್ನು ಕರೆತಂದ ತಂಡ ನರೋಣಾ ಪೊಲೀಸರ ಸಮ್ಮುಖದಲ್ಲಿ ಅವರ ಪತ್ನಿ ಗುರುಬಾಯಿ ಅವರಿಗೆ ಒಪ್ಪಿಸಿದೆ. ಈ ಮೂಲಕ ಚಂದ್ರಕಾಂತ ಅವರ ಕುಟುಂಬದಲ್ಲಿ ಸಂತೋಷ ಮತ್ತೆ ಮರುಕಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ