• Home
 • »
 • News
 • »
 • kalburgi
 • »
 • Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ

Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಅಚ್ಚರಿ ಅಂದ್ರೆ, ಇದೊಂದೇ ಗ್ರಾಮದ ಜನರಿಗೆ ಸರ್ಪ ಸಂಕಷ್ಟ ಎದುರಾಗಿರೋದಕ್ಕೆ ಕಾರಣ ಹುಡುಕ್ತಾ ಹೋದ್ರೆ ಕುತೂಹಲದ ವಿಷ್ಯ ತೆರೆದುಕೊಳ್ಳುತ್ತೆ!

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಕೈ ಬೆರಳಲ್ಲಾಗಿರೋ ಗಾಯ ತೋರಿಸುತ್ತಿರೋ ಮಹಿಳೆ, ಇನ್ನೊಂದೆಡೆ ಬೀದಿಗಳಲ್ಲಿ ಕೂತು ಆತಂಕದಲ್ಲಿರೋ ಗ್ರಾಮಸ್ಥರು. ಅತ್ತ ಹೊರಗೆ ಬರೋಕ್ ಭಯ, ಮನೆಯೊಳ್ಗೆ ಹೋಗೋಕೂ ಭಯ. ತ್ರಿಶಂಕು ಸ್ಥಿತಿಯಲ್ಲಿರೋ ಈ ಜನರ ಕಥೆ ಕೇಳಿದ್ರೆ ನೀವೂ ಕೂಡಾ ಆ ಗ್ರಾಮಕ್ಕೆ ಹೋಗಲಾರಿರಿ. ಅಷ್ಟಕ್ಕೂ ಆ ಗ್ರಾಮಕ್ಕೆ ಕಾಡ್ತಿರೋ ಸಮಸ್ಯೆ ಏನ್ ಗೊತ್ತಾ? ಅದುವೇ ನಿಗೂಢ. ಕಲಬುರಗಿಯ (Kalaburagi Village) ಚಿಂಚೋಳಿ ತಾಲೂಕಿನ (Chincholi)  ನಿಡಗುಂದ ಗ್ರಾಮವೇ ಈಗ ನಿಗೂಢ ಗ್ರಾಮವಾಗಿ ಬದಲಾಗಿದೆ.


  ರಾತ್ರಿ ಮಲಗಿ ಎದ್ದೇಳ್ಬೇಕಾದ್ರೆ, ಎಲ್ಲಾದ್ರೂ ಹೊರಗಡೆ ಹೋಗಿ ಬರ್ಬೇಕಾದ್ರೆ ಗಾಯಗಳಾಗಿರುತ್ತದೆ. ಕಚ್ಚಿದ ಅನುಭವವಾಗಲ್ಲ, ಕಚ್ಚಿದ್ದು ಏನೆಂದು ಗೊತ್ತಾಗಲ್ಲ. ಆದ್ರೆ ಗಾಯ, ಉರಿ ಎಲ್ಲನೂ ಅನುಭವ ಆಗುತ್ತೆ. ದವಾಖಾನೆಗೆ ಹೋಗ್ಲೇಬೇಕಾಗುತ್ತೆ. ಯಾವ ಟೈಮ್ಗೆ, ಎಲ್ಲಿ ಏನಾಗುತ್ತೆ ಅಂತ ಗೊತ್ತಾಗ್ದೇ ನಿಡಗುಂದ ಗ್ರಾಮದ ಮಂದಿ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಹಾವೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಅಂತಿದ್ದಾರೆ ಇಲ್ಲಿನ ಜನರು.


  ನಾಲ್ಕೈದು ತಿಂಗಳಲ್ಲಿ 600 ಜನರಿಗೆ ಹಾವು ಕಡಿತ?
  ನಿಜ, ಒಬ್ರು ಇಬ್ರಲ್ಲ, ನಿಡಗುಂದದಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ ಹೀಗೆ ಹಾವು ಕಚ್ಚಿಕೊಂಡವರ ಸಂಖ್ಯೆ ಹತ್ತತ್ರ ಆರುನೂರು ಜನರು! ಈ ಅಂಕಿ ಅಂಶ ನೋಡ್ತಿದ್ರೆ ಭಯಬೀಳದೇ ಇರಲು ಸಾಧ್ಯವೇ ಇಲ್ಲ. ಇಷ್ಟೇ ಅಲ್ಲ, ಈ ಹಾವಿನ ಕಡಿತದಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.


  ಕಂದಮ್ಮ ಸಾವು
  ಚೆನ್ನಾಗಿ ರಾತ್ರಿ ಊಟ ಮಾಡಿದ್ದ ಕಂದಮ್ಮ ಮರುದಿನ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಹೀಗಾಗಿ ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ದಾರೆ. ಕಚ್ಚಿದ ಅನುಭವವಾದಲ್ಲಿ ಸರ್ಕಾರಿ ಆಸ್ಪತ್ರೆ, ಆಯುರ್ವೇದಿಕ್ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.


  ಇದನ್ನೂ ಓದಿ: Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!


  ಕಣ್ಣಿಗೆ ಕಾಣ್ತಿಲ್ವಂತೆ ಹಾವು
  ಹಾವು ಕಡಿತಕ್ಕೆ ಒಳಗಾದ ಬಹುತೇಕ ಜನರಿಗೆ ಈ ಹಾವು ಕಣ್ಣಿಗೆ ಕಾಣ್ತಿಲ್ವಂತೆ. ಆದ್ರೆ ಅದು ಕಚ್ಚಿರೋ ಜಾಗದಲ್ಲಿ ಗಾಯದ ಗುರುತು ಆಗುತ್ತಂತೆ. ಉಪ್ಪು, ಖಾರ, ಬೇವಿನ ಎಲೆ ತಿಂದ್ರೆ ಎಲ್ಲವೂ ಸಪ್ಪೆ ಅನಿಸುತ್ತೆ. ಅಚ್ಚರಿ ಅಂದ್ರೆ, ಇದೊಂದೇ ಗ್ರಾಮದ ಜನರಿಗೆ ಸರ್ಪ ಸಂಕಷ್ಟ ಎದುರಾಗಿರೋದಕ್ಕೆ ಕಾರಣ ಹುಡುಕ್ತಾ ಹೋದ್ರೆ ಕುತೂಹಲದ ವಿಷ್ಯ ತೆರೆದುಕೊಳ್ಳುತ್ತೆ. ನಿಡಗುಂದದ ಗ್ರಾಮ ದೇವತೆಗೆ ಮೂರು ವರ್ಷಕ್ಕೊಮ್ಮೆ ಕಾರ್ಯ ಮಾಡ್ತಾರೆ. ಕಳೆದ ವರ್ಷ ಮಾಡಿದ ಕಾರ್ಯದಲ್ಲಿ ಲೋಪದೋಷ ಆಗಿದೆ, ಅದೇ ಕಾರಣಕ್ಕೆ ಹೀಗೆ ಹಾವು ಕಾಟ ಕೊಡ್ತಿದೆ ಅಂತಿದ್ದಾರೆ ಊರಿನ ಕೆಲವರು.


  ಇದನ್ನೂ ಓದಿ: Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!


  ಒಟ್ಟಿನಲ್ಲಿ ಪ್ರತಿನಿತ್ಯವೂ ಹಾವು ಕಚ್ಚುವ ಅನುಭವ ಆಗ್ತಿರೋದ್ರಿಂದ ಇಡಿ ಗ್ರಾಮಕ್ಕೆ ಗ್ರಾಮವೇ ಆತಂಕದಲ್ಲಿ ಕಾಲ ಕಳೆಯುತ್ತಿದೆ. ಹಾಗಾಗಿಯೆ ಆ ಗ್ರಾಮಕ್ಕೆ ಅಕ್ಕ ಪಕ್ಕದ ಊರುಗಳಿಂದ ಯಾರೂ ಕಾಲಿಡುತ್ತಿಲ್ಲ. ಆದ್ರೆ ಕಣ್ಣಿಗೆ ಹೊರತೂ ಇಂತಹದ್ದೊಂದು ಅನುಭವ ಆಗ್ತಿರೋದು ಗ್ರಾಮ ದೇವತೆಯ ಶಾಪವೋ ಅಥವಾ ಸಮೂಹ ಸನ್ನಿಯೋ ಅನ್ನೋದೆ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ!


  ವರದಿ:ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: