Kalaburgi Students: ಒಂದಲ್ಲ, ಎರಡೂ ಕೈಯಲ್ಲಿ ಬರೀತಾರೆ ಇಲ್ಲಿನ ಸ್ಟೂಡೆಂಟ್ಸ್!

ಒಂದು ಕೈಯ್ಯಲ್ಲಿ ಬರೆಯುವುದು ಕಾಮನ್.‌ ಎರಡು ಕೈಯ್ಯಲ್ಲಿ ಬರೆಯುವುದು ಅಪರೂಪ. ಆದರೆ, ಇಲ್ಲೊಂದು ಇಡೀ ಶಾಲೆಗೆ ಶಾಲೆಯೇ ಎರಡೂ ಕೈಯ್ಯಲ್ಲಿ ಬರವಣಿಗೆ ಬರೆಯುವ ಮಕ್ಕಳನ್ನು ಹೊಂದಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

 • Share this:
  ಕಲಬುರಗಿ: ಸಾಮಾನ್ಯವಾಗಿ ಒಂದೇ ಕೈಯಿಂದ ಅಕ್ಷರಗಳನ್ನು ಬರೆಯೋದನ್ನು ನೋಡಿದ್ದೇವೆ. ಆದರೆ ಈ ಶಾಲೆ ಮಕ್ಕಳು (School Students) ಎರಡೂ ಕೈಯ್ಯಲ್ಲಿ ಬರೆಯಬಲ್ಲರು. ಹೌದು, ಹೀಗೊಂದು ಎರಡು ಕೈಯಿಂದ ಅಕ್ಷರಗಳನ್ನು ಬರೆಯೋ (Two Hand Writing) ಮೂಲಕ ಅಚ್ಚರಿ ಮೂಡಿಸುವಂತ ಶಾಲೆ ಇರೋದು ಕಲಬುರಗಿ ತಾಲೂಕಿನ ಉಪಳಾಂವ ಗ್ರಾಮದಲ್ಲಿ.  ಕಲಬುರಗಿಯ (Kalaburagi) ಶ್ರೀರಾಮ ಕನ್ನಡ ಕಾನ್ವೆಂಟ್ ಖಾಸಗಿ ಶಾಲೆಯೇ ಇಂತಹ ಅದ್ಭುತ ಪ್ರತಿಭೆಗಳನ್ನ ಹೊಂದಿರೋ ಶಾಲೆ.

  ಎರಡೂ ಕೈಯ್ಯಲ್ಲಿ ಚಾಕ್ ಪೀಸ್!
  ಒಂದೇ ಕೈಯ್ಯಲ್ಲಿ ಬರೆಯಬಹುದಾದ ಅಕ್ಷರಗಳನ್ನು ಇಲ್ಲಿನ ಮಕ್ಕಳು ಮಾತ್ರ ಎರಡು ಕೈಗಳಿಂದಲೂ ಬರೆಯೋ ಮೂಲಕ ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಕೇವಲ ಒಂದೋ ಎರಡು ಮಕ್ಕಳು ಮಾತ್ರವಲ್ಲ, ಎಲ್​ಕೆಜಿ ಮಕ್ಕಳಿಂದ ಹಿಡಿದು ಎಲ್ಲಾ ಮಕ್ಕಳು ಕೂಡಾ ಎರಡೂ ಕೈಗಳಿಂದಲೂ ಬರೆಯುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತಾರೆ. ಎಬಿಸಿಡಿ, ಅಆಇಈ ಹೀಗೆ ಕನ್ನಡ ಮತ್ತು ಇಂಗ್ಲೀಷ್ ನ ಯಾವುದೇ ಶಬ್ದಗಳಿರಲಿ ಎರಡು ಕೈಯಿಂದಲೂ ಲೀಲಾಜಾಲವಾಗಿ ಬರೆದು ಎದುರಿಗಿದ್ದವರನ್ನ ಹೌಹಾರುವಂತೆ ಮಾಡುತ್ತಾರೆ.

  ಉಲ್ಟಾ ಬರವಣಿಗೆ!
  ಇಲ್ಲಿಯ ಮಕ್ಕಳಿಗೆ ಡಿಫರೆಂಟ್ ಆಗಿರುವ ವಿಷಯಗಳನ್ನು ನೀಡಿದರೂ ಏಕಕಾಲಕ್ಕೆ ಎರಡೂ ಕೈಯಿಂದಲೇ ಬರೆಯುತ್ತಾರೆ. ಇಂತಹ ವಿಶೇಷವಾದ ಕಲೆ ಇಲ್ಲಿನ ಮಕ್ಕಳಲ್ಲಿದೆ. ಯಾವ ಮಕ್ಕಳು ಎ,ಬಿ,ಸಿ,ಡಿ ಪೂರ್ತಿಗೊಳಿಸುತ್ತಾರೆಯೋ ಆ ಮಕ್ಕಳಿಗೆ ಎಡ ಕೈಯಿಂದ ಉಲ್ಟಾ ಎ,ಬಿ,ಸಿ,ಡಿ ಬರೆಯಲು ಪ್ರ್ಯಾಕ್ಟಿಸ್ ಮಾಡಿಸುತ್ತಾರೆ.

  ಇದನ್ನೂ ಓದಿ: Budga Jangama Community: ಊರೂರು ಅಲೆದಾಡುವ ಬುಡ್ಗ ಜಂಗಮರ ಕಥೆ ಕೇಳಿ!

  ಇನ್ನು ಕನ್ನಡ, ಇಂಗ್ಲೀಷ್ ಶಬ್ದ ಬಲ್ಲ ವಿದ್ಯಾರ್ಥಿಗಳಿಗೆ ಉಲ್ಟಾ ಶಬ್ದಗಳನ್ನು ಎಡಗೈಯಿಂದ ಬರೆಸುತ್ತಾರೆ. ಹೀಗಾಗಿ, ಇಲ್ಲಿನ ಎಲ್ಲಾ ಮಕ್ಕಳಿಗೂ ಕೂಡಾ ಎರಡೂ ಕೈಯಿಂದ ಬರೆಯೋದು ಎಂದ್ರೆ ನೀರು ಕುಡಿದಷ್ಟು ಸುಲಭ.

  ಆಟದೊಂದಿಗೆ ಪಾಠ
  ಇಲ್ಲಿ ಒಂದನೇ ತರಗತಿಯಿಂದ 8ನೇ ತರಗತಿವರೆಗೂ ಇದ್ದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನು ಇಲ್ಲಿ 'ಆಟದೊಂದಿಗೆ ಪಾಠ' ಎನ್ನುವ ಕಲ್ಪನೆಯಡಿ ಪರಿಸರದ ಜೊತೆ ಬೆರೆತು ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ.

  ಇದನ್ನೂ ಓದಿ: North Karnataka Film: ಈತ ಗಿರಿನಾಡ್ ಪ್ರೇಮಿ! ಉತ್ತರ ಕರ್ನಾಟಕದ ಪ್ರತಿಭೆಗಳ ಹೊಸ ಸಿನಿಮಾ

  ಶಾಲೆ ಬಗ್ಗೆ ರಿಸರ್ಚ್!
  ಒಟ್ಟಾರೆಯಾಗಿ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಮಕ್ಕಳ ಸಾಧನೆ ಅಚ್ಚರಿ ಮೂಡಿಸಿದ್ದಲ್ಲದೇ ರಾಜ್ಯದಲ್ಲಿಯೇ ಮಾದರಿ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಶಾಲೆಯ ಕುರಿತಾಗಿ ಹರಿಯಾಣ ಹಾಗೂ ಮಹಾರಾಷ್ಟ್ರ ಪ್ರಖ್ಯಾತ ವಿಶ್ವವಿದ್ಯಾಲಯ ರಿಸರ್ಚ್ ಕೂಡ ಮಾಡಿವೆ. ಹೀಗೆ ಕನ್ನಡ ಶಾಲೆಯೊಂದು ತನ್ನ ವಿಭಿನ್ನ ಶೈಲಿಯ ಪ್ರಯೋಗದಿಂದ ಮನೆ ಮಾತಾಗುತ್ತಿರುವುದು ಸಂತಸದ ವಿಚಾರವೇ ಸರಿ.

  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
  Published by:ಗುರುಗಣೇಶ ಡಬ್ಗುಳಿ
  First published: