• Home
 • »
 • News
 • »
 • kalburgi
 • »
 • Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!

Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಗಳಿಗೆ ಮಂಚವನ್ನ ಉಡುಗೊರೆ ಮಾಡಿದ್ರೆ ಕೆಡುಕಾಗುತ್ತೆ ಎನ್ನುವ ನಂಬಿಕೆ ಈ ಊರವರಲ್ಲಿದೆ. ಇನ್ನು ಮದುವೆಯಾಗಿ ಮಕ್ಕಳಾದ್ಮೇಲೆ ತೊಟ್ಟಿಲನ್ನೂ ಸಹ ಇವ್ರು ಉಡುಗೊರೆ ಕೊಡಲ್ಲ.

 • Share this:

  ಕಲಬುರಗಿ: ನಮ್ ಮಗಳ ಮದುವೆಗೆ ಏನ್ ಉಡುಗೊರೆ ಕೊಡೋಣ? ನಾಡಿದ್ದು ನಾಮಕರಣ ಇದೆ, ಒಂದ್ ತೊಟ್ಟಿಲನ್ನೇ ಕೊಡೋಣ್ವಾ? ಹೀಗೆ ಮನೆಮಕ್ಕಳಿಗೆ ಉಡುಗೊರೆ ಕೊಡೋದು ಅಂತ ಬಂದ್ರೆ ಏನೆಲ್ಲ ಹೊಳೆಯುತ್ತೆ! ಏನೆಲ್ಲ ಗಿಫ್ಟ್ ಮಾಡೋಣ ಅನಿಸುತ್ತೆ ಅಲ್ವಾ? ಆದ್ರೆ ಇಲ್ಲೊಂದು ಊರಿದೆ. ಮನೆ ಮಕ್ಕಳ ಮದುವೆ ನಾಮಕರಣಕ್ಕೆ ಮಂಚ ಮತ್ತು ತೊಟ್ಟಿಲನ್ನು ಮಾತ್ರ ಇವ್ರು ಗಿಫ್ಟ್ ಮಾಡೋದೇ ಇಲ್ಲ! ಉತ್ತರ ಕರ್ನಾಟಕ ಭಾಗದಲ್ಲಿ (Uttara Karnataka) ಮಗಳ ಮದುವೆಗೆ ಮಂಚ ಉಡುಗೊರೆ ಕೊಡೋದು ವಿಶೇಷ. ಮಂಚ ಕೊಟ್ಟರೆ ಮಾತ್ರ ಮದುವೆ ಅನ್ನೋರೂ ಇದ್ದಾರೆ! ಆದ್ರೆ ಕಲಬುರಗಿಯ (Kalaburagi) ಆಳಂದ ತಾಲೂಕಿನ ತಂಬಾಕವಾಡಿ ಗ್ರಾಮದಲ್ಲಿ ಎಷ್ಟೇ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ರೂ ತವರು ಮನೆಯಿಂದ ಮಂಚ ಮಾತ್ರ ಗಿಫ್ಟ್ (Marriage Gift) ಮಾಡಲ್ಲ!


  ಮಗಳಿಗೆ ಮಂಚವನ್ನ ಉಡುಗೊರೆ ಮಾಡಿದ್ರೆ ಕೆಡುಕಾಗುತ್ತೆ ಎನ್ನುವ ನಂಬಿಕೆ ಈ ಊರವರಲ್ಲಿದೆ. ಇನ್ನು ಮದುವೆಯಾಗಿ ಮಕ್ಕಳಾದ್ಮೇಲೆ ತೊಟ್ಟಿಲನ್ನೂ ಸಹ ಇವ್ರು ಉಡುಗೊರೆ ಕೊಡಲ್ಲ.


  ಇದನ್ನೂ ಓದಿ: Kalaburagi: ಇದು ಪುದೀನಾ ಊರು! ರೈತರಿಗೆ ಸಿಕ್ತಿದೆ ಭರಪೂರ ಆದಾಯ!


  ಅರೇ! ಮನೆ ಮಗಳಿಗೆ ಮಂಚ, ತೊಟ್ಟಿಲು ಗಿಫ್ಟ್ ಮಾಡಿದ್ರೆ ಏನಾಗುತ್ತಪ್ಪ? ಇವ್ರ್ಯಾಕೆ ವಿಚಿತ್ರ ಸಂಪ್ರದಾಯ ಆಚರಿಸ್ತಾರೆ ಅಂತ ಅಂದ್ಕೊಂಡ್ರಾ? ಇದಕ್ಕೆಲ್ಲ ಕಾರಣ ತಂಬಾಕವಾಡಿ ಗ್ರಾಮದ ಆರಾಧ್ಯ ದೈವ ಜಕ್ಕಮೇಶ್ವರಿ ದೇವಿ. ಮಂಚವೇ ಆಗ್ಲಿ, ತೊಟ್ಟಿಲೇ ಆಗ್ಲಿ ಊರಿಂದ ಹೊರಗೆ ಹೋದ್ರೆ ಲಕ್ಷ್ಮಿಯೂ ಹೊರಹೋಗ್ತಾಳೆ ಅಂತ ಈ ಊರವರು ನಂಬ್ತಾರೆ.


  ಇದನ್ನೂ ಓದಿ: Kalaburagi: ಈ ಊರಲ್ಲಿ 2 ಅಂತಸ್ತಿನ ಮನೆ ಕಟ್ಟೋದೇ ಇಲ್ಲ!


  ಈ ನಂಬಿಕೆಗೆ ಆಧಾರವಾಗಿ ಒಂದು ಕಥೇನೂ ಇಲ್ಲಿ ಚಾಲ್ತಿಯಲ್ಲಿದೆ. ಹಿಂದೆ ತಂಬಾಕವಾಡಿಯ ಒಬ್ರು ಮಗಳ ಮದುವೆಗೆ ಮಂಚ ಕೊಡೊದಕ್ಕೆ ಅಂತಾ ಮನೆಯಲ್ಲಿ ಮಂಚ ತಂದಿಟ್ಟಿದ್ರಂತೆ. ಆದ್ರೆ ಮದುವೆ ಹತ್ತಿರ ಬರ್ತಿದ್ದಂತೆ ಆ ಮನೆಯಲ್ಲಿ ಸಾವು ಸಂಭವಿಸಿ ಮದುವೆಯೇ ನಿಂತು ಹೋಯ್ತಂತೆ. ಇದು ದೇವಿಯ ಶಾಪ ಎನ್ನುವ ಗ್ರಾಮಸ್ಥರು ನೂರಾರು ವರ್ಷಗಳಿಂದಲೂ ಮಂಚ, ತೊಟ್ಟಿಲನ್ನ ಗಿಫ್ಟ್ ಮಾಡ್ತಿಲ್ಲ. ನೀವೂ ಈ ಊರಿನ ವಧುವನ್ನ ಮದುವೆ ಆದ್ರೆ ಮಂಚ, ತೊಟ್ಟಿಲು ಬಿಟ್ಟು ಬೇರೆ ಏನ್ ಬೇಕಾದ್ರೂ ಗಿಫ್ಟ್ ಸಿಗಬಹುದು ನೋಡಿ!


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: