• Home
  • »
  • News
  • »
  • kalburgi
  • »
  • Kalaburagi: ಸಗಣಿಯಿಂದ ಹಣತೆ! ಬೆಳಗಲಿವೆ 2 ಲಕ್ಷಕ್ಕೂ ಹೆಚ್ಚು ದೀಪಗಳು!

Kalaburagi: ಸಗಣಿಯಿಂದ ಹಣತೆ! ಬೆಳಗಲಿವೆ 2 ಲಕ್ಷಕ್ಕೂ ಹೆಚ್ಚು ದೀಪಗಳು!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇತ್ತ ಗೋ ರಕ್ಷಣೆನೂ ಆಯ್ತು, ಅತ್ತ ಸಂಪಾದನೆನೂ ಆಯ್ತು! ಸಾರ್ಥಕ ಭಾವದಲ್ಲಿ ಬದುಕು ಕಂಡುಕೊಂಡಿರೋ ಕೃಷ್ಣ ಕೆಂಭಾವಿಯವರು ನಿಜಕ್ಕೂ ರೋಲ್ ಮಾಡಲ್ ಆಗಿರೋದಂತೂ ಖರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ:  ಮಣ್ಣಿನ ಹಣತೆ ಕೇಳಿದ್ದೀವಿ. ಆದ್ರೆ ಇಲ್ಲಿ ಹೀಗೆ ಚಂದವಾಗಿ ಬೆಳಗೋಕೆ ತಯಾರಾಗಿರೋದು ಮಣ್ಣಿನ ಹಣತೆಯಲ್ಲ, ಸಗಣಿಯ ಹಣತೆ. ಅರೇ! ಸಗಣಿಯಿಂದಲೂ ಹಣತೆ (Diya Frome Cow Dung) ತಯಾರಿಸಬಹುದಾ ಅಂತ ಆಶ್ಚರ್ಯಪಡೋ ಥರ ಮಾಡಿದವರು ಕಲಬುರಗಿಯ ಓರ್ವ ನಿವೃತ್ತ ಶಿಕ್ಷಕನ ಗೋ ಪ್ರೀತಿ! ಹಸುಗಳನ್ನೇ ಅವಲಂಬಿಸಿ ಕಲಬುರಗಿ ನಗರದ (Kalaburagi News) ಕೃಷ್ಣ ಕೆಂಭಾವಿಯವರು 60ರಷ್ಟು ವಿಧದ ಉತ್ಪನ್ನಗಳನ್ನ ತಯಾರಿಸ್ತಿದ್ದಾರೆ. ಗೋವಿನ ಮೇಲಿನ ಪ್ರೀತಿಗೆ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಗೋಸೇವೆ (Goseva) ಆರಂಭಿಸಿದವರಿವರು! ಈಗಂತೂ ಕಲಬುರಗಿಯಲ್ಲಿ ಸಗಣಿಯಿಂದ ಹಣತೆ, ಧೂಪ, ವಿಭೂತಿ, ಗೋಮೂತ್ರದಿಂದ ಅರ್ಕ ತಯಾರಿಸಿ ಮಾರಾಟ ಮಾಡ್ತಿದ್ದಾರೆ.


    ದೀಪಾವಳಿ ಹಬ್ಬ ಹತ್ತಿರ ಬಂದ್ರಂತೂ ಇವರು ತಯಾರಿಸೋ ಹಣತೆಗೆ ಎಲ್ಲಿಂದ ಡಿಮ್ಯಾಂಡ್. ಆಕಳಿನ ಸಗಣಿಯನ್ನ ಪುಡಿ ಮಾಡಿ ಅದರಲ್ಲಿ ತುಪ್ಪವನ್ನು ಕಲಸಿ ಹಣತೆಯನ್ನು ತಯಾರಿಸುತ್ತಾರೆ. ಹೀಗೆ ತಯಾರಿಸುವ ಹಣತೆ ದೀಪದ ಎಣ್ಣ ಜೊತೆ ತಾನೂ ಉರಿದುಹೋಗುತ್ತೆ.


    ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


    ದೀಪಾವಳಿಯಲ್ಲಿ ಏನಿಲ್ಲ ಅಂದ್ರೂ ಕನಿಷ್ಟ 2 ಲಕ್ಷ ಹಣತೆಗಳನ್ನು ಕೃಷ್ಣ ಕೆಂಭಾವಿಯವರು ಮಾರಾಟ ಮಾಡ್ತಾರೆ. ಸೋಶಿಯಲ್ ಮೀಡಿಯಾ ಹಾಗೂ ಆನ್ಲೈನ್ ಮೂಲಕವೂ ಹಣತೆ ಮಾರಾಟಕ್ಕೆ ಇಳಿದಿರೋ ಇವರು ಪೆಯೋನಿಧಿ ಎಂಬ ಗೋಶಾಲೆಯನ್ನೂ ಆರಂಭಿಸಿದ್ದಾರೆ. ನೂರಾರು ದನಕರುಗಳಿಗೆ ಆಶ್ರಯ ನೀಡಿದ್ದಾರೆ. ಇನ್ನೂ ವಿಶೇಷ ಅಂದ್ರೆ ಶಿಕ್ಷಕಿಯಾಗಿದ್ದ ಕೃಷ್ಣ ಅವ್ರ ಪತ್ನಿಯೂ ರಾಜೀನಾಮೆ ನೀಡಿ ಇದೇ ಕಾಯಕಕ್ಕೆ ಜೊತೆಗೂಡಿದ್ದಾರೆ.


    ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


    ಇತ್ತ ಗೋ ರಕ್ಷಣೆನೂ ಆಯ್ತು, ಅತ್ತ ಸಂಪಾದನೆನೂ ಆಯ್ತು! ಸಾರ್ಥಕ ಭಾವದಲ್ಲಿ ಬದುಕು ಕಂಡುಕೊಂಡಿರೋ ಕೃಷ್ಣ ಕೆಂಭಾವಿಯವರು ನಿಜಕ್ಕೂ ರೋಲ್ ಮಾಡಲ್ ಆಗಿರೋದಂತೂ ಖರೆ.


    ವರದಿ:ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: