Kalaburagi: ಯಾವುದನ್ನೂ ವೇಸ್ಟ್ ಅನ್ಬೇಡಿ! ಇವ್ರ ಕೈಗೆ ಕೊಟ್ರೆ ಕರಾಮತ್ತೇ ಆಗುತ್ತೆ!

ಮನೆಯಲ್ಲಿ ಅಲಂಕಾರ ಮಾಡುವುದಕ್ಕಾಗಿ ಅಷ್ಟೇನು ಕಷ್ಟವಿಲ್ಲ ಅನ್ನೋದನ್ನ ಕಲಬುರಗಿಯ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಬರೇ ವೇಸ್ಟೇಜ್ ವಸ್ತುಗಳಿಂದಲೇ ಅದೇನು ಅದ್ಭುತ ಮಾಡಿದ್ದಾರೆ ಅಂತೀರಾ? ನೀವೇ ನೋಡಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಕಲಬುರಗಿ: ಮನೆನಾ ಕಲರ್​ಫುಲ್ ಮಾಡಲು ಅದೆಷ್ಟು ಕಷ್ಟಪಡ್ತೀವಿ ಅಲ್ವ? ಅದೆಷ್ಟೋ ಶಾಪಿಂಗ್ ಮಾಲ್​ಗೂ ಹೋಗ್ತೀವಿ ಅಲ್ವ? ಡಿಸೈನ್ ಡಿಸೈನ್ ಅಲಂಕಾರಕ್ಕೆ ನೂರಾರು ಬಾರಿ ತಡಕಾಡ್ತೀವಿ ಅಲ್ವ? ಆದ್ರೆ ಈ ಮನೇಲಿ ಕಾಣ್ತಿರೋ ಯಾವೊಂದು ಅಲಂಕಾರಿಕ ವಸ್ತುಗಳು ಕೂಡಾ ಮಾರುಕಟ್ಟೆಯಿಂದ ಖರೀದಿಸಿ ತಂದಿಲ್ಲ. ಬದಲಿಗೆ ಎಲ್ಲವೂ ಮನೆಯಿಂದಲೇ, ಮನೆಯಲ್ಲಿರೋ ತ್ಯಾಜ್ಯ ವಸ್ತುಗಳಿಂದಲೇ (Waste Items) ತಯಾರಿಸಿದ್ದು ಅಂದ್ರೆ‌ ನೀವು ನಂಬಲೇಬೇಕು. ಕೋವಿಡ್ ಲಾಕ್ ಡೌನ್ (Covid- 19 Lockdown) ಬಳಿಕ ಮನೆಯಲ್ಲಿ ಲಾಕ್ ಆದ ಕಲಬುರಗಿ (Kalaburagi) ಜಿಲ್ಲೆಯ ಈ ಮಹಿಳೆ ಸುಮ್ಮನೆ ಕೂರದೇ ಏನಾದ್ರು ಸಾಧನೆ ಮಾಡಬೇಕು ಅಂತಾ ನಿರ್ಧರಿಸಿದ್ದರು.‌ ಹಾಗಾಗಿ ಮನೆಯಲ್ಲಿಯೇ ಕೆಲಸಕ್ಕೆ ಬಾರದ ನಿರುಪಯುಕ್ತ ವಸ್ತುಗಳಿಗೆ ಶೇಪ್ ಕೊಡಲು ಮುಂದಾದರು.

    ನೋ ವೇಸ್ಟೇಜ್ ಅಂತಾರೆ ಮೀನಾಕ್ಷಿ!
    ಹೌದು, ಹೀಗೆ ಮನೆಯಲ್ಲಿ ನಿರುಪಯುಕ್ತ ವಸ್ತುಗಳಲ್ಲಿ ಸುಂದರ ಕಲೆಯನ್ನು ಮಾಡುತ್ತಿರುವ ಇವರ ಹೆಸರು ಮೀನಾಕ್ಷಿ ಗುತ್ತೇದಾರ ಅಂತಾ. ಕಲಬುರಗಿ ನಗರದ ಪಿ&ಟಿ ಬಡಾವಣೆಯ ನಿವಾಸಿ.  ಮೊದಲ ಹಂತದಲ್ಲಿ ಬೊಂಬೆ, ಹೂವು ಸೇರಿ ಹಲವು ಅಲಂಕಾರಿಕ ವಸ್ತುಗಳು ತಯಾರಿಸಿದ್ದು ಇದೀಗ ಮೀನಾಕ್ಷಿ ಅವರ ಮನೆ ಮಿನಿ‌ ಮ್ಯೂಸಿಯಂ ಆಗಿ ಬದಲಾಗಿದೆ.

    ಇದನ್ನೂ ಓದಿ: Kalaburgi Students: ಒಂದಲ್ಲ, ಎರಡೂ ಕೈಯಲ್ಲಿ ಬರೀತಾರೆ ಇಲ್ಲಿನ ಸ್ಟೂಡೆಂಟ್ಸ್!

    ವಿಧ ವಿಧದ ಡಿಸೈನ್
    ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರುವ ಮೀನಾಕ್ಷಿ ಅವರು, ಇದೀಗ ಕಸದಿಂದ ರಸವನ್ನು ತೆಗೆಯುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ. ಮನೆಗಳಲ್ಲಿ ಉಪಯೋಗಕ್ಕೆ ಬಾರದ ಕಾಗದ, ಬಟ್ಟೆ, ಕಾಡ್೯ ಬೋಡ್೯, ಪ್ಲಾಸ್ಟಿಕ್ ಹಾಳೆ, ದಾರದಿಂದ ಗಣೇಶ, ಹೂವು, ಬಳೆಗಳಂತಹ ಕಲಾಕೃತಿಗಳನ್ನು ರಚಿಸಿದ್ದಾರೆ.

    ಅರಸಿ ಬಂದ ಅವಾರ್ಡ್!
    ಮೀನಾಕ್ಷಿ ಇವರ ಈ ಪ್ರತಿಭೆ ಕಂಡು ಕರ್ನಾಟಕ ಚೇತನ ಪ್ರಶಸ್ತಿ, ರಾಷ್ಟ್ರೀಯ ವಚನ ಸಂಜೀವಿನಿ, ಚಿತ್ರಸಂತೆ ಬೆಂಗಳೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ.‌

    ಮೀನಾಕ್ಷಿ ಅವರ ಸಂಪರ್ಕ ಸಂಖ್ಯೆ: 90350 77767

    ಇದನ್ನೂ ಓದಿ: North Karnataka Film: ಈತ ಗಿರಿನಾಡ್ ಪ್ರೇಮಿ! ಉತ್ತರ ಕರ್ನಾಟಕದ ಪ್ರತಿಭೆಗಳ ಹೊಸ ಸಿನಿಮಾ

    ಮನೆಯೇ ಮ್ಯೂಸಿಯಂ!
    ಒಟ್ಟಿನಲ್ಲಿ ಮೀನಾಕ್ಷಿ ಗುತ್ತೇದಾರ್ ಅವರ ಕಲೆ ಮೇಲಿನ ಆಸಕ್ತಿ, ಪರಿಶ್ರಮ ಇದೆಲ್ಲವೂ ಮನೆಯನ್ನೇ ಮ್ಯೂಸಿಯಂ ಮಾಡಿ ಬಿಟ್ಟಿದೆ. ಕೆಲಸವಿಲ್ಲ‌ ಅನ್ನೋ ಕೊರಗಿನಿಂದ ಸುಮ್ಮನಿರದೇ ಅವ್ರು ಮಾಡಿ ತೋರಿಸಿದ ಸಾಧನೆ ಕಲಾಸಕ್ತರು ಬೆಕ್ಕಸ ಬೆರಗಾಗುವಂತೆ ಮಾಡಿದೆ.

    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:ಗುರುಗಣೇಶ ಡಬ್ಗುಳಿ
    First published: