• Home
 • »
 • News
 • »
 • kalburgi
 • »
 • Kalaburagi: ಇದು ಪುದೀನಾ ಊರು! ರೈತರಿಗೆ ಸಿಕ್ತಿದೆ ಭರಪೂರ ಆದಾಯ!

Kalaburagi: ಇದು ಪುದೀನಾ ಊರು! ರೈತರಿಗೆ ಸಿಕ್ತಿದೆ ಭರಪೂರ ಆದಾಯ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವರ ಪ್ರತಿದಿನದ ಆದಾಯ ಸುಮಾರು 1500 ರಿಂದ 2 ಸಾವಿರ ರೂಪಾಯಿಯಂತೆ. ಹೆಚ್ಚು ಖರ್ಚು ಹೆಚ್ಚು ಆದಾಯ ಅನ್ನದೇ ಕಡಿಮೆ ಖರ್ಚಲ್ಲೇ ಹೆಚ್ಚು ಲಾಭ ಪಡೆಯೋ ಜಂಬಗಾ ಬಿ ಗ್ರಾಮದ ರೈತರಿಗೆ ಶಹಭಾಷ್ ಹೇಳೋಣ ಅಲ್ವೇ..

 • Share this:

  ಕಲಬುರಗಿ: ಕಣ್ಣು ಹಾಯಿಸಿದಲ್ಲೆಲ್ಲಾ ಘಮ್ಮೆನ್ನೋ ಪುದೀನಾ. ಊರ ತುಂಬಾ ಪುದೀನಾ ಬಿಟ್ರೆ ಬೇರೆ ಸೊಪ್ಪೇ ಇಲ್ಲ! ಇದ್ಯಾವ ಊರಿಗೆ ಬಂದ್ವಿ ಅಂದ್ಕೊಂಡ್ರಾ? ಈ ಊರಿನ ಎಲ್ರೂ ಸೊಪ್ಪನ್ನೇ ಬೆಳೀತಾರೆ! ಅದ್ರಲ್ಲೂ ಪುದೀನಾ ಬೆಳೆಯೋದು ಅಂದ್ರೆ ಇವ್ರಿಗೆ ಭಾರೀ ಉತ್ಸಾಹ. ಹಾಗೆ ನೋಡಿದ್ರೆ ಕಲಬುರಗಿ (Kalaburagi) ತೊಗರಿ ಕಣಜದ ನಾಡು, ಪುದೀನಾ ಬೆಳೆಯೋದು ಇಲ್ಲಿಗೆ ತೀರಾ ಹೊಸದು. ಆದ್ರೆ ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮದ ಜನರು ಚಿಕ್ಕ ಜಮೀನಿದ್ರೂ ಸಹ ಪುದೀನಾ (Kalaburagi Peppermint Village)  ಬೆಳೆಯುತ್ತಾರೆ. ಜೊತೆಗೆ ಇವರ ಬೆಳೆಗೆ ಕೊತ್ತಂಬರಿ, ಮೆಂತ್ಯ, ಪಾಲಕ್ ಸಹ ಸಾಥ್ ಕೊಡುತ್ತವೆ.


  ಜಂಬಗಾ ಬಿ ಗ್ರಾಮದ ರೈತರು ಅತೀ ಹೆಚ್ಚು ಪುದೀನಾ ಬೆಳೆಯೋಕೆ ಒಂದು ಕಾರಣ ಇದೆ! ಕಳೆದ 20 ವರ್ಷದ ಹಿಂದೆ ಈ ಊರಿನ ರೈತರೊಬ್ರು ಎಲ್ಲಿಂದ್ಲೋ ಪುದೀನಾ ಸೊಪ್ಪಿನ ಬೇರು ತಂದು ನಾಟಿ ಮಾಡಿದ್ರಂತೆ.


  ಇದನ್ನೂ ಓದಿ: Kalaburagi Chakli: ತಿಂದರೆ ತಿಂತಾನೇ ಇರ್ತೀರಿ ಕಲಬುರಗಿ ಚಕ್ಕುಲಿ! ಇದು ಫಾರೆನ್ ಟೂರ್​ಗೂ ಹೋಗುತ್ತೆ!


  ಅದರಿಂದ ಭರಪೂರ ಆದಾಯ ಸಿಕ್ತಂತೆ. ಅವರಿಂದ ಇನ್ಸ್ಪೈರ್ ಆದ ಇಡೀ ಊರಿಗೆ ಊರೇ ಅವ್ರನ್ನ ಫಾಲೋ ಮಾಡೋಕೆ ಶುರುಮಾಡ್ತು. ಈಗಂತೂ ಇಲ್ಲಿನ ಪುದೀನ ಸೊಪ್ಪು ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೂ ಕೂಡ ರಫ್ತಾಗ್ತಿದೆ.


  ಇದನ್ನೂ ಓದಿ: Gandhari Vidya: ಕಣ್ಣಿಗೆ ಬಟ್ಟೆ ಕಟ್ಕೊಂಡೇ ಓದ್ತಾಳೆ ಕಲಬುರಗಿಯ ಬಾಲಕಿ! ಇದು ಗಾಂಧಾರಿ ವಿದ್ಯೆ!


  ಪುದೀನಾ ಬೆಳೆದರೆ ಪ್ರತಿದಿನ ಆದಾಯ ಗ್ಯಾರೆಂಟಿ ಅಂತಾರೆ ಇಲ್ಲಿನ ರೈತರು. ರೋಗಬಾಧೆಯೂ ಕಡಿಮೆ, ಖರ್ಚೂ ಕಡಿಮೆ. ಆದ್ರೆ ಆದಾಯ ಮಾತ್ರ ಸಖತ್. ಇವರ ಪ್ರತಿದಿನದ ಆದಾಯ ಸುಮಾರು 1500 ರಿಂದ 2 ಸಾವಿರ ರೂಪಾಯಿಯಂತೆ. ಹೆಚ್ಚು ಖರ್ಚು ಹೆಚ್ಚು ಆದಾಯ ಅನ್ನದೇ ಕಡಿಮೆ ಖರ್ಚಲ್ಲೇ ಹೆಚ್ಚು ಲಾಭ ಪಡೆಯೋ ಜಂಬಗಾ ಬಿ ಗ್ರಾಮದ ರೈತರಿಗೆ ಶಹಭಾಷ್ ಹೇಳೋಣ ಅಲ್ವೇ..


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: