• Home
 • »
 • News
 • »
 • kalburgi
 • »
 • Vegetable Price: ಕುಸಿದ ತರಕಾರಿ ದರ; ಇಲ್ಲಿದೆ ಇಂದಿನ ಮಾರುಕಟ್ಟೆಯ ಲೇಟೆಸ್ಟ್ ರೇಟ್

Vegetable Price: ಕುಸಿದ ತರಕಾರಿ ದರ; ಇಲ್ಲಿದೆ ಇಂದಿನ ಮಾರುಕಟ್ಟೆಯ ಲೇಟೆಸ್ಟ್ ರೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಬದನೆಕಾಯಿ, ಮೆಣಸಿನಕಾಯಿ, ದೊಣ್ಣಮೆಣಸಿನಕಾಯಿ, ಚವಳೆಕಾಯಿ, ಎಲೆಕೋಸು, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದೆ. ಈ ತರಕಾರಿಗಳಲ್ಲಿ ಯಾವುದೇ ದರ ಕಡಿಮೆಯಾಗಿಲ್ಲ.

 • Share this:

  ಕಲಬುರಗಿ: ನವರಾತ್ರಿ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಕಲಬುರಗಿಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಬದನೆಕಾಯಿ, ಮೆಣಸಿಕಾಯಿ ಹೊರತುಪಡಿಸಿದರೆ ಬಹುತೇಕ ತರಕಾರಿ ದರ ಇಳಿಮುಖವಾಗಿದೆ. ಹಬ್ಬ ಹರಿದಿನಗಳು ಬಂದ್ರೆ ತರಕಾರಿ ಬೆಲೆ (Vegetable Price)  ಗಗನಕೇರಿಬಿಡುತ್ತದೆ. ದುಬಾರಿ ರೇಟ್ ಗ್ರಾಹಕರನ್ನ ನಿಬ್ಬೆರಗಾಗಿಸುತ್ತದೆ. ಹಬ್ಬ ಮುಗಿಯುತ್ತಿದ್ದಂತೆ ಕಲಬುರಗಿಯಲ್ಲಿ (Kalaburagi News) ತರಕಾರಿ ಬೆಲೆಯಲ್ಲಿ ಕೂಂಚ ಇಳಿಕೆ ಕಂಡಿದೆ. ಈ ವಾರದ ಟೊಮೆಟೊ ಪ್ರತಿ ಕೆ.ಜಿಗೆ ರೂ.25ರಿಂದ 30ರವರೆಗೆ ಮಾರಾಟವಾಗುತ್ತಿದೆ. ಆಲೂಗಡ್ಡೆ , ಈರುಳ್ಳಿ ರೂ.35–40 ಇದ್ದರೆ. ಬೆಂಡೆಕಾಯಿ ಪ್ರತಿ ಕೆ.ಜಿಗೆ ರೂ.50ರಿಂದ ರೂ.60 ರಂತೆ ಮಾರಾಟವಾಗುತ್ತಿವೆ. ಬೀನ್ಸ್ ಕೂಡ ರೂ.80 ಇದೆ. ಹೂಕೋಸು ರೂ.60 ಕೆ.ಜಿ ಗೆ ಮಾರಾಟ ಮಾಡಲಾಗುತ್ತಿದೆ.


  ಇನ್ನು ಬದನೆಕಾಯಿ, ಮೆಣಸಿನಕಾಯಿ, ದೊಣ್ಣಮೆಣಸಿನಕಾಯಿ, ಚವಳೆಕಾಯಿ, ಎಲೆಕೋಸು, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದೆ. ಈ ತರಕಾರಿಗಳಲ್ಲಿ ಯಾವುದೇ ದರ ಕಡಿಮೆಯಾಗಿಲ್ಲ.


  ಕಲಬುರಗಿಯ ತರಕಾರಿ ಮಾರ್ಕೆಟ್ ದರ ಪಟ್ಟಿ

  ತರಕಾರಿಯ ಹೆಸರುಪ್ರತಿ ಕೆಜಿಗೆ ದರ ( ರೂ.ಗಳಲ್ಲಿ)
  ಈರುಳ್ಳಿ30-35
  ಟೊಮ್ಯಾಟೊ25-30
  ಬದನೆಕಾಯಿ50-60
  ಆಲೂಗಡ್ಡೆ30-35
  ಮೆಣಸಿನಕಾಯಿ60-70
  ಬೆಂಡೆಕಾಯಿ50-60

  ಈ ತರಕಾರಿಗಳ ಬೆಲೆಯನ್ನೂ ಒಮ್ಮೆ ಗಮನಿಸಿ
  ತರಕಾರಿಯ ಹೆಸರುಪ್ರತಿ ಕೆಜಿಗೆ ದರ ( ರೂ.ಗಳಲ್ಲಿ)
  ದೊಡ್ಡಮೆಣಸಿನಕಾಯಿ50-55
  ಚವಳೆಕಾಯಿ40-50
  ಬೀನ್ಸ್80-85
  ಹೀರೆಕಾಯಿ40-50
  ಎಲೆಕೋಸು40-50
  ಸೌತೆಕಾಯಿ40-50
  ಗಜ್ಜರಿ40-50
  ಹೂಕೋಸು60-70

  ಇದನ್ನೂ ಓದಿ: Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!


  ಸೊಪ್ಪುಗಳ ದರ ಹೀಗಿದೆ ನೋಡಿ
  ಪಾಲಕ್‌, ಪುಂಡಿ, ರಾಜಗಿರಿ ರೂ. 10ಗೆ ಒಂದು ಕಟ್ಟು, ರೂ. 20 ಕ್ಕೆ 3 ಕಟ್ಟು ಸೊಪ್ಪಿನಂತೆ ದರ ನಿಗದಿ. ಕೊತ್ತಂಬರಿ ರೂ.20–25 ಒಂದು ಕಟ್ಟು, ಪುದೀನಾ ರೂ. 15 ಒಂದು ಕಟ್ಟಿನಂತೆ ದರ ನಿಗದಿ ಮಾಡಲಾಗಿದೆ.


  ಇದನ್ನೂ ಓದಿ: Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!

  ಹಬ್ಬ ಮುಗಿಯುತ್ತಿದ್ದಂತೆ ಕಲಬುರಗಿ ಎಲ್ಲಿ ತರಕಾರಿ ಬೆಲೆ ಕೂಡ ಕುಸಿದಿದ್ದು, ಗ್ರಾಹಕರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: