• Home
 • »
 • News
 • »
 • kalburgi
 • »
 • Aiwan Shahi Palace: ಈ ಅರಮನೆ ಒಳಗಿಂದ ರೈಲು ಹೋಗ್ತಿತ್ತಂತೆ! ನಿಜಾಮರ ಪ್ಯಾಲೆಸ್ ಇಂದು ಹೀಗಿದೆ

Aiwan Shahi Palace: ಈ ಅರಮನೆ ಒಳಗಿಂದ ರೈಲು ಹೋಗ್ತಿತ್ತಂತೆ! ನಿಜಾಮರ ಪ್ಯಾಲೆಸ್ ಇಂದು ಹೀಗಿದೆ

ಆ ಕಾಲದಲ್ಲೇ ಡೆಕ್ಕನ್  ಎಂಬ ಸ್ವಂತ ಎಕ್ಸ್​ಪ್ರೆಸ್ ರೈಲನ್ನ ನಿಜಾಮ ದೊರೆಗಳು ಹೊಂದಿದ್ರು. ಹೈದ್ರಾಬಾದ್​ನಿಂದ ನೇರವಾಗಿ ಈ ಅತಿಥಿಗೃಹಕ್ಕೆ ರೈಲು ಹಳಿಯನ್ನು ಅಳವಡಿಸಲಾಗಿತ್ತು.

"ಆ ಕಾಲದಲ್ಲೇ ಡೆಕ್ಕನ್  ಎಂಬ ಸ್ವಂತ ಎಕ್ಸ್​ಪ್ರೆಸ್ ರೈಲನ್ನ ನಿಜಾಮ ದೊರೆಗಳು ಹೊಂದಿದ್ರು. ಹೈದ್ರಾಬಾದ್​ನಿಂದ ನೇರವಾಗಿ ಈ ಅತಿಥಿಗೃಹಕ್ಕೆ ರೈಲು ಹಳಿಯನ್ನು ಅಳವಡಿಸಲಾಗಿತ್ತು. "

ಆ ಕಾಲದಲ್ಲೇ ಡೆಕ್ಕನ್  ಎಂಬ ಸ್ವಂತ ಎಕ್ಸ್​ಪ್ರೆಸ್ ರೈಲನ್ನ ನಿಜಾಮ ದೊರೆಗಳು ಹೊಂದಿದ್ರು. ಹೈದ್ರಾಬಾದ್​ನಿಂದ ನೇರವಾಗಿ ಈ ಅತಿಥಿಗೃಹಕ್ಕೆ ರೈಲು ಹಳಿಯನ್ನು ಅಳವಡಿಸಲಾಗಿತ್ತು.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ವಿಶಿಷ್ಟವಾದ ವಿನ್ಯಾಸ, ದೊಡ್ಡದಾದ ಪ್ರವೇಶ ದ್ವಾರ, ಹಚ್ಚ ಹಸಿರಿನ ಪರಿಸರದ ನಡುವೆ ನಿಂತಿದೆ ಭವ್ಯ ಕಟ್ಟಡ. ಸೀದಾ ನೀವೊಂದಿಷ್ಟು ವರ್ಷ ಟೈಮ್ ಟ್ರಾವೆಲ್ ಮಾಡಿ ಇತಿಹಾಸಕ್ಕೆ ಹೋದ್ರೆ ಇದೇ ಗೆಸ್ಟ್ ಹೌಸ್ (Guest House) ಒಳಗಿಂದ ರೈಲು ಚುಕುಬುಕು ಅಂತಾ ಹೋಗ್ತಿತ್ತಂತೆ! ಹೌದು, ಇದು ನಂಬಲೂ ಅಚ್ಚರಿ ಅನಿಸಿದ್ರೂ ನಿಜ! ಇದು ಕಲಬುರಗಿಯಲ್ಲಿರುವ ಐವಾನ್ ಶಾಹಿ ಅತಿಥಿ ಗೃಹ (Aiwan Shahi Guest House) ಇದು. ಅಸಲಿಗೆ ಇದು ನಿಜಾಮರ ಕಾಲದ (Nizam) ಅರಮನೆಯಾಗಿತ್ತಂತೆ


  ಈ ಆಕರ್ಷಕ ವಿನ್ಯಾಸ ಹೊಂದಿರುವ ಕಟ್ಟಡದಲ್ಲಿ ನಿಜಾಮರು ಬದುಕಿದ್ರಂತೆ. ಇದು ಐವಾನ್–ಎ–ಶಾಹಿ ಅರಮನೆ ಎಂದೇ ಆಗ ಖ್ಯಾತಿಯಾಗಿತ್ತು. ಈ ವಿಶಿಷ್ಟ ಶೈಲಿಯ ಕಟ್ಟಡ ಕಟ್ಟಿದವರು ನಿಜಾಮರ ಆಳ್ವಿಕೆಯ 6ನೇ ಮೀರ್ ಮೈಬೂಬ್ ಅಲಿ ಖಾನ್ ಅಂತಾರೆ ಇತಿಹಾಸಕಾರರು.


  ಇದನ್ನೂ ಓದಿ:Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!


  ಆ ಕಾಲದಲ್ಲೇ ಡೆಕ್ಕನ್  ಎಂಬ ಸ್ವಂತ ಎಕ್ಸ್​ಪ್ರೆಸ್ ರೈಲನ್ನ ನಿಜಾಮ ದೊರೆಗಳು ಹೊಂದಿದ್ರು. ಹೈದ್ರಾಬಾದ್​ನಿಂದ ನೇರವಾಗಿ ಈ ಅತಿಥಿಗೃಹಕ್ಕೆ ರೈಲು ಹಳಿಯನ್ನು ಅಳವಡಿಸಲಾಗಿತ್ತು. ಹೈದರಾಬಾದ್​ನಿಂದ ನೇರವಾಗಿ ಈ ಅರಮನೆಗೆ ಸಂಪರ್ಕವಿತ್ತಂತೆ. ವಿಶೇಷ ಅಂದ್ರೆ ಈ ಅರಮನೆ ಒಳಭಾಗದಲ್ಲೇ ಅಂದಿನ ರೈಲ್ವೇ ಟ್ರ್ಯಾಕ್ ಇತ್ತು ಅನ್ನೋದಕ್ಕೆ ಇಂದಿಗೂ ಅಲ್ಲಿರೋ ರೈಲ್ವೇ ಹಳಿಯೇ ಸಾಕ್ಷಿ ಹೇಳ್ತಿದೆ.


  ಇದನ್ನೂ ಓದಿ: Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!


  AIWAN-E-SHAHI GUEST House GULBARGA IB
  ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಆಗೆಲ್ಲ ಈ ಅರಮನೆಯಲ್ಲೇ ರಾಜ ಮಹಾರಾಜರು ವಿಶ್ರಾಂತಿ ತಗೊಳ್ತಿದ್ರಂತೆ. ಆದ್ರೆ ಈಗಲೂ ಸಹ ಈ ಅತಿಥಿ ಗೃಹದಲ್ಲಿ ಉಳಿಯೋಕೆ ಕೇವಲ ಮಂತ್ರಿಗಳಿಗೆ ಮಾತ್ರ ಅವಕಾಶ ಕೊಡಲಾಗ್ತಿದೆ. ಒಟ್ಟಾರೆ ಗೆಸ್ಟ್ ಹೌಸ್ ಒಳಗೇ ರೈಲು ಹಳಿ ಇದ್ದ ಅತಿಥಿ ಗೃಹ ಈಗಲೂ ಭಾರೀ ಕುತೂಹಲ ಹುಟ್ಟಿಸುವಂತಿದೆ. ನೀವೂ ಕಲಬುರಗಿಗೆ ಬಂದ್ರೆ ಈ ಗೆಸ್ಟ್ ಹೌಸನ್ನ ಹೊರಗಿಂದಾದ್ರೂ ನೋಡೋದನ್ನ ಮರೀಬೇಡಿ.


  ವರದಿ: ಶ್ರೀಕಾತ ಬಿರಾಳ, ನ್ಯೂಸ್  18 ಕನ್ನಡ ಡಿಜಿಟಲ್  ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: