Vaishno Devi Temple: ಕರ್ನಾಟಕದಲ್ಲೇ ಇದೆ ವೈಷ್ಣೋದೇವಿ‌ ದೇಗುಲ!

ಅಮರಾಥನ ರೀತಿಯಲ್ಲಿ ಇಲ್ಲಿಯೂ ಸಹ ವರ್ಷದ ಪೂರ್ತಿ ಇರುವಂತೆ ಮಂಜುಗಡ್ಡೆಯಿಂದ ಅಮರನಾಥನ ಮೂರ್ತಿಯನ್ನು ನಿರ್ಮಿಸಲಾಗಿದೆ.

ದೇವಿಯ ದರ್ಶನ ಪಡೆಯಿರಿ

"ದೇವಿಯ ದರ್ಶನ ಪಡೆಯಿರಿ"

 • Share this:
  ಕಲಬುರಗಿ: ಕೆಂಬಣ್ಣದ ಕೋಟೆ. ಕೋಟೆಗೊಳಗೆ ಗುಹಾಂತರ ದೇವಾಲಯ.. ಅಲ್ಲಿದ್ದಾಳೆ ವೈಷ್ಣವರ ಆರಾಧ್ಯದೇವಿ. ಇಡೀ ಆಲಯವೇ ಆಗಿದೆ ಮಿನಿ ವೈಷ್ಣೋ ದೇವಿ‌ ದೇಗುಲ. ಜಮ್ಮು ಕಾಶ್ಮೀರವನ್ನೇ  ನೆನಪಿಸುತ್ತೆ ಈ ಗುಹಾಂತರ ದೇವಾಲಯ.
  ಹೌದು, ಜಮ್ಮು ಕಾಶ್ಮೀರ ದಲ್ಲಿರುವ ವೈಷ್ಣೋದೇವಿ ದೇವಸ್ಥಾನ ((Vaishnodevi Temple) ಹಿಂದುಗಳ ಧಾರ್ಮಿಕ ಸ್ಥಳದಲ್ಲಿ ಒಂದು‌. ಅಲ್ಲಿಗೆ ಹೋಗಿ ದೇವಿಯ ದರ್ಶನ ಮಾಡಿದ್ರೆ ನಮ್ಮ ಜೀವನ ಪಾವನವಾಗುತ್ತದೆ ಎಂಬುದು ಭಕ್ತರ ಅಪಾರ ನಂಬಿಕೆ. ಆದರೆ, ಅದು ಎಲ್ರಿಗೂ ಸಾಧ್ಯವಾಗೋ ವಿಚಾರವಲ್ಲ. ಅಂತಹವರು ಈ ಕರುನಾಡ ವೈಷ್ಣೋ ದೇವಿಯನ್ನ (Vaishnodevi Temple In Karnataka) ಕಣ್ತುಂಬಿಕೊಳ್ಳಬಹುದು.

  ಇಲ್ಲಿದೆ ಅಮರನಾಥ ಗುಹಾಲಯ!
  ಕಲಬುರಗಿಯಲ್ಲೂ ಅಮರನಾಥ ಗುಹಾಲಯವಿದೆ. ಅಮರಾಥನ ರೀತಿಯಲ್ಲಿ ಇಲ್ಲಿಯೂ ಸಹ ವರ್ಷದ ಪೂರ್ತಿ ಇರುವಂತೆ ಮಂಜುಗಡ್ಡೆಯಿಂದ ಅಮರನಾಥನ ಮೂರ್ತಿಯನ್ನು ನಿರ್ಮಿಸಲಾಗಿದೆ. ಅಂದಹಾಗೆ ಕರುನಾಡ ಈ ಮಿನಿ ವೈಷ್ಣೋ ದೇವಿ ದೇಗುಲ ಇರುವುದು ಕಲಬುರಗಿಯ ಹೊರವಲಯದಲ್ಲಿರುವ ಸೈಯದ್ ಚಿಂಚೋಳಿ ರಿಂಗ್ ರಸ್ತೆ ಬಳಿಯ ಗಬರಾದಿ ಲೇಔಟ್​ನಲ್ಲಿ.

  ಗಬರಾದಿ ಕುಟುಂಬದ ಕೊಡುಗೆ
  ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ಭಕ್ತರು ದೇವಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಈ ದೇಗುಲವನ್ನ ನಿರ್ಮಿಸಿದ್ದು ಗಬರಾದಿ ಕುಟುಂಬ. ವೈಷ್ಣೋದೇವಿ ಭಕ್ತರಾಗಿರುವ ಇವರು ನಾಲ್ಕು ವರ್ಷಗಳ ಸತತ ಪರಿಶ್ರಮದ ಬಳಿಕ ನಿರ್ಮಿಸಿದ್ದಾರೆ. ಇಲ್ಲಿಗೆ ಜೈಪುರದಿಂದ ತರಿಸಲಾದ ವೈಷ್ಣೋದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮೇಲೆ ಹತ್ತಲು ಮೆಟ್ಟಿಲುಗಳಿದ್ದರೂ, ಆಯಾಸವಾಗಬಹುದೆಂದು ಇಳಿಜಾರು ಹಾಗೂ ವೃದ್ಧರು ಮಕ್ಕಳಿಗಾಗಿ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ.

  Vaishno Devi Temple Kalaburagi
  ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ವಿವಿಧ ದೇವತೆಗಳು
  ಬೆಟ್ಟದ ಮೇಲೆ ಹತ್ತುವಾಗ ಗಣೇಶ, ಹನುಮಂತ, ಚಾಮುಂಡಿ ದೇವಿ ದರ್ಶನವಾಗುತ್ತದೆ. ಬೆಟ್ಟದ ನಡುವೆ ಪಾರ್ವತಿ, ವೈಷ್ಣವಿ, ಸರಸ್ವತಿ ದೇವಿಯ ಆಲಯದೊಳಗೆ ಪ್ರವೇಶ, ನಂತರದಲ್ಲಿ ದತ್ತಾತ್ರೇಯ, ಭೈರವ, ಕಾಳಿಕಾ ಮಾತೆ ಹೀಗೆ ಇತರೆ ದೇವರುಗಳು ದರ್ಶನ ಕೂಡ ನಿಮಗೆ ದೊರೆಯುತ್ತದೆ. ಅಲ್ಲದೆ ಒಳಗಡೆ ಜ್ಯೋತಿರ್ಲಿಂಗಗಳೂ ಇವೆ.

  ಇದನ್ನೂ ಓದಿ:

  ಭಕ್ತರ ನೆಚ್ಚಿನ ತಾಣ
  ಒಟ್ಟಿನಲ್ಲಿ ಕಲಬುರಗಿಯ ಈ ಮಿನಿ ವೈಷ್ಣೋದೇವಿ ದೇವಸ್ಥಾನ ನೋಡುವುದಕ್ಕೆ ಜಮ್ಮುವಿನ ವೈಷ್ಣೋದೇವಿ ದೇವಸ್ಥಾನ ಹೋಲುವುದರಿಂದ ಪಕ್ಕದ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಇದೊಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ.

  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
  Published by:ಗುರುಗಣೇಶ ಡಬ್ಗುಳಿ
  First published: