• Home
  • »
  • News
  • »
  • kalburgi
  • »
  • Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್

Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಭಂಡಾರದ ಓಕುಳಿಯಲ್ಲಿ ಮಿಂದೆದ್ದ ಭಕ್ತರು ದೇವಸ್ಥಾನದ ಆವರಣದಲ್ಲಿರುವ ಕಂಬಕ್ಕೆ 10 ರಿಂದ 15 ಅಡಿ ಉದ್ದವಾದ ಸರಪಳಿ ಬಿಗಿದು ಅದನ್ನು ಹರಿಯುವ ಮೂಲಕ ಭಕ್ತಿ ಪರಕಾಷ್ಟೆಯನ್ನ ಮೆರೆದ್ರು.

  • Share this:

    ಕಲಬುರಗಿ: ಅದೇನು ಸಂಭ್ರಮ, ಅದೇನು ಸಡಗರ! ರಣ ಭಯಂಕರವಾದ ಆವೇಶದೊಂದಿಗೆ ಅದೇನು ಸಾಹಸ. ಸರಪಳಿ ಜೊತೆಗಿನ ಈ ಸರಸವೇ ಕಲಬುರಗಿಯ ಸುಪ್ರಸಿದ್ದ ಪುಣ್ಯಕ್ಷೇತ್ರದಲ್ಲಿ ಒಂದಾದ ಹಳಕರ್ಟಿ ಶ್ರೀವೀರಭದ್ರೇಶ್ವರ ರಥೋತ್ಸವ (Veerabhadreshwara Temple Fair Rathotsav) ವಿಶೇಷ. ಹೀಗೆ ಜಟಿಲವೆನಿಸೋ ಸರಪಳಿಯನ್ನು ಕ್ಷಣಾರ್ಧದಲ್ಲಿ ಭಕ್ತರು ತುಂಡರಿಸಿ ಬಿಡ್ತಾರೆ, ನೆರೆದ ಭಕ್ತರೆಲ್ಲ (Veerabhadreshwara Temple Devotees) ಕೇಕೆ ಹಾಕಿ ಸಂಭ್ರಮಿಸ್ತಾರೆ. ಕಲಬುರಗಿಯ (Kalaburagi News) ಶ್ರೀವೀರಭದ್ರೇಶ್ವರ ರಥೋತ್ಸವ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.


    ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು, ತೇರಿಗೆ ಉತ್ತತ್ತಿ ಮತ್ತು ಬಾಳೆ ಹಣ್ಣು ಎಸೆದು ದೇವರಿಕೆ ಹರಕೆ ಸರ್ಮಪಿಸಿದರು. ಇನ್ನು ಸಂಪ್ರದಾಯದಂತೆ ಗ್ರಾಮದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸರಪಳಿ ಹರಿಯಲಾಯ್ತು. ಭಂಡಾರದ ಓಕುಳಿಯಲ್ಲಿ ಮಿಂದೆದ್ದ ಭಕ್ತರು ದೇವಸ್ಥಾನದ ಆವರಣದಲ್ಲಿರುವ ಕಂಬಕ್ಕೆ 10 ರಿಂದ 15 ಅಡಿ ಉದ್ದವಾದ ಸರಪಳಿ ಬಿಗಿದು ಅದನ್ನು ಹರಿಯುವ ಮೂಲಕ ಭಕ್ತಿ ಪರಕಾಷ್ಟೆಯನ್ನ ಮೆರೆದ್ರು.


    ಇದನ್ನೂ ಓದಿ: Custard Apple: ತನ್ನಿಂದ ತಾನೇ ಬೆಳೆಯುತ್ತೆ ಸೀತಾಫಲ! ರುಚಿಯೂ ಸೂಪರ್ ಟೇಸ್ಟಿ


    ಜಯಘೋಷ ಮೊಳಗಿಸುತ್ತ ತೇರು ಎಳೆದ್ರು
    ಆ ನಂತರ ನಡೆದ ಕುಂಭ ಮೆರವಣಿಗೆ ಹಾಗೂ ಭಕ್ತಿಯ ಚೌಡಮ್ಮ ದೇವಿಯ ಆಚರಣೆಗಳು ಭಕ್ತರ ಉತ್ಸಾಹವನ್ನ ಮತ್ತಷ್ಟು ಇಮ್ಮಡಿಗೊಳಿಸಿತು. ಜಾತ್ರೆಯ ಪ್ರತೀತಿಯಂತೆ ಹತ್ತಕ್ಕೂ ಹೆಚ್ಚು ಅರ್ಚಕರ ಸಹಕಾರದಡಿ ರಥಕ್ಕೂ ವಿಶೇಷ ಪೂಜೆ ಸಲ್ಲಿಸಿದ್ರು. ಶ್ರೀಗಳು ರಥ ಪ್ರವೇಶ ಮಾಡಿದ ಬಳಿಕ ಶಂಖನಾದ ಮೊಳಗಿತು. ಭಕ್ತರು ಜಯಘೋಷ ಮೊಳಗಿಸುತ್ತ ತೇರು ಎಳೆದ್ರು. ನೆರೆದ ಭಕ್ತರು ರಥಕ್ಕೆ ಉತ್ತುತ್ತಿ ಎಸೆದು ಕೃತಾರ್ಥರಾದರು.


    ಇದನ್ನೂ ಓದಿ: Pink Guava: ಪಿಂಕ್ ಪೇರಳೆ ಬೆಳೆದು ದಿನಕ್ಕೆ 2 ಸಾವಿರ ಆದಾಯ!


    ಪುನೀತರಾದ ಭಕ್ತರು
    ಹೀಗೆ ದೇವಸ್ಥಾನದ ಸಂಪ್ರದಾಯದಂತೆ ಸಂಭ್ರಮದಿಂದ ವಿಶೇಷ ಪೂಜೆ, ಕೈಂಕರ್ಯಗಳನ್ನ ನೆರವೇರಿಸಲಾಯ್ತು. ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯರಾದರು. ಭಕ್ತಿಯಿಂದ ವೀರಭದ್ರೇಶ್ವರನಿಗೆ ಕೈಮುಗಿದು ಪುನೀತರಾದ್ರು.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: