ಕಲಬುರಗಿ: ಒಂದಕ್ಕಿಂತ ಒಂದು ಮುದ್ದಾದ ನಾಯಿ ಮರಿಗಳು, ಸಖತ್ ಕ್ಯೂಟ್ ಕ್ಯೂಟ್ ಆಗಿ ಕಾಣೋ ವಿವಿಧ ತಳಿಯ ಶ್ವಾನಗಳು. ಎಲ್ಲರನ್ನ ನಿಬ್ಬೆರಗಾಗುವಂತೆ (Kalyana Karnataka Utsav) ಮಾಡಿತು ನೋಡಿ ಪೊಲೀಸ್ ಡಾಗ್ ಸ್ಕ್ವಾಡ್. ಈ ಎಲ್ಲ ದೃಶ್ಯಗಳು ಕಂಡು ಬಂದಿತು ನೋಡಿ ಕಲಬುರಗಿಯಲ್ಲಿ ನಡೆದ (Dog Show) ಶ್ವಾನ ಪ್ರದರ್ಶನದಲ್ಲಿ.
ಯೆಸ್, ಕಲಬುರಗಿಯ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಗುಲ್ಬರ್ಗಾ ಯೂನಿವರ್ಸಿಟಿಯ ಒಳಾಂಗಣ ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನ ನಾಗರಿಕರ ಮನಗೆದ್ದಿತು. ಕ್ಯೂಟ್ ಕ್ಯೂಟ್ ಆಗಿರೋ ನಾಯಿ ಮರಿಗಳು ತಮ್ಮ ಮಾಲೀಕರ ಜೊತೆಗೆ ಮೈದಾನಕ್ಕೆ ಆಗಮಿಸಿ, ನೆರೆದವರ ಮುಂದೆ ತಾನೆಷ್ಟು ಸ್ಮಾರ್ಟ್, ತಾನೆಷ್ಟು ಫಿಟ್ ಅನ್ನೋದನ್ನ ತೋರಿಸಿಕೊಟ್ಟವು.
ಇನ್ನು ಪೊಲೀಸ್ ಇಲಾಖೆಯ ಶ್ವಾನ ದಳದಿಂದ ನಡೆದ ಡಾಗ್ ಶೋ ಅಂತೂ ಕಳೆಗಟ್ಟಿತ್ತು. ಶ್ವಾನದಳದ ನಾಯಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅನ್ನೋದನ್ನ ಜನ ಕಣ್ತುಂಬಿಕೊಂಡರು. ಕ್ರಿಮಿನಲ್ಗಳನ್ನ ಸೆರೆ ಹಿಡಿಯುವುದು, ಮಾಲೀಕರ ವಸ್ತುಗಳಿಗೆ ಕಾವಲುಗಾರನಾಗಿರುವುದು, ಸ್ಫೋಟಕದಂತಹ ವಸ್ತುಗಳನ್ನ ಪತ್ತೆ ಹಚ್ಚುವ ಕಸರತ್ತುಗಳು ಹೊಸ ಅನುಭವ ನೀಡಿದವು. ಇನ್ನು ಪೊಲೀಸ್ ಇಲಾಖೆಯ ತರಬೇತಿ ಪಡೆದ ನಾಯಿಗಳು ಎಲ್ಲಾ ಟಾಸ್ಕ್ ಪೂರೈಸಿ ಜನರ ಚಪ್ಪಾಳೆ ಪಡೆದವು.
ಇದನ್ನೂ ಓದಿ: Kalaburagi: ಆಕಾಶದಿಂದ ಕಲಬುರಗಿ ನೋಡಿ! ಕಲಬುರಗಿಯಲ್ಲಿ ಮೋಜಿನ ಹೆಲಿಕಾಪ್ಟರ್ ರೈಡ್!
150ಕ್ಕೂ ಹೆಚ್ಚು ನಾಯಿಗಳು!
ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ನಡೆದ ಡಾಗ್ ಶೋನಲ್ಲಿ ಕರ್ನಾಟಕದ ಮುಧೋಳ, ಲ್ಯಾಬ್ರಡಾಲ್, ಬಿಗಲ್ , ಚೀನಾ ದೇಶದ ಚೌಚೌ, ಡೀಗಲ್ ಫಿಟ್ಬುಲ್, ಸೇರಿದಂತೆ 28ಕ್ಕೂ ಅಧಿಕ ಜಾತಿಯ 150ಕ್ಕೂ ಅಧಿಕ ಶ್ವಾನಗಳು ಭಾಗಿಯಾಗಿದ್ದವು.
ನಗದು ಬಹುಮಾನದ ಆಕರ್ಷಣೆ
ಇನ್ನು ಈ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ ನಾಯಿಗಳಿಗೆ ಪ್ರಶಸ್ತಿಗಳನ್ನು ಕೂಡ ನೀಡಲಾಯಿತು. ಪ್ರಥಮ 20 ಸಾವಿರ, ದ್ವಿತೀಯ 15 ಸಾವಿರ ಹಾಗೂ ತೃತೀಯ ಬಹುಮಾನ 5ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಇದನ್ನೂ ಓದಿ: Positive Story: ಈ ವಿಶೇಷ ಚೇತನರ ಬದುಕೇ ಸ್ಪೂರ್ತಿ, ಎಲ್ರಿಗೂ ಮಾದರಿ ಕಲಬುರಗಿಯ ನಾಗೇಂದ್ರ
ಒಟ್ಟಿನಲ್ಲಿ ಗುಲ್ಬರ್ಗ ವಿವಿಯ ಒಳಾಂಗಣ ಮೈದಾನದಲ್ಲಿ ನಡೆದ ಡಾಗ್ ಶೋ ನಾಯಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ಕಲ್ಪಿಸಿದ್ದು ಸುಳ್ಳಲ್ಲ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ